Monday, July 13, 2026
Homeಕ್ರೈಮ್ಹಾಸನ: ನಾಪತ್ತೆಯಾದ ಮಹಿಳೆ ಲಾಡ್ಜ್ ನಲ್ಲಿ ಪ್ರಿಯಕರನೊಂದಿಗೆ ಪತ್ತೆ!

ಹಾಸನ: ನಾಪತ್ತೆಯಾದ ಮಹಿಳೆ ಲಾಡ್ಜ್ ನಲ್ಲಿ ಪ್ರಿಯಕರನೊಂದಿಗೆ ಪತ್ತೆ!

Telegram Group
Join Now

ಹಾಸನ: ಬೇಲೂರು ತಾಲೂಕಿನ ಕಲ್ಕೆರೆ ಕೆರೆಯ ಬಳಿ ನಿಗೂಢವಾಗಿ ನಾಪತ್ತೆಯಾಗಿದ್ದ ಮಹಿಳೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಆಕೆ ಕುಣಿಗಲ್‌ನಲ್ಲಿ ತನ್ನ ಪ್ರಿಯಕರನೊಂದಿಗೆ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಕುಣಿಗಲ್ ತಾಲೂಕಿನ ಯಲಿಯೂರಿನ ಪ್ರಿಯಾಂಕ (29) ಎಂಬ ಮಹಿಳೆಯನ್ನು ಬಿಹಾರ ಮೂಲದ ಡೇವಿಡ್ ಎಂಬಾತನ ಜತೆ ಕುಣಿಗಲ್‌ನ ಲಾಡ್ಜ್ ಒಂದರಲ್ಲಿ ಪೊಲೀಸರು ಪತ್ತೆಹಚ್ಚಿದ್ದಾರೆ. ನಾಪತ್ತೆ ಪ್ರಕರಣವಾಗಿ ದಾಖಲಾಗಿದ್ದ ಈ ವಿಚಾರಕ್ಕೆ ಸಂಬಂಧಿಸಿ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದರು.

ಶನಿವಾರ ಬೆಳಗ್ಗೆ ಕಲ್ಕೆರೆ ಕೆರೆಯ ತೀರದಲ್ಲಿ ಮಹಿಳೆಯ ಉಡುಪುಗಳು ಮತ್ತು ಕೆಲವು ವೈಯಕ್ತಿಕ ವಸ್ತುಗಳು ಪತ್ತೆಯಾಗಿದ್ದವು. ಇದರಿಂದಾಗಿ ಆತಂಕ ಸೃಷ್ಟಿಯಾಗಿತ್ತು. ಮಹಿಳೆ ಸುಮಾರು 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಧರಿಸಿದ್ದ ಹಿನ್ನೆಲೆಯಲ್ಲಿ, ಆಕೆಯನ್ನು ಅತ್ಯಾಚಾರ ಮಾಡಿ ಹತ್ಯೆಗೈದು, ಚಿನ್ನಾಭರಣ ದೋಚಿ ಶವವನ್ನು ಕೆರೆಗೆ ಎಸೆದಿರುವ ಶಂಕೆಯನ್ನು ಸಂಬಂಧಿಕರು ವ್ಯಕ್ತಪಡಿಸಿದ್ದರು.

ಈ ಆರೋಪಗಳು ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಘಟನೆಗೆ ಸಂಬಂಧಿಸಿ ಬೇಲೂರು ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡಿದ್ದರು. ಮೊಬೈಲ್ ಲೊಕೇಶನ್ ಹಾಗೂ ಇತರೆ ತಾಂತ್ರಿಕ ಮಾಹಿತಿ ಆಧರಿಸಿ ಹುಡುಕಾಟ ನಡೆಸಿದ ಪರಿಣಾಮ, ಮಹಿಳೆ ಕುಣಿಗಲ್‌ನ ಲಾಡ್ಜ್‌ನಲ್ಲಿ ಪ್ರಿಯಕರನೊಂದಿಗೆ ಇರುವುದನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments