Saturday, October 10, 2026
Homeಜಿಲ್ಲಾಸುದ್ದಿದಾರದಹಳ್ಳಿ: ಮಹಾರುದ್ರ ದೇವಸ್ಥಾನದ ಸುತ್ತಮುತ್ತ ಕುಸಿದ ರಸ್ತೆ: ದುರಸ್ತಿಗೆ ಕೆಸವಳಲು ಗ್ರಾಮಸ್ಥರ ಆಗ್ರಹ

ದಾರದಹಳ್ಳಿ: ಮಹಾರುದ್ರ ದೇವಸ್ಥಾನದ ಸುತ್ತಮುತ್ತ ಕುಸಿದ ರಸ್ತೆ: ದುರಸ್ತಿಗೆ ಕೆಸವಳಲು ಗ್ರಾಮಸ್ಥರ ಆಗ್ರಹ

Telegram Group
Join Now

ಮೂಡಿಗೆರೆ: ಕೆಸವಳಲು ಗ್ರಾಮದ ಖ್ಯಾತ ದೇವಾಲಯ ಮಹಾರುದ್ರ ಹಾಗೂ ಈಶ್ವರ ದೇವಸ್ಥಾನಕ್ಕೆ ಹಾಗೂ ಸುಮಾರು 30 ಕ್ಕೂ ಹೆಚ್ಚು ಮನೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು ದಾರಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ ಕುಸಿತ ಗೊಂಡಿದ್ದು ದುರಸ್ತಿಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ

ರಸ್ತೆ ಕುಸಿದ ಹಿನ್ನಲೆ ಸಂಚಾರಕ್ಕೆ ಅಡಚಣೆಯಾಗಿದ್ದು ಎರಡು ವಾಹನಗಳು ಮುಖಮುಖಿಯಾದಲ್ಲಿ ವಾಹನಗಳು ಮಾರು ಗಟ್ಟಲೆ ಹಿಂದೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ರಸ್ತೆ ಉಪಯೋಗಿಸಿ ಅನೇಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಸಂಚಾರುಸುತ್ತಿದ್ದೂ ರಸ್ತೆ ಯೋಗ್ಯ ವಾಗಿಲ್ಲ ಎಂಬುದು ಗ್ರಾಮಸ್ಥರ ಅಸಮಾಧಾನ ವಾಗಿದೆ. ಯುವತಿಯರು ದ್ವಿ ಚಕ್ರ ವಾಹನ ಓಡಿಸಲು ಭಯ ಬಿದ್ದಿದ್ದಾರೆ.

ಮಳೆ ಪರಿಣಾಮ ರಸ್ತೆ ಮಣ್ಣು ಕುಸಿದು ಅಂಚಿಗೆ ಬಂದಿದೆ ಇತ್ತೀಚಿನ ದಿನಗಳಲ್ಲಿ ಸ್ವತಃ ಗ್ರಾಮಸ್ಥರೆ ತ್ತಾತ್ತ್ಕಾಲಿಕ ರಸ್ತೆ ದುರಸ್ತಿ ಕಾರ್ಯ ಮಾಡಿದ್ದರು ಬೆಂಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ ಸಂಪೂರ್ಣ ಹಾಳಾಗಿದ್ದು, ಇನ್ನಾದರೂ ಎಚ್ಚೆತ್ತು ಕೊಂಡು ರಸ್ತೆ ದುರಸ್ಥಿ ಕಾರ್ಯ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!