ಚಿಕ್ಕಮಗಳೂರು : ಸಿಎಂ ಡಿಕೆಶಿ ಸಚಿವ ಸಂಪುಟಕ್ಕೆ ಸ್ಟಿಂಗ್ ಆಪರೇಷನ್ ಬಗ್ಗೆ ಕಿವಿಮಾತು ಹಿನ್ನೆಲೆ ಬಗ್ಗೆ ಬಿಜೆಪಿ ನಾಯಕ ಸಿ.ಟಿ.ರವಿ ಅವರು ಚಿಕ್ಕಮಗಳೂರು ನಗರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಹೌದು .. ಮುಖ್ಯಮಂತ್ರಿಗಳು ನೀವು ಪ್ರಾಮಾಣಿಕವಾಗಿರಿ ಎಂದು ಹೇಳಬೇಕಿತ್ತು ಸಿಕ್ಕಿಕೊಳ್ಳದಂತೆ ಕದಿಯಿರಿ ಎಂದು ಹೇಳೋದು ನಿಪುಣ ಕಳ್ಳ ಉಳಿದ ಕಳ್ಳರಿಗೆ ಪಾಠ ಮಾಡೋದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.
ಮುಖ್ಯಮಂತ್ರಿಗಳೇ ನೀವು ನಿಪುಣ ಕಳ್ಳನಂತೆ ವರ್ತನೆ ಮಾಡಬೇಡಿ ಮೋದಿ ರೀತಿ ನಾನು ತಿನ್ನಲ್ಲ ತಿನ್ನೋರಿಗೂ ಬಿಡಲ್ಲ ಎಂದು ಹೇಳಬೇಕಿತ್ತು ನೀವು, ಸಿಕ್ಕಿಕೊಳ್ಳದಂತೆ ತಿಂತೀನಿ, ನೀವು ಸಿಕ್ಕಿಕೊಳ್ಳದಂತೆ ತಿನ್ನಿ ಅಂತೀರಾ ಡಿಕೆಶಿ ಅವರೇ, ನೀವು ಕಲಿಯುಗಕ್ಕೆ ಸೂಕ್ತವಾದ ಮುಖ್ಯಮಂತ್ರಿ ಆಗಿದ್ದೀರಾ ಕಲಿಯುಗದಲ್ಲಿ ಕಲಿಪುರುಷನನ್ನೇ ಯಾಮರಿಸುವಷ್ಟು ಸೂಕ್ತ ಮುಖ್ಯಮಂತ್ರಿ ಆಗಿದ್ದೀರಾ 4 ಕೋಟಿಯಿಂದ 22 ವರ್ಷದಲ್ಲಿ 1450 ಕೋಟಿಗೆ ಬರೋದಕ್ಕೆ ಹೇಗೆ ಸಾಧ್ಯ ಆಗ್ತಿತ್ತು ಯಾರಾದರೂ ತಿಂದರೆ ಹುಷಾರ್… ಮನೆಗೆ ಕಳಿಸುತ್ತೇನೆ ಎಂದು ಹೇಳಬೇಕಿತ್ತು ಕದಿಯುವುದು ಗೊತ್ತಾಗದಂತೆ ಕದೀರಿ ಅನ್ನೋದು ಯಾವ ಲೆಕ್ಕ ರೀ ಎಂದು ಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.
