Wednesday, August 12, 2026
Homeಜಿಲ್ಲಾಸುದ್ದಿಮೂಡಿಗೆರೆ: ಬಿ ಹೊಸಹಳ್ಳಿ ಗ್ರಾ.ಪಂ ಗಾಂಧಿ ಗ್ರಾಮ ಪುರಸ್ಕಾರ: ಷಡ್ಯಂತ್ರ್ಯದ ಮಧ್ಯೆಯೂ ಎದೆಗುಂದದೇ ಕೆಲಸ ಮಾಡಿದ...

ಮೂಡಿಗೆರೆ: ಬಿ ಹೊಸಹಳ್ಳಿ ಗ್ರಾ.ಪಂ ಗಾಂಧಿ ಗ್ರಾಮ ಪುರಸ್ಕಾರ: ಷಡ್ಯಂತ್ರ್ಯದ ಮಧ್ಯೆಯೂ ಎದೆಗುಂದದೇ ಕೆಲಸ ಮಾಡಿದ ಅಧ್ಯಕ್ಷ ಆಶ್ರೀತ್‌ ಗೌಡ!

Telegram Group
Join Now

ಮೂಡಿಗೆರೆ: ಅಭಿವೃದ್ಧಿ ಹೊಂದಿದ ಉತ್ತಮ ಗ್ರಾಮ ಪಂಚಾಯ್ತಿಗೆ ರಾಜ್ಯ ಸರ್ಕಾರ ನೀಡುವ ಗಾಂಧಿ ಗ್ರಾಮ ಪುರಸ್ಕಾರವನ್ನ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿ.ಹೊಸಹಳ್ಳಿ ಗ್ರಾಮ ಪಂಚಾಯ್ತಿ ಪಡೆದುಕೊಂಡಿದೆ.

ಈ ಪ್ರಶಸ್ತಿಯನ್ನ ಸಚಿವ ಪ್ರಿಯಾಂಕ ಖರ್ಗೆ ಅವರು ಈ ಗೌರವವನ್ನ ಬಿ ಹೊಸಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಆಶ್ರಿತ್ ಗೌಡ ಅವರಿಗೆ ಪ್ರಧಾನ ಮಾಡಿದರು.

ಅನೇಕ ವಿರೋಧ, ಷಡ್ಯಂತ್ರ್ಯದ ಮಧ್ಯೆಯೂ ಎದೆಗುಂದದೇ ಗ್ರಾಮ ಪಂಚಾಯ್ತಿಯಲ್ಲಿ ಅತ್ಯುನ್ನತ ಸುಧಾರಣೆಯನ್ನ ತಂದ ಪರಿಣಾಮ ಬಿ.ಹೊಸಳ್ಳಿ ಗ್ರಾಮ ಪಂಚಾಯ್ತಿಗೆ ರಾಜ್ಯಮಟ್ಟದ ಉನ್ನತ ಗೌರವ ತಂದಿರುವುದು ಸಂತಸವಾಗಿದೆ ಎಂದು ಅಧ್ಯಕ್ಷ ಆಶ್ರಿತ್ ಗೌಡ ಅವರು ತಿಳಿಸಿದರು.

ಹಾಗೆ ಪ್ರಶಸ್ತಿ ಲಭಿಸಿರುವುದರಿಂದ ಮತ್ತಷ್ಟು ಕೆಲಸಗಳನ್ನ ಮುಂದುವರೆಸಿಕೊಂಡು ಹೋಗಲು ಸಹಕಾರಿಯಾಗಿದೆ. ತಾನು ಈ ಸಾಧನೆ ಮಾಡಲು ಸಹಕರಿಸಿದ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ ಸೇರಿದಂತೆ ಎಲ್ಲರಿಗೂ ಧನ್ಯವಾದ ತಿಳಿಸಿದರು..

ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments