Sunday, August 23, 2026
Homeಜಿಲ್ಲಾಸುದ್ದಿಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ರೈತರಿಗೆ ಉತ್ತಮ ದರ್ಜೆಯ ಕಾಳು ಮೆಣಸು, ಕಾಫಿ, ಅಡಿಕೆ...

ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ರೈತರಿಗೆ ಉತ್ತಮ ದರ್ಜೆಯ ಕಾಳು ಮೆಣಸು, ಕಾಫಿ, ಅಡಿಕೆ ಮತ್ತು ಏಲಕ್ಕಿ ಸಸಿಗಳು ಲಭ್ಯ

Telegram Group
Join Now

 ಮೂಡಿಗೆರೆ : ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂಧ್ರದಲ್ಲಿ ರೈತರಿಗಾಗಿ ಉತ್ತಮ ತಳಿಯ ಕಾಳು ಮೆಣಸು, ಕಾಫಿ, ಅಡಿಕೆ, ಏಲಕ್ಕಿ ಸಸಿಗಳು, ಲಭ್ಯವಿದೆ ಎಂದು ಸಹ ಸಂಶೋಧನಾ ಕೇಂದ್ರದ ಹಿರಿಯ ಉಪನಿರ್ದೆಶಕ ಡಾ.ಎ.ಟಿ. ಕೃಷ್ಣಮೂರ್ತಿ ತಿಳಿಸಿದರು.

ಬಾಳೆಹೊನ್ನೂರಿನ ಸಂಶೋಧನಾ ಕೇಂದ್ರದಿಂದ ಕಾಫಿ ಬೀಜವನ್ನು ತಂದು ನರ್ಸರಿ ಮಾಡಿ ಆರೈಕೆ ಮಾಡಲಾಗಿದ್ದು. ಚಂದ್ರಗಿರಿ ಅರೇಬಿಕಾ ಮತ್ತು ರೋಬಸ್ಟಾ ಕಾಫಿಗಿಡಗಳನ್ನು ರೈತರಿಗೆ ಕಡಿಮೆದರದಲ್ಲಿ ಮಾರಟ ಮಾಡುತ್ತಿದ್ದು ಈ ಗಿಡಗಳನ್ನು ತೋಟದಲ್ಲಿ ಅಳವಡಿಸಿಕೊಂಡು ಸಾವಾಯವ ಗೊಬ್ಬರ ನೀಡಿದಲ್ಲಿ ಅಧಿಕ ಇಳುವರಿ ಪಡೆಯಲು ಸಾಧ್ಯ ಎಂದ ಅವರು. 16 ಎಲೆಗಳನ್ಮ್ನ ಹೊಂದಿರುವ ಒಂದು ಬುಟ್ಟಿಗೆ 15 ರೂಗಳಲ್ಲಿ ನೀಡುತ್ತಿರುವುದಾಗಿ ತಿಳಿಸಿದರು.

ಕ್ಷೇತ್ರಾಧಿಕ್ಷಕ ಡಾ.ಎ.ವಿ.ಸ್ವಾಮಿ ಮಾತನಾಡಿ. ಇತ್ತೀಚೆಗೆ ಅಡಿಕೆಗೆ ಬಹಳ ಬೇಡಿಕೆ ಇರುವ ಕಾರಣ ತೀರ್ಥಹಳ್ಳಿಯ ಸಂಶೋಧನಾ ಕೇಂಧ್ರದಲ್ಲಿ ಅಡಿಕೆ ಸಸಿಗಳನ್ನು ತಂದು ಆರೈಕೆ ಮಾಡಿ ಒಂದು ಬುಟ್ಟಿಗೆ 35 ರೂ ದರದಲ್ಲಿ ಮಾರಟ ಮಾಡುತ್ತಿರುವುದಾಗಿ, ನಲ್ಯಾಣಿ ಏಲಕ್ಕಿ ಸಸಿಗಳು ಲಭ್ಯವಿರುವುದಾಗಿ ತಿಳಿಸಿದರು.

ಡಾ.ನಿವೇದಿತಾ ಎಂ.ಪಿ. ಮಾತನಾಡುತ್ತಾ ಎರೆಹುಳು ಗೊಬ್ಬರದ ಬಗ್ಗೆ ಮಾಹಿತಿ ನೀಡಿ, ಎರೆಹುಳು ಗೊಬ್ಬರಗಳು ಭೂಮಿಯ ಸತ್ವವನ್ನು ಉಳಿಸುವುದರೊಂದಿಗೆ ಪೌಷ್ಠಿಕಾಂಶದ ಕೊರತೆಯನ್ನು ನೀಗಿಸುತ್ತಿದೆ. ರಾಸಾಯನಿಕ ಗೊಬ್ಬರ ಭೂಮಿಯ ಸತ್ವವನ್ನು ಸಂಪೂರ್ಣವಾಗಿ ಹಾಳು ಮಾಡಿದ್ದು ಅಡಿಕೆ ಸಿಪ್ಪೆ , ಕಾಫಿ ಸಿಪ್ಪೆಯನ್ನು ಕಸವೆಂದು ಎಸೆಯದೆ ಅವುಗಳನ್ನು ಗೊಬ್ಬರವನ್ನಾಗಿ ಮಾಡಿದಲ್ಲಿ ಕಸದಿಂದ ರಸ ಎಂಬಂತೆ ಭೂಮಿಯ ಸತ್ವತೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ.

ರೈತರು ಮತ್ತು ಬೆಳೆಗಾರರು ಜೈವಿಕ ಗೊಬ್ಬರ, ಕೃಷಿ ತ್ಯಾಜ್ಯ ಗೊಬ್ಬರ, ಅಡಿಕೆ ಸಿಪ್ಪೆೆ ಗೊಬ್ಬರ, ಕಾಫಿ ಸಿಪ್ಪೆ ಗೊಬ್ಬರ, ಎರೆಹುಳು ಗೊಬ್ಬರ, ಕುರಿ ಗೊಬ್ಬರ ಗಳಂತಹ ಸಾವಾಯವ ಗೊಬ್ಬರಗಳನ್ನು ತಯಾರಿಸಿ ಬಳಸಿದಲ್ಲಿ ಉತ್ತಮವಾದ ಬೆಳೆಯನ್ನು ತೆಗೆಯುವುದರೊಂದಿಗೆ ಅಧಿಕ ಲಾಭ ಪಡೆಯಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments