Tuesday, February 10, 2026
Homeಕ್ರೈಮ್ಕಳಸ: ದಾರಿ ಮಧ್ಯ ಕಾಡುಕೋಣಗಳ ಹಿಂಡು: ಗಾಬರಿಯಲ್ಲಿ ಮರಕ್ಕೆ ಡಿಕ್ಕಿ ಹೊಡೆದ ಕಾರು!

ಕಳಸ: ದಾರಿ ಮಧ್ಯ ಕಾಡುಕೋಣಗಳ ಹಿಂಡು: ಗಾಬರಿಯಲ್ಲಿ ಮರಕ್ಕೆ ಡಿಕ್ಕಿ ಹೊಡೆದ ಕಾರು!

ಕಳಸ: ಚಲಿಸುತ್ತಿದ್ದ ಕಾರಿಗೆ ಏಕಾಏಕಿ ಕಾಡುಕೋಣ ಅಡ್ಡ ಬಂದ ಹಿನ್ನೆಲೆಯಲ್ಲಿ ಕಾರು ಚಾಲಕ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಕಳಸ ತಾಲೂಕಿನ ಬಾಳೆಹೊಳೆ ಸಮೀಪ ನಡೆದಿದೆ.

ಹೌದು .. ಕಳಸ ಪಟ್ಟಣದಲ್ಲಿ ಕ್ಯಾಂಟೀನ್‌ ನಡೆಸುತ್ತಿದ್ದ ಕೃಷಮೂರ್ತಿ ಭಟ್‌ ಎಂಬುವರು ಕಾರಿನಲ್ಲಿ ಕುಟುಂಬದ ಜೊತೆ ತಮ್ಮ ಮನೆಗೆ ಹೊರಟಿರುವಾಗ ಕಳಸಾ ತಾಲೂಕಿನ ಬಾಳೆಹೊಳೆ ಸಮೀಪ ಗೊರಸುಕುಡಿಗೆ ಗ್ರಾಮದ ಬಳಿ ಸಾಗುವಾಗ ದಾರಿ ಮಧ್ಯ 10 ರಿಂದ 15 ಕಾಡುಕೋಣಗಳು ಇದ್ದಿದ್ದನ್ನು ಕಂಡು ಗಾಬರಿಗೊಂಡು ಕಾಡುಕೋಣಗಳಿಂದ ತಪ್ಪಿಸಿಕೊಳ್ಳಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದಿದ್ದಾರೆ.

ಕಾರು ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಅವರ ತಾಯಿಗೆ ಗಾಯಗಳಾಗಿವೆ. ಕಳಸದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಕಳಸ ಪಟ್ಟಣದಲ್ಲಿ ಇತ್ತೀಚೆಗೆ ಕಾಡುಕೋಣಗಳ ಹಿಂಡು ಜಾಸ್ತಿಯಾಗಿದ್ದು ಇದರಿಂದ ಸ್ಥಳೀಯರು ಮತ್ತು ವಾಹನ ಸವಾರರು ಓಡಾಡಲು ಭಯಪಡುತ್ತಿದ್ದಾರೆ. ಈ ಭಾಗದ ರಸ್ತೆಯಲ್ಲಿ ಓಡಾಡುವವರು ಬಹಳ ಎಚ್ಚರಿಕೆಯಿಂದ ಓಡಾಡಲು ಅರಣ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!