Wednesday, September 16, 2026
Homeಜಿಲ್ಲಾಸುದ್ದಿRation Card E-KYC ಮಾಡಿಸಲು ಗ್ರಾಮೀಣ ಜನರ ಪರದಾಟ: ಕೂಲಿ ಕೆಲಸ ಬಿಟ್ಟು 1 ವಾರದಿಂದ...

Ration Card E-KYC ಮಾಡಿಸಲು ಗ್ರಾಮೀಣ ಜನರ ಪರದಾಟ: ಕೂಲಿ ಕೆಲಸ ಬಿಟ್ಟು 1 ವಾರದಿಂದ ಅಲೆದಾಟ!

Telegram Group
Join Now

ಕಳಸ: ರಾಜ್ಯದಲ್ಲಿ ಪಡಿತರ ಚೀಟಿ ಇ-ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿರುವುದರಿಂದ ಗ್ರಾಮೀಣ ಭಾಗದ ಜನಸಾಮಾನ್ಯರು, ಕೂಲಿ ಕಾರ್ಮಿಕರು ಮತ್ತು ವೃದ್ಧರು ತೀವ್ರ ಪರದಾಟ ನಡೆಸುತ್ತಿದ್ದಾರೆ. ಕೂಲಿ ಕೆಲಸ ಬಿಟ್ಟು ಕೇಂದ್ರಗಳ ಮುಂದೆ ವಾರದಿಂದ ಪರದಾಡುತ್ತಿದ್ದಾರೆ.

ಹೌದು .. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ತಲೆದೋರಿದ ಸಂಕಷ್ಟ ನಿರಂತರ  ಸರ್ವರ್ ಸಮಸ್ಯೆಯಿಂದ ಪಡಿತರ ಅಕ್ಕಿ ಪಡೆಯಲು ಆಗದೇ ಹೈರಾಣಾಗಿ ಹೋಗಿದ್ದಾರೆ. ಗ್ರಾಮಗಳಾದ ಬಲಿಗೆ, ಚಿಕ್ಕನಕೊಡುಗೆ, ತುರ, ಹೊನ್ನೆಕಾಡು, ಹೊರನಾಡು ಸೇರಿದಂತೆ ಗ್ರಾಮದಲ್ಲಿರುವ ನ್ಯಾಯಬೆಲೆ ಅಂಗಡಿ ಮುಂದೆ ಜನರು ಸಾಲುಗಟ್ಟಿ ನಿಂತಿದ್ದು, ಇ-ಕೆವೈಸಿ ಮಾಡಿಲು ಗಂಟೆಗಟ್ಟಲೇ ಕಾದು ನಿಂತಿದ್ದಾರೆ.

KYC ಮಾಡಿಸಲು ಶಾಲೆಗೆ ರಜೆ ಹಾಕಿ ಮಕ್ಕಳೊಂದಿಗೆ ಬಂದ ಪೋಷಕರು ಕೂಲಿ ಕೆಲಸವೂ ಇಲ್ಲ, ಅತ್ತ KYCಯೂ ಆಗದೆ ದಿನದ ಆದಾಯ ನಷ್ಟ ಅನುಭವಿಸುತ್ತಿದ್ದು  ಗ್ರಾಮ ಮಟ್ಟದಲ್ಲೇ ವಿಶೇಷ KYC ಶಿಬಿರ ಆಯೋಜಿಸಲು ಸಾರ್ವಜನಿಕರ ಆಗ್ರಹ ಪಡಿಸಿದ್ದು ಕಳೆದ ಒಂದು ವಾರದಿಂದ ಸರ್ವರ್ ಸಮಸ್ಯೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಬದಲಿ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!