ಸಕಲೇಶಪುರ: ಮೂರು ಕಾಡುಕೋಣಗಳು ರಸ್ತೆ ದಾಟುತ್ತಿದ್ದ ಘಟನೆ ಹೆತ್ತೂರಿನಿಂದ ಸಕಲೇಶಪುರಕ್ಕೆ ಬರುವ ಮಾರ್ಗ ಮಧ್ಯ ಕಂಡುಬಂದಿದೆ.
ಹೌದು .. ಕಾಡುಕೋಣಗಳು ರಸ್ತೆ ದಾಟುವ ದೃಶ್ಯ ಪತ್ರಕರ್ತ ಪ್ರದೀಪ್ ಬಾಳ್ಳುಪೇಟೆ ಅವರ ಮೊಬೈಲ್ ನಲ್ಲಿ ಸೆರೆಯಾಗಿವೆ.
ಮಂಗಳವಾರ ತಡರಾತ್ರಿ ಸುದ್ದಿ ಸಂಗ್ರಹಣೆಗೆ ತೆರಳಿ ವಾಪಸ್ ಆಗುವಾಗ ಹೆತ್ತೂರಿನಿಂದ ಸಕಲೇಶಪುರಕ್ಕೆ ಬರುವ ಮಾರ್ಗ ಮಧ್ಯ ಮೂರು ಕಾಡುಕೋಣಗಳು ರಸ್ತೆ ದಾಟುತ್ತಿದ್ದನ್ನು ಸೆರೆಹಿಡಿದಿದ್ದಾರೆ.
ಮಲೆನಾಡು ಭಾಗದಲ್ಲಿ ಕಾಡಾನೆಗಳ ಜೊತೆಗೆ ಕಾಡುಕೋಣಗಳ ಹಾವಳಿ ಹೆಚ್ಚಾಗಿದ್ದು ಸಾರ್ವಜನಿಕರು ಹಾಗೂ ವಾಹನ ಸವಾರರು ರಾತ್ರಿ ವೇಳೆ ಎಚ್ಚರಿಕೆಯಿಂದ ಓಡಾಡುವಂತೆ ಮನವಿ ಮಾಡಿದ್ದಾರೆ.
