Saturday, August 8, 2026
Homeಕ್ರೈಮ್ಕಾಫಿನಾಡಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ: ಅಪ್ರಾಪ್ತನ ಮೇಲೆ ಅನ್ಯಕೋಮಿನ ಯುವಕರಿಂದ ಹಲ್ಲೆ: ನಾಲ್ವರು ಅರೆಸ್ಟ್‌

ಕಾಫಿನಾಡಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ: ಅಪ್ರಾಪ್ತನ ಮೇಲೆ ಅನ್ಯಕೋಮಿನ ಯುವಕರಿಂದ ಹಲ್ಲೆ: ನಾಲ್ವರು ಅರೆಸ್ಟ್‌

Telegram Group
Join Now

ಚಿಕ್ಕಮಗಳೂರು: ಸ್ನೇಹಿತೆ ಜೊತೆಗಿದ್ದ ಅಪ್ರಾಪ್ತನ ಮೇಲೆ ಅನ್ಯಕೋಮಿನ ಯುವಕರು ನೈತಿಕ ಪೊಲೀಸ್‌ಗಿರಿ ನಡೆಸಿರುವ ಪ್ರಕರಣ ಚಿಕ್ಕಮಗಳೂರು ನಗರದ ಸಂತೇ ಮೈದಾನದಲ್ಲಿ ನಡೆದಿದೆ.

ದಲಿತ ಬಾಲಕನ ಜೊತೆ ಮುಸ್ಲಿಂ ಹುಡುಗಿ ಇದ್ದಿದ್ದಕ್ಕೆ ಅನ್ಯಕೋಮಿನ ಯುವಕರು ಬೆದರಿಕೆ ಹಾಕಿ, ಹಲ್ಲೆ ಮಾಡಿದ್ದಾರೆ. ಈ ವೇಳೆ ಬಾಲಕಿ ಅಲ್ಲಿಂದ ಪರಾರಿಯಾಗಿದ್ದಾಳೆ. ಇನ್ನೂ ಬಾಲಕ ಹಾಗೂ ಬಾಲಕಿ ಇಬ್ಬರೂ ಪರಿಚಿತರು. ಅಲ್ಲದೇ ಎರಡೂ ಕುಟುಂಬದವರೂ ಪರಿಚಯದವರಾಗಿದ್ದಾರೆ

ನಗರ ಠಾಣೆಯಲ್ಲಿ ಹಲ್ಲೆಗೈದ 8 ಜನರ ಮೇಲೆ ಅಟ್ರಾಸಿಟಿ ಕೇಸ್ ದಾಖಲಾಗಿದೆ. 8 ಜನರಲ್ಲಿ ನಾಲ್ವರನ್ನು ಬಂಧಿಸಲಾಗಿದ್ದು, ಬಂಧಿತರನ್ನು ನಯಾಜ್, ತಬ್ರೀಜ್ ಮತ್ತು ಹನೀಫ್ ಎಂದು ಗುರುತಿಸಲಾಗಿದೆ. ಉಳಿದ ನಾಲ್ವರಿಗಾಗಿ ಶೋಧ ನಡೆಸಲಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾಲಕನ ತಾಯಿ, ಆ ಹುಡುಗಿ ನಮಗೆ ಗೊತ್ತು, ನಮ್ಮ ಮನೆಗೆ ಬರುತ್ತಿದ್ದಳು. ಹುಷಾರಿಲ್ಲ ಎಂದು ಅವಳು ಹೇಳಿದ್ದಕ್ಕೆ ಆಕೆಯನ್ನ ಮನೆಗೆ ಬಿಡಲು ನಮ್ಮ ಮಗ ಹೋಗಿದ್ದ. ಆಗ ರಸ್ತೆ ಮಧ್ಯೆ 30 ಜನ ಅಡ್ಡ ಹಾಕಿ ಪ್ರಶ್ನೆ ಮಾಡಿದ್ದಾರೆ. ರಸ್ತೆಯಲ್ಲಿ ಬೇಡ ಅಂತ ನಾನೇ ಮಾತನಾಡೋದಕ್ಕೆ ಮನೆಗೆ ಕರೆತಂದೆ. ಆಗ ಮನೆ ಬಳಿ 60 ಜನ ಹುಡುಗರು ಬಂದಿದ್ದರು. ಅವರಲ್ಲಿ 2-3 ಜನ ನನ್ನ ಮಗನ ಮೇಲೆ ಹಲ್ಲೆ ಮಾಡಿದ್ದರು. ಹಿಂದೂ ಹುಡುಗ ಮುಸ್ಲಿಂ ಹುಡುಗಿಯನ್ನ ಬೈಕಿನಲ್ಲಿ ಡ್ರಾಪ್ ಮಾಡಿದ್ದೆ ಇಷ್ಟಕ್ಕೆಲ್ಲಾ ಕಾರಣ ಎಂದು ಆರೋಪಿಸಿದ್ದಾರೆ. ಮಹಿಳೆ ಮಾತನಾಡುವಾಗ ಆಕೆಯ ಮೇಲೆ ಅನ್ಯಕೋಮಿನ ಕೆಲವರು ಮುಗಿಬಿದ್ದರು. ಈ ವೇಳೆ ಪೊಲೀಸರು ಗುಂಪನ್ನು ಚದುರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments