ಹಾಸನ: ಹೆಜ್ಜೇನು ಕಡಿದು ರೈತ ರುದ್ರಶೆಟ್ಟಿ ಸಾವು ಪ್ರಕರಣ ಹಿನ್ನೆಲೆ ಇಂದು ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿ ಸಾಂತ್ವನ ಹೇಳಿದರು.

ಹೌದು ..ಆಲೂರು ತಾಲೂಕು ಕಸಬಾ ಹೋಬಳಿ ಕಣತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ತೊಗರನಹಳ್ಳಿ ಗ್ರಾಮದಲ್ಲಿ ಜಮೀನಿನಲ್ಲಿ ಕೆಲಸ ಮಾಡುವಾಗ ನೂರಕ್ಕೂ ಹೆಚ್ಚು ಜೇನುಹುಳ ದಾಳಿ ನೆಡೆಸಿ ಗ್ರಾಮದ ರುದ್ರಶೆಟ್ಟಿ (53) ಮೃತ ಪಟ್ಟಿದ್ದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ ಕಾಡಾನೆ ದಾಳಿಯಿಂದ ಮೃತ ಪಟ್ಟವರಿಗೆ ನೀಡುವ 20 ಲಕ್ಷ ಪರಿಹಾರದ ಧನವನ್ನು ಜೇನುಹುಳದ ದಾಳಿಗೆ ತುತ್ತಾಗಿ ಮೃತ ಪಟ್ಟವರಿಗೂ ನೀಡಬೇಕು ಎಂದರು.
ಡಿ.06 ರಂದು ಅಂದ್ರೆ ನಾಳೆ ಹಾಸನಕ್ಕೆ ಮುಖ್ಯಮಂತ್ರಿಗಳು ಬರುತ್ತಿದ್ದು ಹೆಚ್ಚಿನ ಪರಿಹಾರ ಧನ ಘೋಷಿಸುವಂತೆ ಮನವಿ ಮಾಡಿದರು. ಈ ಕುರಿತು ಡಿ. 8 ರಿಂದ ಪ್ರಾರಂಭವಾಗುವ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪ ಮಾಡಲಾಗುವುದು.
ಜೇನುಹುಳ ದಾಳಿಯಿಂದ ಗಾಯಗೊಂಡವರಿಗೂ ಪರಿಹಾರ ಒದಗಿಸಬೇಕು ಎಂದರು. ಇದೆ ವೇಳೆ ಗಾಯಾಳು ಸಂತೋಷ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
