Sunday, August 9, 2026
Homeಜಿಲ್ಲಾಸುದ್ದಿಕೊಪ್ಪ: ಗ್ರಂಥಾಲಯದೊಳಗೆ ಕಾಣಿಸಿಕೊಂಡ ನಾಗರ ಹಾವು

ಕೊಪ್ಪ: ಗ್ರಂಥಾಲಯದೊಳಗೆ ಕಾಣಿಸಿಕೊಂಡ ನಾಗರ ಹಾವು

Telegram Group
Join Now

ಕೊಪ್ಪ: ಪಟ್ಟಣದ ಎಲ್ಐಸಿ ಕಚೇರಿ ಸಂಪರ್ಕಿಸುವ ರಸ್ತೆಯಲ್ಲಿರುವ ಕೊಪ್ಪ ಶಾಖಾ ಗ್ರಂಥಾಲಯದೊಳಗೆ ನಾಗರ ಹಾವು ಕಾಣಿಸಿಕೊಂಡು ಶನಿವಾರ ಆತಂಕ ಸೃಷ್ಟಿಸಿತ್ತು.

ಗ್ರಂಥಾಲಯದ ತೆರೆದ ಕಿಟಕಿ ಮೂಲಕ ಒಳ ನುಗ್ಗಿದ ಹಾವು, ಪುಸ್ತಕಗಳ ರ‍್ಯಾಕ್‌ನಲ್ಲಿ ಸೇರಿಕೊಂಡಿತ್ತು.

ಶನಿವಾರ ಮಧ್ಯಾಹ್ನದ ವೇಳೆ ಪುಸ್ತಕದ ಸಾಲಿನ ನಡುವೆ ಸದ್ದು ಆಲಿಸಿದ ಗ್ರಂಥಪಾಲಕಿ ಚೈತ್ರಾ ಅವರು, ರ‍್ಯಾಕ್‌ ಸಮೀಪ ಹೋಗಿ ಗಮನಿಸಿದಾಗ ನಾಗರ ಹಾವು ಇರುವುದು ಗೊತ್ತಾಗಿದೆ.

ಬಳಿಕ, ತಾಲ್ಲೂಕಿನ ಕುದುರೆಗುಂಡಿಯ ಉರಗ ರಕ್ಷಕ ಹರೀಂದ್ರ ಅವರಿಗೆ ಚೈತ್ರಾ ಮಾಹಿತಿ ನೀಡಿದರು. ನಾಲ್ಕು ಅಡಿ ಉದ್ದವಿದ್ದ ಹಾವನ್ನು ಸೆರೆ ಹಿಡಿದ ಹರೀಂದ್ರ ಅದನ್ನು ಕಾಡಿನ ಪ್ರದೇಶಕ್ಕೆ ಸ್ಥಳಾಂತರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments