ಬೆಂಗಳೂರು: ಕಾಂಗ್ರೆಸ್ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನ ಭೇಟಿ ಮಾಡಿದ್ದಾರೆ. ಗಾಯತ್ರಿ ಶಾಂತೇಗೌಡರ ಈ ಭೇಟಿ ಹಲವು ಕುತೂಹಲಗಳನ್ನ ಮೂಡಿಸಿದೆ.
.ಮಹಿ ಳಾ ಕೋಟಾದಡಿ ಸಚಿವ ಸ್ಥಾನಕ್ಕೆ ಎಂಎಲ್ಸಿ ಗಾಯತ್ರಿ ಶಾಂತೇಗೌಡರು ಪ್ರಯತ್ನ ನಡೆಸ್ತಿದ್ದಾರೆ ಅಂತ ಹೇಳಲಾಗ್ತಿದೆ.ಬೆಂಗಳೂರಿನ ಸದಾಶಿವನಗರದಲ್ಲಿರೋ ಮುಖ್ಯಮಂತ್ರಿಗಳ ನಿವಾಸದಲ್ಲಿ ಗಾಯತ್ರಿ ಶಾಂ ತೇಗೌಡ ಭೇಟಿ ಮಾಡಿ ಚರ್ಚಿಸಿದ್ದಾರೆ ಅಂತ ಗೊತ್ತಾಗಿದೆ.ಈ ಮೊದಲು ಡಿ. ಕೆ ಶಿವಕುಮಾರ್ ಅವ್ರ ಸಚಿವ ಸಂಪುಟಕ್ಕೆ ಗಾಯತ್ರಿ ಶಾಂತೇಗೌಡರ ಫಿಕ್ಸ್ ಅಂತಾನೇ ಹೇಳಲಾಗಿತ್ತು.ನೂತನ ಸಚಿವರ ಪ್ರ ಮಾಣ ವಚನ ಸ್ವೀಕಾರ ಪಟ್ಟಿಯಲ್ಲಿ ಹೆಸರು ಕೂಡ ಘೋಷಣೆ ಆಗಿತ್ತು. ಆದ್ರೆ, ಕೊನೆ ಕ್ಷಣದಲ್ಲಿ ಕಾರಣಾಂತರಗಳಿಂದ ಗಾಯತ್ರಿ ಶಾಂತೇಗೌಡರ ಹೆಸರು ಕೈ ಬಿಡಲಾಗಿತ್ತು.
ಡಿಕೆಶಿ ಅವರ ಸಚಿವ ಸಂಪುಟದಲ್ಲಿ ಮಹಿಳಾಕೋಟ ಬಾಕಿ ಇದ್ದು ಮಹಿಳಾ ಕೋಟಾದಡಿ ಸಚಿವ ಸ್ಥಾನಕ್ಕೆ ಎಂಎಲ್ಸಿ ಗಾಯತ್ರಿ ಶಾಂತೇಗೌಡರ ಪ್ರಯತ್ನ ನಡೆಸುತ್ತಿದ್ದಾರೆ.ಕಾಂಗ್ರೆಸ್ನ ಸಂಘಟನಾ ಸೃಜನಾ ಅಭಿಯಾನ ಹಿನ್ನೆಲೆ ಸುರ್ಜೇ ವಾಲ ಹಾಗೂ ವೇಣುಗೋಪಾಲ್ ಬೆಂಗಳೂರಿಗೆ ಆಗಮಿಸಿದ್ದಾರೆ.ಈ ವೇಳೆ ಗಾಯತ್ರಿ ಶಾಂತೇಗೌಡರ ಸಿಎಂ ಡಿಕೆ ಶಿವಕುಮಾರ್ ಅವ್ರನ್ನ ಭೇಟಿ ಮಾಡಿರೋದು ಹಲವು ಕುತೂಹಲಗಳನ್ನ ಮೂಡಿಸಿ ರೋದಂತು ಸತ್ಯ…
