Wednesday, February 11, 2026
Homeಜಿಲ್ಲಾಸುದ್ದಿಜಾವಳಿ : ಜಗತ್ತಿನ ಪಯಣದಲ್ಲಿ ಭರವಸೆಯ ಯಾತ್ರಿಕರಾಗಿ ಬದುಬೇಕು: ಫಾ.ಡೇವಿಡ್ ಪ್ರಕಾಶ್

ಜಾವಳಿ : ಜಗತ್ತಿನ ಪಯಣದಲ್ಲಿ ಭರವಸೆಯ ಯಾತ್ರಿಕರಾಗಿ ಬದುಬೇಕು: ಫಾ.ಡೇವಿಡ್ ಪ್ರಕಾಶ್

ಮೂಡಿಗೆರೆ: ಸಂತ ಜೂಡರ ಚರ್ಚ್ ವಾರ್ಷಿಕೋತ್ಸವದ ಕಾರ್ಯಕ್ರಮ ಹಮ್ಮಿಕೊಂಡಿದ್ದು ಹಬ್ಬದ ಸಂಭ್ರಮಿಕ ಪೂಜೆ ಅರ್ಪಿಸಿ ಮಾತನಾಡಿದ ಹಿರೇಬೈಲ್ ಚರ್ಚ್ ಧರ್ಮಗುರು ‘ಫಾ.ಡೇವಿಡ್ ಪ್ರಕಾಶ್
ಸಂತ ಜೂಡರು ಏಸು ಕ್ರಿಸ್ತರಲ್ಲಿ ಭರವಸೆ ಹೊಂದಿ ಉತ್ತಮ ಪ್ರೇಷಿತರಾಗಿ ಕ್ರೈಸ್ತರಿಗೆ ಆದರ್ಶರಾಗಿದ್ದಾರೆ.

ದೇವರಿಗಿಂತ ಮಿಗಿಲಾದುದು ಯಾವುದೂ ಇಲ್ಲ ಎಂಬಂತೆ ಸಂತ ಜೂಡರು ಜೀವನದಲ್ಲಿ ಕ್ರಿಸ್ತರ ತತ್ವಗಳನ್ನು ಪ್ರತಿಪಾದಿಸಿ ಬದುಕಿದವರು.

ಕ್ರಿಸ್ತರ ಕಿಂಕರರಾಗಿ ಭರವಸೆಗೆ ಸಾವಿಲ್ಲ ಎಂಬಂತೆ ಜೀವಿಸಿದ ಸಂತರೂ ಸಮಗೆ ಸಮಾಜದಲ್ಲಿ ಪ್ರಾರ್ಥನೆಯ ಮೂಲಕ ದೇವರಲ್ಲಿ ಭರವಸೆ,ವಿಶ್ವಾಸ ಪ್ರೀತಿಮಯ ಶಾಂತಿಯ ಜೀವನ ನಡೆಸಲು ಅವರು ದಾರಿ ತೋರಿಸಿದ್ದಾರೆ.

ನಾವು ಸರ್ವರೊಡನೆ ಸಹೋದರತ್ವ ಭಾವನೆಯಿಂದ ಉತ್ತಮ ಗುಣ ಮೌಲ್ಯಗಳ ಮೂಲಕ ಪರರಿಗೆ ಆದರ್ಶರಾಗಿ ಬದುಕಬೇಕು.ಕ್ರಿಸ್ತರ ಜೀವನದ ಉತ್ತಮ ಸಾಕ್ಷಿಗಳಾಗಿ ನಾವು ನಡೆಯಬೇಕಿದೆ.

ಯೇಸು ಕ್ರಿಸ್ತರು ಪ್ರೀತಿಸುವ ದೇವರಾಗಿದ್ದಾರೆ.ನಮ್ಮ ಪಾಪಕ್ಕಾಗಿ ಶಿಲುಭೆಯಲ್ಲಿ ಪ್ರಾಣತೆತ್ತು ಪ್ರೀತಿ ಗೈದರು.ನಾವು ಸಾಂಸಾರಿಕ ಜೀವನದಲ್ಲಿ ಯಾತ್ರಿಕರಾಗಿ ಒಂದಾಗಿ ಒಗ್ಗಟ್ಟಾಗಿ ಪಯಣಿಸುತ್ತಿದ್ದೇವೆ.

ಕ್ಷಣಕವಾದ ಪಯಣದಲ್ಲಿ ನಾವು ಸನ್ಮಾರ್ಗದದಲ್ಲಿ ನಡೆಯಲು ಪ್ರಯತ್ನಿಸಬೇಕು.ಸಂತ ಜೂಡರು ಕೂಡ ಇದೇ ದಾರಿಯಲ್ಲಿ ನಡೆದರು.ನಮಗೆ ಪಾಲಕರಾಗಿ ದಾರಿದೀಪವಾಗಿದ್ದಾರೆ. ಅವರ ಆದರ್ಶ ನಡೆಗಳು ನಮಗೆ ಜೀವನದುದ್ದಕ್ಕೂ ಪ್ರೇರಣೆಯಾಗಬೇಕು ಎಂದರು.

ಕೊಟ್ಟಿಗೆಹಾರದ ಸೆಕ್ರೆಡ್ ಹಾರ್ಟ್ ಚರ್ಚ್ ಗುರು ಫಾ.ವಿಲಿಯಂ ಬರ್ನಾರ್ಡ್ ಮಾತನಾಡಿ ‘ಹಬ್ಬವು ಪ್ರತಿಯೊಬ್ಬರಿಗೆ ಬೆಳಕಿನ ಸಂಕೇತವಾಗಲಿ ಎಂದರು. ಹಬ್ಬಕ್ಕೆ ಸಹಕರಿಸಿದ ಧಾನಿಗಳಿಗೆ ಹಾಗೂ ಪ್ರತಿಯೊಂದು ಕಾರ್ಯದಲ್ಲಿ ನೆರವಾದವರಿಗೆ ಅಭಿನಂದನೆ ಸಲ್ಲಿಸಿ ಹಬ್ಬದ ಶುಭಾಶಯ ಕೋರಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!