Tuesday, February 10, 2026
Homeಜಿಲ್ಲಾಸುದ್ದಿಜಯಪುರ - ಶೃಂಗೇರಿ ಸರ್ಕಲ್ ವಿಸ್ತರಿಸಲು ಹೇಳಿದರೂ ಯಾರೂ ಗಮನಹರಿಸುತ್ತಿಲ್ಲ: ಅನಿಲ್ ಡಿಮೆಲ್ಲೊ ಕಿಡಿ!

ಜಯಪುರ – ಶೃಂಗೇರಿ ಸರ್ಕಲ್ ವಿಸ್ತರಿಸಲು ಹೇಳಿದರೂ ಯಾರೂ ಗಮನಹರಿಸುತ್ತಿಲ್ಲ: ಅನಿಲ್ ಡಿಮೆಲ್ಲೊ ಕಿಡಿ!

ಜಯಪುರ : ಚಿಕ್ಕಮಗಳೂರು,ಬಾಳೆಹೊನ್ನೂರು, ಜಯಪುರ ಮಾರ್ಗವಾಗಿ ಶೃಂಗೇರಿಯ ಪ್ರಸಿದ್ದ ಶಾರದಾ ಪೀಠಕ್ಕೆ ದಿನವಿಡೀ ಸಾವಿರಾರು ಸಂಖ್ಯೆಯಲ್ಲಿ ಸರ್ಕಾರಿ, ಹಾಗೂ ಖಾಸಗಿ ವಾಹನಗಳು ಚಲಿಸುತ್ತಿದ್ದು ಜಯಪುರ – ಶೃಂಗೇರಿ ಸರ್ಕಲ್ ತುಂಬಾ ಕಿರಿದಾಗಿರುವ ಕಾರಣ, ಪದೇ ಪದೇ ಪರಿಣಿತ ಚಾಲಕರು ಕೂಡ ಪರದಾಡುವಂತಾಗಿದೆ. ಈ ಬಗ್ಗೆ ಅನೇಕ ಬಾರಿ ಸರ್ಕಲ್ ವಿಸ್ತರಣೆ ಮಾಡಲು ಮನವಿ ಮಾಡಿದ್ದರು ಸಂಬಂಧ ಪಟ್ಟವರು ಗಮನ ವಹಿಸಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಅನಿಲ್ ಡಿಮೆಲ್ಲೊ ದೂರಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಿರಿದಾಗಿರುವ ಸರ್ಕಲ್ ನಿಂದಾಗಿ ಬಸ್ ಲಾರಿ ಸೇರಿದಂತೆ ಲಘು ವಾಹನಗಳು ಸಿಕ್ಕಿ ಹಾಕಿಕೊಳ್ಳುತ್ತಿದ್ದು, ಪಾದಚಾರಿಗಳು ಜೀವ ಕೈಯ್ಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ಎದುರಾಗಿದೆ.

ಗ್ರಾಮಸ್ಥರು ಇದರ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಹಲವು ಭಾರಿ ಮನವಿ ಮಾಡುತ್ತಾ ಬಂದಿದ್ದರು ಈ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದ್ದು ಇದರ ಹಿಂದೆ ಪ್ರಭಾವಿಗಳ ಕೈವಾಡವಿದೆ ಎನಿಸುತ್ತಿದೆ ಹಿಂದಿನ ಶಾಸಕರಾದ ಜೀವರಾಜ್ ರವರ ಅವಧಿಯಲ್ಲಿ ಸರ್ಕಲ್ ಆಗಲೀಕರಣ ಕಾರ್ಯ ಕೈಗೊಂಡಿದ್ದು ಕೆಲವು ಪ್ರಭಾವಿ ವ್ಯಕ್ತಿಗಳ ಒತ್ತಡದಿಂದ ಸರ್ಕಲ್ ಆಗಲೀಕರಣ ಕಾರ್ಯ ಸ್ಥಗಿತ ಗೊಂಡಿತ್ತು, ಈಗ ಮತ್ತೆ ಶೃಂಗೇರಿ ಕ್ಷೇತ್ರದ ಈಗಿನ ಶಾಸಕ ಟಿ. ಡಿ ರಾಜೇಗೌಡರು ಮಳೆ ಕಡಿಮೆ ಆದ ತಕ್ಷಣ ಜಯಪುರ ಪೇಟೆಯ ರಸ್ತೆ ( 33×33) ರಸ್ತೆ ಆಗಲೀಕರಣ ನೀಡುವ ಭರವಸೆ ನೀಡಿರುತ್ತಾರೆ, ಶೃಂಗೇರಿ ಸರ್ಕಲ್ ರಾಷ್ಟ್ರೀಯ ಹೆದ್ದಾರಿಗೆ ಸೇರಿಸುವ ಕಾರಣ ಕೊಟ್ಟು ಸರ್ಕಲ್ ಆಗಲೀಕರಣ ಕೈಬಿಟ್ಟು, ಡಿಸ್ಟ್ರಿಕ್ಟ್ ಮೇಜರ್ ರೋಡ್ ಗೆ ಸೇರಿರುವ ಕೆಳಗಿನ ಪೇಟೆಯನ್ನು ಮಾತ್ರ ಆಗಲೀಕರಣ ಕಾರ್ಯವನ್ನು ಮಾಡುವುದಾಗಿ ಖಚಿತ ಮಾಹಿತಿ ದೊರೆತಿದೆ.

ಈಗಾಗಲೇ ಹಲವು ವರ್ಷಗಳಿಂದ ಸರ್ಕಲ್ ಕಿರಿದಾಗಿರುವ ಕಾರಣ ದಿನವಿಡೀ ವಾಹನ ದಟ್ಟಣೆಯಲ್ಲಿರುತ್ತದೆ. ಅದಲ್ಲದೆ ಕೆಲವೇ ತಿಂಗಳಿನಲ್ಲಿ ಸಮುದಾಯ ಆಸ್ಪತ್ರೆ ಉದ್ಘಾಟನೆಗೊಳ್ಳಲಿದ್ದು, ಆಗ ಸಮಸ್ಯೆ ಇನ್ನೂ ಉಲ್ಬಣಗೊಳ್ಳುವುದು.

ಸರ್ಕಲ್ ನಲ್ಲಿ ಜನಸಾಮಾನ್ಯರಿಗಾಗುವ ತೊಂದರೆಯನ್ನು ಅರಿತು ಪೇಟೆಯ ಆಗಲೀಕರಣದ ಜೊತೆ ಸರ್ಕಲ್ ಆಗಲೀಕರಣ ಕೂಡ ಮಾಡುವ ಅನಿವಾರ್ಯತೆ ಇದ್ದು ಈ ಬಗ್ಗೆ ಶಾಸಕ ಟಿ ಡಿ ರಾಜೇಗೌಡರು ಕೂಡಲೇ ಕ್ರಮ ವಹಿಸಬೇಕು, ಹಾಗೂ ಯಾವುದೇ ಪ್ರಭಾವಿಗಳ ಒತ್ತಡಕ್ಕೆ ಮಣಿಯದೆ ಸರ್ಕಲ್ ವಿಸ್ತರಣೆಗೆ ಮುಂದಾಗಬೇಕು ಎಂದು ಅವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!