Thursday, September 10, 2026
Homeಕ್ರೈಮ್ಮೂಡಿಗೆರೆ: ಬೀಳುವ ಪರಿಸ್ಥಿತಿಯಲ್ಲಿರುವ ಅಂಗನವಾಡಿ ಕೇಂದ್ರ: ಅಧಿಕಾರಿಗಳ ವಿರುದ್ಧ ಕಿಡಿ!

ಮೂಡಿಗೆರೆ: ಬೀಳುವ ಪರಿಸ್ಥಿತಿಯಲ್ಲಿರುವ ಅಂಗನವಾಡಿ ಕೇಂದ್ರ: ಅಧಿಕಾರಿಗಳ ವಿರುದ್ಧ ಕಿಡಿ!

Telegram Group
Join Now

ಮೂಡಿಗೆರೆ: ಈಗ್ಲೋ ಆಗ್ಲೋ ಬೀಳುವ ಪರಿಸ್ಥಿತಿಯಲ್ಲಿರೋ ಅಂಗನವಾಡಿ ಕೇಂದ್ರದಲ್ಲಿ ವಿಧಿಯಿಲ್ಲದೇ ಪುಟಾಣಿಗಳು ಮಕ್ಕಳು ಕೂರಬೇಕಾದ ಪರಿಸ್ಥಿತಿ ಕಾಫಿನಾಡಲ್ಲಿ ಎದುರಾಗಿದೆ. ಹೌದು, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೆಲ್ಲೂರು ಗ್ರಾಮದ ಅಂಗನವಾಡಿ ಸ್ಥಿತಿ ನೋಡಿದ್ರೆ ನಿಜಕ್ಕೂ ಭಯವಾಗುತ್ತದೆ.

ಗೋಡೆಗಳು ಬಿರುಕು ಬಿಟ್ಟಿವೆ, ಬಿರುಕು ಬಿಟ್ಟ ಗೋಡೆಗಳಲ್ಲಿ ಹಾವು ಸೇರಿದಂತೆ ವಿಷಜಂತುಗಳು, ಹುಳ ಹುಪ್ಪಡಿಗಳು ಬಂದು ಸೇರುತ್ತಿದೆ. ಹೆಂಚುಗಳು ಒಡೆದು ಹೋಗಿವೆ, ಸರಿಮಾಡಿಸೋರಿಲ್ಲ, ವಿದ್ಯುತ್ ವ್ಯವಸ್ಥೆಯಿಲ್ಲ. ಶಿಥಿಲಗೊಂಡಿರೋ ಅಂಗನವಾಡಿಯಲ್ಲಿ ಮಕ್ಕಳು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಹೆಚ್ಚಾಗಿ ಕೂಲಿ ಕಾರ್ಮಿಕರ ಮಕ್ಕಳೇ ಈ ಅಂಗನವಾಡಿಯಲ್ಲಿ ಕಲಿಯುತ್ತಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹೇಳಿದ್ರೂ ಯಾರೂ ಸ್ಪಂದಿಸುತ್ತಿಲ್ಲ ಅಂತಾ ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಅನ್ನೋದು ಕೇವಲ ಪುಸ್ತಕದ ಬದನೆಕಾಯಿ ರೀತಿ ಆಗದೇ ನಿಜರ್ಥಾದಲ್ಲಿ ಪುಟ್ಟ ಮಕ್ಕಳು ಒಂದೊಳ್ಳೆ ಪರಿಸರದಲ್ಲಿ ಕುಳಿತು ಕಲಿಯಲು ಅವಕಾಶ ಮಾಡಿಕೊಡಿ ಅಂತಾ ಪಬ್ಲಿಕ್ ಇಂಪ್ಯಾಕ್ಟ್ ಈ ಮೂಲಕ ಮನವಿ ಮಾಡುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!