Saturday, February 7, 2026
Homeಜಿಲ್ಲಾಸುದ್ದಿಕೊಪ್ಪ/ಶೃಂಗೇರಿ: ಆಶಾ ಕಾರ್ಯಕರ್ತೆಯರಿಗೆ ಸ್ವೆಟರ್ ನೀಡಿದ ವಿಶ್ವನಾಥ್ ಗದ್ದೆಮನೆ

ಕೊಪ್ಪ/ಶೃಂಗೇರಿ: ಆಶಾ ಕಾರ್ಯಕರ್ತೆಯರಿಗೆ ಸ್ವೆಟರ್ ನೀಡಿದ ವಿಶ್ವನಾಥ್ ಗದ್ದೆಮನೆ

ಕೊಪ್ಪ/ಶೃಂಗೇರಿ: ಆರೋಗ್ಯ ಇಲಾಖೆಯ ಹಾಗೂ ಗ್ರಾಮಗಳ ಸಂಪರ್ಕ ಕೊಂಡಿಗಳಂತೆ ಕಾರ್ಯ ನಿರ್ವಹಿಸುವ ಆಶಾಕಾರ್ಯಕರ್ತೆಯರಿಗೆ ಚಳಿಗಾಲಕ್ಕೆ ಸ್ವೆಟರ್ ನೀಡುವ ಮೂಲಕ ವಿಶ್ವನಾಥ್ ಗದ್ದೆಮನೆ ಮತ್ತೆ ಮಾನವೀಯತೆ ಮೆರೆದಿದ್ದಾರೆ.


ಕ್ಷೇತ್ರದಾದ್ಯಂತ ಶೈಕ್ಷಣಿಕ,ಆರೋಗ್ಯ,ಸಾಮಾಜಿಕ ಕ್ಷೇತ್ರಗಳಲ್ಲಿ ಹಲವು ಜನೋಪಯೋಗಿ ಕಾರ್ಯಗಳನ್ನು ಮಾಡುತ್ತಿರುವ ವಿಶ್ವನಾಥ್ ಗದ್ದೆಮನೆಯವರು ಇಂದು ತಮ್ಮ ವಿಶ್ವನಾಥ್ ಗದ್ದೆಮನೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಪ್ಪ ಹಾಗೂ ಶೃಂಗೇರಿ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುವ ಆಶಾಕಾರ್ಯಕರ್ತೆಯರಿಗೆ ಚಳಿಗಾಲಕ್ಕೆ ಸ್ವೆಟರ್‌ಗಳನ್ನು ವಿತರಿಸಿದರು.


ಕೊಪ್ಪದ 77 ಹಾಗೂ ಶೃಂಗೇರಿಯ 34 ಆಶಾಕಾರ್ಯಕರ್ತೆಯರಿಗೆ ಈ ಸಹಕಾರ ನೀಡಲಾಗಿದ್ದು,ತಾವು ನಿರಂತರ ಕೆಲಸ ಮಾಡಿ ಕಡಿಮೆ ಸಂಬಳ ಪಡೆಯುತ್ತಿರುವ ಇಲಾಖೆಯ ತಳಮಟ್ಟದ ಕಾರ್ಯಕರ್ತರನ್ನು ಗುರುತಿಸಿ ಸಹಾಯ ಹಸ್ತ ಚಾಚಿದ್ದಕ್ಕೆ ಶೃಂಗೇರಿ ಹಾಗೂ ಕೊಪ್ಪ ಆರೋಗ್ಯ ಇಲಾಖೆ ಪರವಾಗಿ ಧನ್ಯವಾದ ತಿಳಿಸಲಾಯಿತು.


ಈ ಸಂದರ್ಭದಲ್ಲಿ ವಿಶ್ವನಾಥ್ ಗದ್ದೆಮನೆ ಚಾರಿಟೇಬಲ್ ಟ್ರಸ್ಟ್‌ನ ಸತೀಶ್ ಗದ್ದೆಮನೆ,ರಾಘವೇಂದ್ರ,ವಿಕಾಸ್, ರಾಮಸ್ವಾಮಿ ಶೆಟ್ಟಿಗದ್ದೆ ಗೌರವಾಧ್ಯಕ್ಷರು ಶೃಂಗೇರಿ ಕ್ಷೇತ್ರ ಒಕ್ಕೂಟ, ತಾಲೂಕು ವೈದ್ಯಾಧಿಕಾರಿಗಳು, ಶೃಂಗೇರಿ ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ಹರೀಶ್ ವಿ ಶೆಟ್ಟಿ,ಮಲೆನಾಡು ನಾಗರೀಕ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಅಂಬ್ಲೂರು ರಾಮಕೃಷ್ಣ ಸೇರಿದಂತೆ ಟ್ರಸ್ಟ್‌ ಹಾಗೂ ವಿಶ್ವನಾಥ್ ಗದ್ದೆಮನೆ ಅಭಿಮಾನಿ ಬಳಗದ ಇತರ ಸದಸ್ಯರು ಹಾಜರಿದ್ದರು.

ವರದಿ: ವಿಠಲ್‌ ಶೃಂಗೇರಿ

7676796989

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!