Wednesday, July 15, 2026
Homeಜಿಲ್ಲಾಸುದ್ದಿಯಲಗುಡಿಗೆ ಹಾಗೂ ಹಾಂದಿ ಮಾರ್ಗದ ನೂತನ ರಸ್ತೆಯ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಶಾಸಕಿ!

ಯಲಗುಡಿಗೆ ಹಾಗೂ ಹಾಂದಿ ಮಾರ್ಗದ ನೂತನ ರಸ್ತೆಯ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಶಾಸಕಿ!

Telegram Group
Join Now


ಆಲ್ದೂರು: ಯಲಗುಡಿಗೆ ಗ್ರಾಮದಿಂದ ಹಾಂದಿಯವರೆಗೆ ಹದಗೆಟ್ಟಿದ್ದ ಹೆದ್ದಾರಿ ಸಂಪರ್ಕ ರಸ್ತೆಗೆ ಶನಿವಾರ ಶಾಸಕಿ ನಯನ ಮೋಟಮ್ಮ ಅವರು ಭೂಮಿ ಪೂಜೆ ನೆರವೇರಿಸಿದರು.

‎ಬಳಿಕ ಮಾತನಾಡಿದ ಅವರು ಟೀಕೆಗಳಿಗೆ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ, ಮಾತಿನಿಂದ ಕಾಲಹರಣ ಮಾಡುವುದಕ್ಕಿಂತ ‎ಕೆಲಸದ ಮೂಲಕ ಸಾಬೀತುಪಡಿಸುವುದು ನಮ್ಮ ಗುರಿಯಾಗಿದೆ ಎಂದರು

‎ ಕ್ಷೇತ್ರದಲ್ಲಿ ಜನರಿಗೆ ಅನಿವಾರ್ಯ ಮತ್ತು ಅವಶ್ಯಕತೆ ಇರುವಂತಹ ಪ್ರದೇಶಗಳಲ್ಲಿ ಆದ್ಯತೆ ಮೇರೆಗೆ ಕಾಮಗಾರಿಗಳನ್ನು ಮಾಡುತ್ತಿದ್ದೇವೆ ಇರುವಂತಹ ಅವಕಾಶದಲ್ಲಿ ಇನ್ನೂ ಕೂಡ ಜನಪರ ಕಾರ್ಯಗಳ ಜೊತೆಗೆ ಅಭಿವೃದ್ಧಿ ಯೋಜನೆಗಳ ಕುರಿತು ಗಮನ ಹರಿಸುವುದರ ಜೊತೆಗೆ ಸಾರ್ವಜನಿಕರಿಗೆ ಸಹಕಾರ ಮಾಡಲು ಸಂಪೂರ್ಣ ಪರಿಶ್ರಮದೊಂದಿಗೆ ಶ್ರಮಿಸುತ್ತೇವೆ ಎಂದರು.

‎ಎರಡು ಕೋಟಿ ಅನುದಾನದಲ್ಲಿ 1.5 ಕಿಮೀ ರಸ್ತೆಯನ್ನು ತೀವ್ರವಾಗಿ ಹದಗೆಟ್ಟಿರುವ ಆಯ್ದ ಭಾಗಗಳಲ್ಲಿ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದಾಬಿರ್, ಉಪಾಧ್ಯಕ್ಷರಾದ ಅಮರ್ ಡಿಸೋಜಾ, ಪ್ರಧಾನ ಕಾರ್ಯದರ್ಶಿ ಸುರೇಶ್ ಹೆಚ್ಎಸ್, ಹೋಬಳಿ ಘಟಕದ ಅಧ್ಯಕ್ಷ ಕೆಳಗೂರು ಪೂರ್ಣೇಶ್,ಉಪಾಧ್ಯಕ್ಷ ಕಿರಣ್, ಹೋಬಳಿ ಕಾರ್ಯದರ್ಶಿ ರವಿಚಂದ್ರ ಸಿ, ಬೂತ್ ಅಧ್ಯಕ್ಷ ಶೇಷಪ್ಪ, ಸತ್ತಿಹಳ್ಳಿ ಪಂಚಾಯಿತಿ ಪಿಡಿಒ ಸುರಯ್ಯ ಬಾನು, ಬ್ಯಾರಿ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಎಯು,ಇಬ್ರಾಹಿಂ, ಬ್ಲಾಕ್ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ತೇಜಸ್, ಅರ್ಚಕ ಚಂದ್ರನಾಥ ಭಟ್, ಮುಖಂಡರುಗಳಾದ ಅನುಪ್ ಗೌಡ,ಮುಳ್ಳುಂಡೆ ಮಂಜುನಾಥ್,ಹಾಂದಿ ರಮೇಶ್, ಹೇಮಂತ್, ವಿಜಯ್ ಕುಮಾರ್,ಅಶ್ವಥ್, ಪದ್ಮಶ್ರೀ,ಎಂಜಿನಿಯರ್ ಮಲ್ಲಿಕಾರ್ಜುನ್,ಮಧು, ಸುನಿತಾ, ರವಿ, ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments