Sunday, July 12, 2026
Homeಜಿಲ್ಲಾಸುದ್ದಿಮೂಡಿಗೆರೆ: ವಿವಿಧ ಸಂಘ ಸಂಸ್ಥೆಗಳಿಂದ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ನುಡಿ ನಮನ

ಮೂಡಿಗೆರೆ: ವಿವಿಧ ಸಂಘ ಸಂಸ್ಥೆಗಳಿಂದ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ನುಡಿ ನಮನ

Telegram Group
Join Now

ಮೂಡಿಗೆರೆ:ಗೋಣಿಬೀಡಿನಲ್ಲಿ ಲಯನ್ಸ್ ಹಾಗೂ ರೋಟರಿ ಸಂಸ್ಥೆ ಮತ್ತು ವಿಶ್ವ ಹಿಂದೂ ಪರಿಷತ್ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ನುಡಿ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು

ಈ ಕಾರ್ಯಕ್ರಮದಲ್ಲಿ. ದೇಹವನ್ನು ಪ್ರೀತಿಸುವ ಬದಲು ದೇಶವನ್ನು ಪ್ರೀತಿಸಬೇಕೆಂದು ಕರೆ ನೀಡಲಾಯಿತು.

ಗೋಣಿಬೀಡಿನ ವೃತ್ತದ ಬಳಿ ಹುತಾತ್ಮರಾದ ವೀರ ಯೋಧರ ಭಾವಚಿತ್ರಗಳಿಗೆ ವಿವಿಧ ಸಂಘಟನೆಯ ಮುಖಂಡರು ಹಾಗೂ ಸಾರ್ವಜನಿಕರು ನಗರದಲ್ಲಿ ಪುಷ್ಪ ನಮನ ಸಲ್ಲಿಸಿದರು

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಅವಿನಾಶ್ ಜನ್ನಾಪುರ ಮಾತನಾಡಿ, ವೀರಮರಣ ಅಪ್ಪಿದ ಯೋಧರು ನಮ್ಮ ದೇಶಕ್ಕೆ ಪ್ರಾಣತ್ಯಾಗ ಮಾಡಿದ್ದಾರೆ. ಜನ್ಮ ಕೊಟ್ಟ ತಂದೆ, ತಾಯಿಗೆ ಮತ್ತು ಕುಟುಂಬದವರಿಗೆ ನಮನ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.ಪಾಕಿಸ್ತಾನದಲ್ಲಿರುವ ಉಗ್ರ ಶಿಬಿರಗಳನ್ನು ಧ್ವಂಸ ಮಾಡುವಂತೆ ಕೇಂದ್ರ ಸರ್ಕಾರ ದಿಟ್ಟ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಸಾಲುಮರ ಮಹೇಶ್,ವರ್ತಕರ ಸಂಘದ ಅಧ್ಯಕ್ಷ ಗಣೇಶ್,ಸಾಮಾಜಿಕ ಕಾರ್ಯಕರ್ತ ಜಕ್ಕವುಲ್ಲ, ಗ್ರಾಮ ಪಂಚಾಯಿತಿ ಸದಸ್ಯೆ ಸುಪ್ರಿತಾ,ರೋಟರಿ ಮಾಜಿ ಕಾರ್ಯದರ್ಶಿ ನಯನ,ಲಯನ್ಸ್ ಸಂಸ್ಥೆಯ ಕೋಶಧಿಕಾರಿ ಸುನೀತಾ ಕುಮಾರ್,ಸೇರಿದಂತೆ ಅನೇಕರು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments