Friday, June 26, 2026
Homeಜಿಲ್ಲಾಸುದ್ದಿಮೂಡಿಗೆರೆ: ಹಳೇ ಮೂಡಿಗೆರೆ ಗ್ರಾ.ಪಂ. ನೂತನ ಉಪಾಧ್ಯಕ್ಷರಾಗಿ ಸೋನಿಯಾ ಕ್ರಾಷ್ಟ ಆಯ್ಕೆ

ಮೂಡಿಗೆರೆ: ಹಳೇ ಮೂಡಿಗೆರೆ ಗ್ರಾ.ಪಂ. ನೂತನ ಉಪಾಧ್ಯಕ್ಷರಾಗಿ ಸೋನಿಯಾ ಕ್ರಾಷ್ಟ ಆಯ್ಕೆ

ಚಿಕ್ಕಮಗಳೂರು: ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಹಳೇ ಮೂಡಿಗೆರೆ ಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷರಾಗಿ ಶ್ರೀಮತಿ ಸೋನಿಯಾ ಕ್ರಾಷ್ಟ ಅವಿರೋಧ ಆಯ್ಕೆಯಾದರು

ಇಲ್ಲಿನ ಗ್ರಾಮ ಪಂಚಾಯಿತಿ ಯಲ್ಲಿ ಕಳೆದ ಚುನಾವಣೆಯಲ್ಲಿ 14 ಸದಸ್ಯ ಬಲದ ಗ್ರಾ. ಪಂ.ನಲ್ಲಿ 7ಸ್ಥಾನಗಳನ್ನು ಬಿಜೆಪಿ 3 ಸ್ಥಾನಗಳನ್ನು ಬಿ ಎಸ್ ಪಿ ಹಾಗೂ 4 ಸ್ಥಾನವನ್ನು ಕಾಂಗ್ರೆಸ್ ಪಡೆದುಕೊಂಡಿತ್ತು. ಇಂದು ನಡೆದ ಉಪಾಧ್ಯಕ್ಷರ ಚುನಾವಣೆಯಲ್ಲಿ 14 ಮಂದಿ ಸದಸ್ಯರು ಹಾಜರಿದ್ದು ಶ್ರೀಮತಿ ಸೋನಿಯಾ ಕ್ರಾಷ್ಟ ಅವರು ಅವಿರೋಧವಾಗಿ ಉಪಾಧ್ಯಕ್ಷೆ ಸ್ಥಾನವನ್ನು ಅಲಂಕರಿಸಿದ್ದಾರೆ.

ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಹಳೇ ಮೂಡಿಗೆರೆ ಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷೆ ಸ್ಥಾನ ಅಲಂಕರಿಸಿ ಮಾತನಾಡಿ, ಅಧಿಕಾರ ಬರುವುದು, ಹೋಗುವುದು ಕಾಕತಾಳಿಯವಷ್ಟೇ ಆಗಿದೆ. ಅಧಿಕಾರದಲ್ಲಿದ್ದಾಗ ಜನರ ಕಷ್ಟಗಳಲ್ಲಿ ಪಾಲ್ಗೊಳ್ಳಬೇಕು. ಗ್ರಾಮ ಪಂಚಾಯಿತಿ ಅನುದಾನ ಕಡಿಮೆ ಪ್ರಮಾಣದಲ್ಲಿ ಬರುತ್ತಿದ್ದು, ಈ ಬಗ್ಗೆ ಜನಪ್ರತಿನಿಧಿಗಳೆಲ್ಲರೂ ಸರಕಾರದ ಮೇಲೆ ಒತ್ತಡ ತಂದು ಹೆಚ್ಚು ಅನುದಾನ ತರಲು ಪ್ರಯತ್ನಿಸಬೇಕು ಎಂದರು.ಇದು ನನಗೆ ಒಲಿದ ಜವಾಬ್ದಾರಿ, ಪಂಚಾಯಿತಿಯ ಸಕಲರ ಕಷ್ಟ ಸುಖಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು

ಜವಾಬ್ದಾರಿ ಸ್ವೀಕರಿಸಿದ ಬಳಿಕ ಪಂಚಾಯಿತಿ ಸದಸ್ಯರ, ಸಿಬ್ಬಂದಿಗಳಿಗೆ ಹಾಗೂ ಗ್ರಾಮಸ್ಥರಿಗೆ, ಕಾರ್ಯಕರ್ತರಿಗೆ ಸಿಹಿ ಹಂಚಿ ಸಂಭ್ರಮಿಸಿದರು

ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಗಜೇಂದ್ರ ತರುವೆ, ಹಳೇ ಮೂಡಿಗೆರೆ ಗ್ರಾ,ಪಂ ಅಧ್ಯಕ್ಷೇ ರಂಜಿನಿ, ಕಸಬಾ ಹೋಬಳಿ ಬಿಜೆಪಿ ಯುವ ಘಟಕದ ಅಧ್ಯಕ್ಷ ಸಂದೀಪ್ ಕೆಲ್ಲೂರ್, ಗ್ರಾ.ಪಂ.ಸದಸ್ಯರಾದ ಶಿವಾನಂದ್ ಕುನ್ನಳ್ಳಿ, ಅಜಿತ್ ಮುತ್ತಿಗೆಪುರ, ಅಶೋಕ್ ಕುನ್ನಳ್ಳಿ, ಶರತ್,
ಹಿಂದುಳಿದ ವರ್ಗಗಳ ಅಧ್ಯಕ್ಷ ಫ್ರಾನ್ಸಿಸ್ ಸೇರಿದಂತೆ ಅನೇಕರು ಇದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments