ಕೊಪ್ಪ: ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದಿಂದ ಕೊಪ್ಪ ರೈತ ಒಕ್ಕೂಟದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.
ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಗೌರವಾಧ್ಯಕ್ಷರಾದ ರಾಮಸ್ವಾಮಿ ಶೆಟ್ಟಿಗದ್ದೆ ಮಾತನಾಡಿ ಕಸ್ತೂರಿ ರಂಗನ್ ವರದಿ ಏಳನೇ ಭಾರೀ ಕರಡು ಸೂಚನೆ ಹೊರಡಿಸಿದ್ದು, ಹಿಂದೆ ಸಾವಿರಾರು ಜನ ರೈತರು ಅರ್ಜಿ ಸಲ್ಲಿಸಿದ್ದು ಅದರ ಯಾವ ಜಾಗವೂ ಬಿಟ್ಟಿಲ್ಲ.ಪಕ್ಷಗಳ ನಡುವೆ ಭಿನ್ನಾಭಿಪ್ರಾಯದ ಹೇಳಿಕೆಗಳು ಪ್ರಯೋಜನ ಇಲ್ಲ. ಈ ಹಿಂದೆ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮಸಭೆ ಮಾಡಿ ಅಲ್ಲಿಯೂ ಆಕ್ಷೇಪಣೆ ಅರ್ಜಿ ಸಲ್ಲಿಸಿದ್ದೆವೂ ಅದು ಕೂಡ ಪ್ರಯೋಜನ ಆಗಿಲ್ಲ.
ಕೆಲ ರಾಜಕೀಯ ನಾಯಕರಲ್ಲಿ ಇಚ್ಘಾಶಕ್ತಿ ಕೊರತೆಯಿದೆ ಎಂದು ಅನಿಸುತ್ತಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ಸಂಬಂಧ ಪಟ್ಟ ಇಲಾಖೆಗಳಿಗೆ ಭೇಟಿ ನೀಡಿ ಒಂದಷ್ಟು ಜಾಗಗಳನ್ನು ಬಿಡಿಸಿ ಕೊಂಡಿದ್ದಾರೆ.
ಕಸ್ತೂರಿ ರಂಗನ್ ಗಿಂತ ಇಕೋ ಸೆನ್ಸಿಟೀವ್ ಬಹಳ ಡೇಂಜರ್ ಆಗಿದೆ ಜನ ಇದರ ಬಗ್ಗೆ ಅರ್ಥ ಮಾಡಿಕೊಂಡು ಜಾಗೃತರಾಗಬೇಕಿದೆ.ನಾವು ಆಕ್ಷೇಪಣೆ ಸಲ್ಲಿಸಲು ವೆಬ್ ಸೈಟ್ ಮಾಡಿದ್ದು ಜನರು ಇದರ ಪ್ರಯೋಜನ ಪಡೆದು ಬಹಳ ಸಂಖ್ಯೆಯಲ್ಲಿ ಆಕ್ಷೇಪಣೆ ಸಲ್ಲಿಸಿ ನಮ್ಮ ಹೋರಾಟಕ್ಕೆ ಬೆಂಬಲಿಸಿ ನಾವು ಮುಂದಿನ ದಿನಗಳಲ್ಲಿ ಕ್ಷೇತ್ರಗಳಲ್ಲಿ ಹೋರಾಟವೂ ಮಾಡಿ, ಕಾನೂನು ಹೋರಾಟವನ್ನು ಸುಪ್ರೀಂಕೋರ್ಟ್ ನಲ್ಲಿ ಮಾಡಲಿದ್ದೇವೆ,
ಆರು ಜಿಲ್ಲೆಯ ಎಂಪಿಗಳು ಹೋಗಿ ಕಸ್ತೂರಿ ರಂಗನ್ ವರದಿಯನ್ನು ಅರ್ಥ ಮಾಡಿಕೊಂಡು ಸಂಬಂಧ ಪಟ್ಟವರನ್ನು ಭೇಟಿ ಮಾಡಿ ಮನವಿ ಸಲ್ಲಿಸಬೇಕು ಎಂದರು.
ನಂತರ ಮಾತನಾಡಿದ ಸತೀಶ್ ಅದ್ದಡ ತಾವು ಮಾಡಿರುವ ವೆಬ್ ಸೈಟ್ ನಲ್ಲಿ ಹೇಗೆ ಆಕ್ಷೇಪಣೆ ಸಲ್ಲಿಸಬೇಕು ಎಂಬ ಮಾಹಿತಿ ನೀಡಿ, ಈ ವಿಚಾರದಲ್ಲಿ ಯಾವುದೇ ರಾಜಕಾರಣ ಬೇಡ.ರೈತರ ಸಂಕಷ್ಟಕ್ಕೆ ಯಾವ ಪಕ್ಷವೂ, ಯಾವ ನಾಯಕರು ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ.ಈ ಹಿಂದೆ ಫಾರ್ಮೆಟ್ ಮಾಡಿ ಹಂಚಿದ್ದೆವು ಅದರಲ್ಲಿ ಕೆಲವು ವಾಪಸ್ ಬರಲಿಲ್ಲ.ರೈತ ಒಕ್ಕೂಟದ ಲಿಂಕ್ ನಲ್ಲಿ ನಮ್ಮ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್, ಹೆಸರು, ಪೋನ್ ನಂಬರ್ ಕೇಳುತ್ತದೆ ಎಲ್ಲಾವನ್ನು ತುಂಬಿದ ನಂತರ ಆಕ್ಷೇಪಣೆ ಸಲ್ಲಿಸಬಹುದು ಅದಾದ ನಂತರ ಮತ್ತೆ ಅದರಲ್ಲಿ ಕೇಂದ್ರ ಪರಿಸರ ಇಲಾಖೆಗೆ ಇಲಾಖೆಗೆ,ಡಿಸಿ, ಎಂಪಿ, ರಾಜ್ಯ ಸರ್ಕಾರ,ಎಲ್ಲರಿಗೂ ಮೇಲ್ ಮೂಲಕವೂ ಆಕ್ಷೇಪಣೆ ತಲುಪಿಸಬಹುದು ಎಂದರು.
ಕಾರ್ಬೈಲ್ ಮಂಜುನಾಥ್ ಎಲ್ಲರನ್ನೂ ಸ್ವಾಗತಿಸಿದರು. ಈ ಸಂಧರ್ಭದಲ್ಲಿ ರೈತ ಒಕ್ಕೂಟದ ಗೌರವಾಧ್ಯಕ್ಷರು ರಾಮಸ್ವಾಮಿ ಶೆಟ್ಟಿಗದ್ದೆ, ತಾಲೂಕು ರೈತ ಒಕ್ಕೂಟದ ಅಧ್ಯಕ್ಷರಾದ ರಾಘವೇಂದ್ರ, ಸತೀಶ್ ಅದ್ದಡ, ಕಿರಣ್ ಮಡಬಳ್ಳಿ, ಪ್ರದೀಪ್ ಇದ್ದರು.
ವರದಿ: ಶಶಿ ಬೆತ್ತದಕೊಳಲು
