Saturday, February 14, 2026
Homeಜಿಲ್ಲಾಸುದ್ದಿಹಾಸನ: ಸಂತ ಅಂತೋಣಿಯವರ ದೇವಾಲಯದಲ್ಲಿ ಮರಿಯ ಜಯಂತಿ ವಿಜೃಂಭಣೆ ಆಚರಣೆ!

ಹಾಸನ: ಸಂತ ಅಂತೋಣಿಯವರ ದೇವಾಲಯದಲ್ಲಿ ಮರಿಯ ಜಯಂತಿ ವಿಜೃಂಭಣೆ ಆಚರಣೆ!

ಇಂದು ಹಾಸನ ನಗರದ ಎನ್ ಆರ್ ವೃತ್ತದ ಬಳಿ ಇರುವ ಸಂತ ಅಂತೋಣಿಯವರ ದೇವಾಲಯದಲ್ಲಿ ಮರಿಯ ಜಯಂತಿಯನ್ನು ಸಾಂಪ್ರದಾಯಿಕವಾಗಿ ವಿಜೃಂಭಣೆಯಿಂದ ಆಚರಿಸಲಾಯಿತು. ಧರ್ಮಕೇಂದ್ರದ ಗುರುಗಳು, ಸಹ ಗುರುಗಳು, ಆಹ್ವಾನಿತ ಗುರುಗಳು ಮತ್ತು ಭಕ್ತಾದಿಗಳು ಈ ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡು ತಮ್ಮ ಭಕ್ತಿಯನ್ನು ಮೆರೆದರು.

ಕ್ರೈಸ್ತರ ಸುಗ್ಗಿ ಹಬ್ಬ, ಕುಟುಂಬಗಳ ಹಬ್ಬ, ಹೆಣ್ಣುಮಕ್ಕಳ ಹಬ್ಬ ಇನ್ನೂ ಹಲವು ಹೆಸರಿನಿಂದ ಈ ದಿನವನ್ನು ಕರೆಯುವ ಪ್ರತೀತಿ ಇದ್ದು, ಈ ದಿನದಲ್ಲಿ ತಾವು ಬೆಳೆದ  ಬೆಳೆಯ ಪ್ರಥಮ ಫಲವನ್ನು ತಂದು ದೇವಾಲಯಕ್ಕೆ ಅರ್ಪಿಸುತ್ತಾರೆ. ಈ ಧಾನ್ಯವನ್ನು ಗುರುಗಳ ಆಶೀರ್ವಚನದೊಂದಿಗೆ ನಂತರದ ಕುಟುಂಬಗಳ ಸಹಭೋಜನದಲ್ಲಿ ಬಳಸಲಾಗುತ್ತದೆ.

ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದವರಿಗೆ ಹಾಗೆಯೇ ಎಸ್.ಎಸ್.ಎಲ್.ಸಿ., ಪಿ.ಯುಸಿ., ಪದವಿ, ಮತ್ತು ವೃತ್ತಿಪರ ವಿಷಯಗಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿಧ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ನೆನಪಿನ ಕಾಣಿಕೆಗಳನ್ನು ಅಂತೆಯೇ ವಿಶಿಷ್ಟ ಸಾಧಕರಿಗೆ, ಮತ್ತು ದಾನಿಗಳಿಗೆ ಆಭಿನಂದನೆ  ಮತ್ತು ನೆನಪಿನ ಕಾಣಿಕೆಗಳನ್ನು ನೀಡಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!