Wednesday, August 12, 2026
Homeಜಿಲ್ಲಾಸುದ್ದಿಹಾಸನ; ಇಸ್ಪೀಟ್ ಅಡ್ಡೆ ಮೇಲೆ ಡಿಸಿಆರ್‌ಬಿ ಪೊಲೀಸರ ದಾಳಿ; ಜೂಜಾಡಲು ಪಣಕ್ಕಿಟ್ಟಿದ್ದ 19,99,680 ರೂ ನಗದು...

ಹಾಸನ; ಇಸ್ಪೀಟ್ ಅಡ್ಡೆ ಮೇಲೆ ಡಿಸಿಆರ್‌ಬಿ ಪೊಲೀಸರ ದಾಳಿ; ಜೂಜಾಡಲು ಪಣಕ್ಕಿಟ್ಟಿದ್ದ 19,99,680 ರೂ ನಗದು ವಶ, 11 ಜನರ ಬಂಧನ

Telegram Group
Join Now

ಹಾಸನ; ಇಸ್ಪೀಟ್ ಅಡ್ಡೆ ಮೇಲೆ ಡಿಸಿಆರ್‌ಬಿ ಪೊಲೀಸರ ದಾಳಿ ಮಾಡಿ ಜೂಜಾಡಲು ಪಣಕ್ಕಿಟ್ಟಿದ್ದ 19,99,680 ರೂ ನಗದು ಹಾಗೂ ಹನ್ನೊಂದು ಮಂದಿಯನ್ನು ಬಂಧಿಸಿರುವ ಘಟನೆ ಹಾಸನ ನಗರದ ಪೆನ್‌ಷನ್‌ಮೊಹಲ್ಲಾ‌ದಲ್ಲಿ ನಡೆದಿದೆ.

ಪೆನ್‌ಷನ್‌ಮೊಹಲ್ಲಾದಲ್ಲಿರುವ ಹುಣಸಿನಕೆರೆ ಕೋಡಿಯಲ್ಲಿ ಜೂಜಾಡುತ್ತಿದ್ದ ವೇಳೆ ದಾಳಿ ಡಿಸಿಆರ್‌ಬಿ ಇನ್ಸ್ಪೆಕ್ಟರ್ ವಿನಯ್‌ಕುಮಾರ್ ನೇತೃತ್ವದಲ್ಲಿ ಪೊಲೀಸರು ದಾಳಿ ಮಾಡಿದ್ದಾರೆ‌ . ಪೊಲೀಸರು ದಾಳಿ ಮಾಡುತ್ತಿದ್ದಂತೆ ಹಲವು ಮಂದಿ ಹಣದ ಸಮೇತ ಎಸ್ಕೇಪ್ ಆಗಿದ್ದು ತಮ್ಮಯ್ಯ,  ಜಿತೇಂದ್ರ,  ಜಲೇಂದ್ರ, ವಿಜಯಕುಮಾರ, ಶಾಂತಪ್ಪ, ಶಶಿಕುಮಾರ, ಅಶೋಕ, ಸರ್ವರ್‌ಖಾನ್, ಸುಮನ್, ಕುಮಾರ್ ಎಂಬುವವರನ್ನು ಬಂಧಿಸಿದ್ದು ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments