ಬೆಂಗಳೂರು: ಇನ್‌ಸ್ಪೆಕ್ಟರ್ ಮಾಡಬಾರದ್ದು ಏನೂ ಮಾಡಿಲ್ಲ, ಅವರ ಲಾಂಗ್ವೇಜ್‌ನಲ್ಲಿ ಹೇಳಿದ್ದಾರೆ ಎಂದು ಹೇಳುವ ಮೂಲಕ ಸಿಎಂ ಡಿಕೆ ಶಿವಕುಮಾರ್ ಧನಂಜಯ್ ಪರ ಬ್ಯಾಟಿಂಗ್ ಮಾಡಿದ್ದಾರೆ.
ಟಿ. ನರಸೀಪುರದಲ್ಲಿ ಗಣೇಶ ಮೆರವಣಿಗೆ ವಿಚಾರವಾಗಿ ಜನರಿಗೆ ವಾರ್ನಿಂಗ್ ನೀಡಿದ್ದ ಇನ್‌ಸ್ಪೆಕ್ಟರ್ ಧನಂಜಯ್ ವಿರುದ್ಧ ಕ್ರಮಕ್ಕೆ ಬಿಜೆಪಿ ಒತ್ತಾಯಿಸಿರುವ ವಿಚಾರವಾಗಿ ಅವರು ಪ್ರತಿಕ್ರಿಯಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇನ್‌ಸ್ಪೆಕ್ಟರ್ ಮಾಡಬಾರದ್ದು ಏನೂ ಮಾಡಿಲ್ಲ. ಅವರ ಭಾಷೆಯಲ್ಲಿ ಏನು ಹೇಳಬೇಕೋ ಅದನ್ನು ಹೇಳಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದವರು ಅವರೇ ತಾನೇ ಎಂದು ಹೇಳಿದ್ದಾರೆ.
