Thursday, August 13, 2026
Homeಜಿಲ್ಲಾಸುದ್ದಿಮೂಡಿಗೆರೆ : ಹಸಿರು ಫೌಂಡೇಷನ್ ವನಮಹೋತ್ಸವ ಕಾರ್ಯಕ್ಕೆ ಮೈಸೂರು ಪ್ರವಾಸಿಗರ ಸಾಥ್

ಮೂಡಿಗೆರೆ : ಹಸಿರು ಫೌಂಡೇಷನ್ ವನಮಹೋತ್ಸವ ಕಾರ್ಯಕ್ಕೆ ಮೈಸೂರು ಪ್ರವಾಸಿಗರ ಸಾಥ್

Telegram Group
Join Now

ಮೂಡಿಗೆರೆ: ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಬರುವ ರಸ್ತೆ ಬದಿಗಳಲ್ಲಿ ಸಸಿ ನೆಡುವುದರ ಮೂಲಕ ಹಸಿರು ಫೌಂಡೇಷನ್ ಸಂಸ್ಥೆ ವತಿಯಿಂದ ವಿನೂತನವಾಗಿ ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು.

ಈಗಾಗಲೇ ಹಲವಾರು ಭಾಗಗಳಲ್ಲಿ ಶಾಲೆ, ಆಸ್ಪತ್ರೆ ಪ್ರವಾಸಿ ತಾಣ ಅಲ್ಲದೆ ಇನ್ನು ಮುಂತಾದ ಕಡೆ ಸಸಿ ನೆಡುತ್ತಾ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುತ್ತಾ ಬಂದಿರುವ ಹಸಿರು ಫೌಂಡೇಷನ್ ಸಂಸ್ಥೆ ನಿಜಕ್ಕೂ ಮಾದರಿ ಕೆಲಸ ಮಾಡುತ್ತಿದ್ದು ಅವರೊಂದಿಗೆ ಇಂದು ರಸ್ತೆ ಬದಿಗಳಲ್ಲಿ ಸಸಿ ನೆಟ್ಟು ನಮ್ಮ ಭಾಗ್ಯ ಎಂದು ಮೈಸೂರಿನ ಪ್ರವಾಸಿಗರು ಹರ್ಷ ವ್ಯಕ್ತಪಡಿಸಿದರು.

ಹಸಿರು ಫೌಂಡೇಷನ್ ಇನ್ನಷ್ಟು ಒಳ್ಳೆ ಕಾರ್ಯಗಳನ್ನು ಮಾಡಿ ರಾಜ್ಯ ರಾಷ್ಟ್ರಾದ್ಯಂತ ಹೆಸರು ಮಾಡಲಿ ಎಂದು ಹಾರೈಸಿದರು.

ಫೌಂಡೇಷನ್ ಸಂಸ್ಥಾಪಕ ರತನ್ ಊರುಬಗೆ ಮುಂದಿನ ಪೀಳಿಗೆಗೆ ಪರಿಸರ ಉಳಿಸಬೇಕಿದೆ. ಪಶ್ಚಿಮ ಘಟ್ಟ ಪ್ರದೇಶ ಉಳಿಸಬೇಕಿದೆ ಈ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಕಲ್ಲುಬೆಟ್ಟ ಹೋಮ್ ಸ್ಟೇ ಮಾಲೀಕರಾದ ಪ್ರೀತಿನಿ ಸಂದೇಶ್ ಗೌಡ, ಸೀತಮ್ಮ, ಹಸಿರು ಫೌಂಡೇಷನ್ ಉಪಾಧ್ಯಕ್ಷ ವಿನುಪ್ರಸಾದ್ ಹೆಗ್ಗುಡ್ಲು, ಕಾರ್ಯದರ್ಶಿ ಅಭಿಜಿತ್ ಹೆಡದಾಳು ನಿರ್ದೇಶಕರಾದ ಪ್ರದೀಪ್ ಊರುಬಗೆ, ಸಚಿನ್ ದುರ್ಗದಹಳ್ಳಿ, ಅದೀಪ್ ಊರುಬಗೆ ಉಪಸ್ಥಿತರಿದ್ದರು..

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments