Tuesday, September 8, 2026
Homeಜಿಲ್ಲಾಸುದ್ದಿKoppa: ನಗು ಫೌಂಡೇಶನ್ ಕಡೆಯಿಂದ ಸುಂಕದಗದ್ದೆ ಶಾಲೆಗೆ ವಾಟರ್ ಫಿಲ್ಟರ್ ಕೊಡುಗೆ!

Koppa: ನಗು ಫೌಂಡೇಶನ್ ಕಡೆಯಿಂದ ಸುಂಕದಗದ್ದೆ ಶಾಲೆಗೆ ವಾಟರ್ ಫಿಲ್ಟರ್ ಕೊಡುಗೆ!

Telegram Group
Join Now

ಕೊಪ್ಪ: ನಗು ಫೌಂಡೇಶನ್ ಕಡೆಯಿಂದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸುಂಕದಗದ್ದೆ ಶಾಲೆಗೆ 12 ಸಾವಿರ ಮೌಲ್ಯದ ಶುದ್ಧ ಕುಡಿಯುವ ನೀರಿನ ಶುದ್ಧಿಕರಣ ಯಂತ್ರ (ವಾಟರ್ ಫಿಲ್ಟರ್)ವನ್ನು ನೀಡಲಾಯಿತು.

ಮಕ್ಕಳ ಆರೋಗ್ಯದ ಬಗ್ಗೆ ಅಪಾರ ಕಾಳಜಿ ಹೊಂದಿ ಸಕಲ ಸೌಲಭ್ಯವನ್ನು ಒದಗಿಸಿಕೊಟ್ಟ ನಗು ಫೌಂಡೇಶನ್ ಮತ್ತು ದೀಪ್ತಿ ಅವರಿಗೆ ಶಾಲೆಯ ಶಿಕ್ಷಕರಾದ ಸಿ ಆರ್ ಸುರೇಶ್ ರವರು ಧನ್ಯವಾದಗಳನ್ನು ತಿಳಿಸಿದರು.

ಈಗಾಗಲೇ ನಮ್ಮ ಶಾಲೆಗೆ ನಗು ಫೌಂಡೇಶನ್ ಕಡೆಯಿಂದ ಲಕ್ಷಕ್ಕೂ ಹೆಚ್ಚಿನ ಬೆಲೆ ಬಾಳುವ ಹಲವಾರು ವಸ್ತುಗಳನ್ನು ಕೊಡಿಸಿರುವುದು ಶ್ಲಾಘನೀಯ ಕಾರ್ಯ ಎಂದು ಶಾಲೆಯ ಮುಖ್ಯಗುರುಗಳಾದ ಮಮತರವರು ಹೇಳಿದರು.

ಇವರ ಕಾರ್ಯವನ್ನು ಎಸ್ ಡಿ ಎಂ ಸಿಯವರು, ಹಳೆ ವಿದ್ಯಾರ್ಥಿಗಳು ಹಾಗೂ ಸುಂಕದಗದ್ದೆ ಗ್ರಾಮಸ್ಥರು ಅಭಿನಂದಿಸಿದರು.

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!