ಕೊಪ್ಪ ಪಟ್ಟಣದ ಪುರಭವನದಲ್ಲಿ ಈ ದಿನ ದೇಶದ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ನರೇಂದ್ರ ಮೋದಿಯವರ 75 ಜನ್ಮದಿನದ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಕೊಪ್ಪ ಇವರ ವತಿಯಿಂದ ಉಚಿತ ನೇತ್ರ ತಪಾಸಣೆ ಶಿಬಿರವನ್ನು ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ ಮತ್ತು ಕೊಪ್ಪದ ಎಎಲ್ಎನ್ ರಾವ್ ಆಯುರ್ವೇದ ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ನೇತ್ರ ಮತ್ತು ಆರೋಗ್ಯ ತಪಾಸಣೆ ಕಾರ್ಯಕ್ರಮ ನೆರವೇರಿತು.

ಈ ಕಾರ್ಯಕ್ರಮವನ್ನು ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಯ ವೈದ್ಯರಾದ ಪ್ರದೀಪ್ ರವರು ದೀಪ ಬೆಳಗುವ ಮುಖಾಂತರ ಉದ್ಘಾಟಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ಜನತಾ ಪಾರ್ಟಿ ಕೊಪ್ಪದ ಅಧ್ಯಕ್ಷರಾದ ಹೊಸೂರು ದಿನೇಶ್ ಅವರು ವಹಿಸಿಕೊಂಡು ಮಾತನಾಡಿದ ಅವರು ನೇತ್ರದಾನ ಮಹದಾನ ದೇಹದ ಯಾವುದೇ ಭಾಗದಲ್ಲಿ ಏನೇ ಆದರೂ ಕಣ್ಣಿದ್ದರೆ ಅದನ್ನು ನೋಡಲಿಕ್ಕೆ ಸಾಧ್ಯ ಪ್ರಪಂಚದಲ್ಲಿ ಏನನ್ನೇ ನೋಡಬೇಕಾದರು ನಮಗೆ ಕಣ್ಣಿರಬೇಕು ನಾವು 40ವರ್ಷ ದಾಟಿದ ನಂತರ ವರ್ಷಕ್ಕೆ ಒಮ್ಮೆಯಾದರೂ ನೇತ್ರ ತಪಾಸಣೆಗೆ ಒಳಪಡಬೇಕು ಶಿವಮೊಗ್ಗದ ಶಂಕರ್ ಕಣ್ಣಿನ ಆಸ್ಪತ್ರೆಯಿಂದ ಇತ್ತೀಚಿನ ವರ್ಷಗಳಲ್ಲಿ ಹಳ್ಳಿ ಹಳ್ಳಿಗಳಿಗೂ ತಲುಪಿ ಕಾಳಜಿಯಿಂದ ಕಣ್ಣು ತಪಾಸಣೆ ನೆರವೇರಿಸುತ್ತಿದ್ದಾರೆ ಇದರಿಂದ ಸಾರ್ವಜನಿಕರಿಗೆ ಬಹಳ ಅನುಕೂಲವಾಗುತ್ತಿದ್ದು ನರೇಂದ್ರ ಮೋದಿ ಅವರ ಜನ್ಮದಿನ ಪ್ರಯುಕ್ತ ನಾವು ಈ ದಿನ ಸಾರ್ವಜನಿಕರಿಗೆ ಉಚಿತ ಕಣ್ಣಿನ ತಪಾಸಣೆಯನ್ನು ಮಾಡುತ್ತಿದ್ದೇವೆ ಈ ನೇತ್ರ ತಪಾಸಣೆಯ ಉದ್ದೇಶ ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ದೀರ್ಘಾಯುಷ್ಯ ಸಿಗಬೇಕು ಎಂಬುದು ನಮ್ಮ ಆಶಯ ಎಂದರು.

300ಕ್ಕೂ ಹೆಚ್ಚು ಜನ ಈ ಸಂದರ್ಭದಲ್ಲಿ ತಪಾಸಣೆಗೊಳ ಪಟ್ಟರು, ಯಶಸ್ವಿನಿ ಆರೋಗ್ಯ ಕಾರ್ಡ್ ಹೊಂದಿರುವವರಿಗೆ ಉಚಿತವಾಗಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಕೊಡಲಾಗುವುದು ಎಂದು ವೈದ್ಯರಾದ ಡಾಕ್ಟರ್ ಪ್ರದೀಪ್ ಅವರು ಹೇಳುತ್ತಾ ಕಣ್ಣಿನ ತಪಾಸಣೆ ಬಗ್ಗೆ ತತ್ಸಾರ ಬೇಡ ಕಣ್ಣೆ ನಮಗೆಲ್ಲ ಮುಖ್ಯ ನಮ್ಮ ಮರಣದ ನಂತರ ಕಣ್ಣನ್ನು ದಾನ ಮಾಡಿ ಎಂದು ಹೇಳಿದರು.
ಇವತ್ತು ಅಧ್ಯಕ್ಷರಾದ ದಿನೇಶ್ ಹೊಸೂರ್ ಅವರು ಈ ಸಂದರ್ಭದಲ್ಲಿ ನೇತ್ರದಾನವನ್ನು ಮಾಡುವ ಪತ್ರಕ್ಕೆ ಸಹಿಯನ್ನು ಮಾಡಿ ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ನಾಯಕರಾದ ಬಿ ಕೆ ಗಣೇಶ್ ರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪುಣ್ಯಪಾಲ್, ಶ್ರುತಿ ರೋಹಿತ್, ಅರುಣ್ ಶಿವಪುರ, ನವೀನ್ ಕುಮಾರ್ ಅನ್ನಪೂರ್ಣ, ಪದ್ಮಾವತಿ ರಮೇಶ್, ಪಟ್ಟಣ ಪಂಚಾಯತಿ ಅಧ್ಯಕ್ಷೆ ರೇಖಾ ಪ್ರಕಾಶ್, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ನಾಗರೀಕರು ಉಪಸ್ಥಿತರಿದ್ದರು.
ಮಾಜಿ ಸಚಿವರಾದ ಡಿ ಎನ್ ಜೀವರಾಜ್ ರವರು ಆಗಮಿಸಿ ಎಲ್ಲರ ಯೋಗಕ್ಷೇಮ ವಿಚಾರಿಸಿ ತೆರಳಿದರು.
ಭಾರತೀಯ ಜನತಾ ಪಾರ್ಟಿ ಕೊಪ್ಪ ಇವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಉಚಿತ ನೇತ್ರ ತಪಾಸಣೆ ಮಾಡಿರುವುದು ನಮಗೆಲ್ಲ ಬಹಳ ಅನುಕೂಲವಾಗಿದೆ.
ಭಗವಂತ ಮೋದಿಗೂ ಹಾಗೂ ಭಾರತೀಯ ಜನತಾ ಪಾರ್ಟಿ ಕೊಪ್ಪ ಇವರಿಗೂ ತಪಾಸಣೆ ಮಾಡಿದ ಆಸ್ಪತ್ರೆಯವರಿಗೂ ಒಳ್ಳೆಯದು ಮಾಡಲಿ ಎಂದು ನಾಗರೀಕರು ಹಾರೈಸಿದರು.
ವರದಿ: ಶಶಿ ಬೆತ್ತದಕೊಳಲು
