ಹಾಸನ : ಜಿಲ್ಲೆಯ ಹೊಳೆನರಸೀಪುರ ಪಟ್ಟಣದ ಕರ್ನಾಟಕ ಬ್ಯಾಂಕ್‌ನಲ್ಲಿ ಹಣಕಾಸು ವ್ಯವಹರಿಸಲು ಬಂದಿದ್ದ ಮಹಿಳೆಯೊಬ್ಬರು ಪರ್ಸ್ ಬೀಳಿಸಿಕೊಂಡಿದ್ದನ್ನು ಮಲ್ಲಪ್ಪನಹಳ್ಳಿ ಗ್ರಾಮದ ಶಿವಕುಮಾರ್ ಎಂಬಾತ ಪೊಲೀಸರ ಮುಖೇನ ಕಳೆದುಕೊಂಡಿದ್ದವರಿಗೆ ಹಿಂದಿರುಗಿಸಿದ್ದಾನೆ.
ಹೌದು .. ಪ್ರಾಮಾಣಿಕತೆ ಮರೆದ ತಾಲೂಕಿನ ಮಲ್ಲಪ್ಪನಹಳ್ಳಿ ಗ್ರಾಮದ ಶಿವಕುಮಾರ್ ಎಂಬಾತ ಪೊಲೀಸರ ಮುಖೇನ ಕಳೆದುಕೊಂಡಿದ್ದವರಿಗೆ ಹಿಂದಿರುಗಿಸಿದ್ದಾರೆ. ಬ್ಯಾಂಕ್ ಒಳ ಆವರಣದಲ್ಲಿ ಬಿದ್ದಿದ್ದ ಪರ್ಸ್ ನಲ್ಲಿ 3 ಲಕ್ಷ ರೂ ಬೆಲೆ ಬಾಳುವ ಮಾಂಗಲ್ಯದ ಚಿನ್ನದ ಸರ ಇತ್ತು.
ಎಟಿಎಂ ಕಾರ್ಡ್ ಕಳೆದುಕೊಂಡಿದ್ದ ಶಿವಕುಮಾರ್ ಬ್ಯಾಂಕ್‌ನಲ್ಲಿ ಹೊಸ ಎಟಿಎಂ ಕಾರ್ಡ್ ಪಡೆಯಲು ಬಂದಿದ್ದರು. ಅದೇ ಸಂದರ್ಭದಲ್ಲಿ ಪರ್ಸ್ ಬಿದ್ದಿರುವುದು ಕಂಡು ನಗರ ಪೊಲೀಸ್ ಠಾಣೆಗೆ ನೀಡಿದ್ದಾರೆ. ಪರ್ಸ್ನಲ್ಲಿದ್ದ ಆಧಾರ್ ಪರಿಶೀಲಿಸಿದ ಪೊಲೀಸರು ಕಳೆದುಕೊಂಡಿದ್ದ ಮಣಿಯಮ್ಮ ಎಂಬುವರಿಗೆ ಕರೆಮಾಡಿ ಒಪ್ಪಿಸಿದ್ದಾರೆ. ಈಕೆ ಪಟ್ಟಣದ ನರಸಿಂಹನಾಯಕ ಬಡಾವಣೆಯ ನಿವಾಸಿಯಾಗಿದ್ದಾರೆ.
ಇದೀಗ ಶಿವಕುಮಾರ್‌ಗೆ ಪೊಲೀಸರು ಮತ್ತು ನಾಗರೀಕರಿಂದ ಪ್ರಶಂಸೆ ವ್ಯಕ್ತವಾಗಿದೆ
