Friday, March 27, 2026
Homeಕ್ರೈಮ್ಹಾಸನ: ಧಾರಾಕಾರ ಮಳೆ: ಧರೆಗುರುಳಿದ ಬೃಹತ್ ಗಾತ್ರದ ಅರಳಿ ಮರ, ಟ್ರಾಕ್ಟರ್ ನುಜ್ಜು ಗುಜ್ಜು!

ಹಾಸನ: ಧಾರಾಕಾರ ಮಳೆ: ಧರೆಗುರುಳಿದ ಬೃಹತ್ ಗಾತ್ರದ ಅರಳಿ ಮರ, ಟ್ರಾಕ್ಟರ್ ನುಜ್ಜು ಗುಜ್ಜು!

ಹಾಸನ : ಜಿಲ್ಲೆಯಲ್ಲಿ ನಿತ್ಯ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಇಂದು ಬೆಳಗಿನ ಜಾವ ಧರೆಗುರುಳಿದ ಬೃಹತ್ ಗಾತ್ರದ ಅರಳಿ ಮರ

ಹೌದು .. ಜಿಲ್ಲೆಯ ಅರಸೀಕೆರೆ ತಾಲ್ಲೂಕು ಮಾಲೇಕಲ್ಲು ತಿರುಪತಿಯಲ್ಲಿ ನೂತನವಾಗಿ ನಿರ್ಮಿಸಿತ್ತಿರುವ ಬನಶಂಕರಿ ದೇವಾಲಯ ಪಕ್ಕದಲ್ಲೇ ಇಂದು ಬೆಳಗ್ಗೆ ಜಾವ ಧರೆಗುರುಳಿದ ಬೃಹತ್ ಗಾತ್ರದ ಅರಳಿ ಮರ ಆದರೆ ದೇವಾಲಯಕ್ಕೆ ಯಾವುದೇ ಹಾನಿ ಸಂಭವಿಸಿಲ್ಲ

ಹಾಗೆ ದೇವಾಲಯಕ್ಕೆ ಯಾವುದೇ ತೊಂದರೆ ಆಗಿಲ್ಲ , ಅಲ್ಲಿರುವ ಜನಕ್ಕೂ ಕೂಡ ಪ್ರಾಣಾಪಾಯ ಸಂಭವಿಸಿಲ್ಲ ಆದರೆ ಟ್ರಾಕ್ಟರ್ ಮೇಲೆ ಮರ ಬಿದ್ದ ರಭಸಕ್ಕೆ ಸಂಪೂರ್ಣ ನುಜ್ಜು ಗುಜ್ಜಾಗಿದೆ.

ಅದೇ ರೀತಿ ಬೆಂಗಳೂರು ನಗರದಲ್ಲಿ ರಾತ್ರಿ ಸುರಿದ ಮಳೆಗೆ ಅಲಿ ಆಸ್ಗರ್ ರಸ್ತೆಯ ಪೊಲೀಸ್ ಕಮಿಷನರ್​​ ಕಚೇರಿ ಹಿಂದಿನ ಗೇಟ್​​ ಬಳಿ ಬೆಳಗ್ಗೆ 7:30 ರ ವೇಳೆಗೆ ಬೃಹತ್ ಮರದ ಕೊಂಬೆ ಏಕಾಏಕಿ ರಸ್ತೆಗೆ ಉರುಳಿ ಬಿದ್ದ ಘಟನೆ ನಡೆದಿದೆ.

ಓರ್ವ ಟ್ರಾಫಿಕ್ ಪೊಲೀಸ್, ಸೆಕ್ಯೂರಿಟಿ ಗಾರ್ಡ್ ಮತ್ತು ಬಿಬಿಎಂಪಿ ಸಿಬ್ಬಂದಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಆ ಮೂಲಕ ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!