Friday, November 6, 2026
Homeಕ್ರೈಮ್ಹಾಸನದ ಒಕ್ಕಲಿಗರ ಸಂಘದ ಮಹಿಳಾ ಹಾಸ್ಟೆಲ್‌ನಲ್ಲಿ ಹೆಜ್ಜೇನು ಹಾವಳಿ: 400 ವಿದ್ಯಾರ್ಥಿನಿಯರಿಗೆ ಆತಂಕ, ಹಲವರಿಗೆ ಕಡಿತ!

ಹಾಸನದ ಒಕ್ಕಲಿಗರ ಸಂಘದ ಮಹಿಳಾ ಹಾಸ್ಟೆಲ್‌ನಲ್ಲಿ ಹೆಜ್ಜೇನು ಹಾವಳಿ: 400 ವಿದ್ಯಾರ್ಥಿನಿಯರಿಗೆ ಆತಂಕ, ಹಲವರಿಗೆ ಕಡಿತ!

Telegram Group
Join Now

ಹಾಸನ: ಹಾಸ್ಟೆಲ್‌ನಲ್ಲಿ ಹೆಜ್ಜೇನುಗಳ ಅಟ್ಟಹಾಸಕ್ಕೆ ವಿದ್ಯಾರ್ಥಿನಿಯರು ಕಂಗಾಲಾಗೊರುವ ಘಟನೆ ಜಿಲ್ಲಾ ಒಕ್ಕಲಿಗರ ಸಂಘದ ಮಹಿಳಾ ವಿದ್ಯಾರ್ಥಿನಿಲಯದಲ್ಲಿ ಕಂಡುಬಂದಿದೆ. ಸುಮಾರು 400 ವಿದ್ಯಾರ್ಥಿನಿಯರು ವಾಸವಿರುವ ಹಾಸ್ಟೆಲ್‌ನ ಕಿಟಕಿಗಳಲ್ಲಿ ಹೆಜ್ಜೇನು ಗೂಡುಗಳಿದ್ದು ಕೊಠಡಿಯಿಂದ ಹೊರಬಂದರೂ, ಕಿಟಕಿ ತೆರೆದರೂ ದಾಳಿ ಮಾಡುತ್ತಿರುವ ಹೆಜ್ಜೇನುಗಳು.

ಹೆಜ್ಜೇನು ಕಡಿತದಿಂದ ಐದಾರು ವಿದ್ಯಾರ್ಥಿನಿಯರು ಗಾಯಗೊಂಡು ಚಿಕಿತ್ಸೆ ಪಡೆದಿದ್ದಾರೆ. ಒಬ್ಬ ವಿದ್ಯಾರ್ಥಿನಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿ ತಿಳಿದುಬಂದಿದೆ. ಹೆಜ್ಜೇನು ಸಮಸ್ಯೆ ಕುರಿತು ವಾರ್ಡನ್ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ವಿದ್ಯಾರ್ಥಿನಿಯರ ಸುರಕ್ಷತೆ ದೃಷ್ಟಿಯಿಂದ ಹೆಜ್ಜೇನು ಗೂಡುಗಳನ್ನು ತಕ್ಷಣ ತೆರವುಗೊಳಿಸಿ, ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿನಿಯರು ಒತ್ತಾಯಿಸಿದ್ದಾರೆ.

400 ವಿದ್ಯಾರ್ಥಿನಿಯರ ಸುರಕ್ಷತೆ ಯಾರ ಹೊಣೆ? ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಳ್ಳಲಿ ಎಂದು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!