ಮೂಡಿಗೆರೆ: ಬಿಜೆಪಿ ರೈತ ಮೋರ್ಚಾ ವತಿಯಿಂದ ಲಯನ್ಸ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕಾಂಗ್ರೆಸ್ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ನಾಯಕ ದೀಪಕ್ ದೊಡ್ಡಯ್ಯ ಮಾತನಾಡಿ ರೈತರಿಗೆ ರಸಗೊಬ್ಬರ ಪೂರೈಸುವಲ್ಲಿ ವಿಫಲವಾಗಿದೆ.ಕಾಂಗ್ರೆಸ್ ಸರ್ಕಾರ ರೈತರ ವಿರೋಧಿ ಆಡಳಿತ ನಡೆಸುತ್ತಿದೆ.ಒಂದೇ ಒಂದು ರೈತಪರ ಯೋಜನೆ ಜಾರಿಗೊಳಿಸದೆ ತಾತ್ಸಾರ ಧೋರಣೆ ತಾಳಿರುವ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿದರು.

ರೈತರಿಗೆ ಪೊಳ್ಳು ಭರವಸೆ ಕೊಟ್ಟ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ, ರೈತರನ್ನು ತುಳಿಯುತ್ತಿದೆ.ಮೂಡಿಗೆರೆ ರೈತರ ನೋವಿಗೆ ಸ್ಪಂದಿಸದ ಶಾಸಕಿ ಎಲ್ಲಿದೀರಿ ನಯನ ಮೊಟ್ಟಮ್ಮ ಹಾಗೆ ರೈತರ ಬಗ್ಗೆ ಕಾಳಜಿ ನಿಮಗೇಕೆ ಇಲ್ಲ ಎಂದು ಪ್ರಶ್ನಿಸಿದರು
ಮೂಡಿಗೆರೆ ಶಾಸಕಿ ಸದನದಲ್ಲಿ ಮಾತು ಆಡದೆ ಮೌನವಾಗಿ ಇರುವುದು ಬೇಸರದ ಸಂಗತಿ ರೈತರನ್ನು ಹಗುರವಾಗಿ ಕಾಣುವುದು ಸರಿಯಲ್ಲ ಎಂದು ಶಾಸಕಿ ನಯನ ಮೋಟಮ್ಮ ವಿರುದ್ದ ಗುಡುಗಿದರು.ರಾಜ್ಯ ಸರ್ಕಾರವನ್ನು ಪ್ರಶ್ನಿಸಲು ಧೈರ್ಯವಿಲ್ಲದಿದ್ದರೆ ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.ಗ್ಯಾರಂಟಿ ಯೋಜನೆಗಳು ನೆಪ ಮಾತ್ರಕ್ಕೆ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಸಾರ್ವಜನಿಕರಿಗೆ ಸ್ಪಂದಿಸಬೇಕು ಎಂದರು.
ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ನವೀನ್ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಸಾಲ ದೇಶದ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಆದರೆ ರಾಜ್ಯ ಸರ್ಕಾರ ಮಾಡಿರುವ ಸಾಲ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳುವಂತಹದಾಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಉತ್ತಮ ಮುಂಗಾರು ಮಳೆಯಾಗಿದೆ ಎಂಬ ಅರಿವಿದ್ದರೂ ಮುಂದಾಲೋಚನೆ ಮಾಡದೇ ರೈತರಿಗೆ ರಸಗೊಬ್ಬರ ಕೊಡದೇ ಇರುವ ರಾಜ್ಯದ ಅಶಕ್ತ ಕಾಂಗ್ರೆಸ್ ಸರ್ಕಾರ ಏನಾದರೂ ಕೇಳಿದರೂ ಕೇಂದ್ರದ ಕಡೆಗೆ ಬೊಟ್ಟು ತೋರಿಸುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು
ರೈತರ ಬಗ್ಗೆ ಕಾಳಜಿ ಇಲ್ಲದ ಕಾಂಗ್ರೆಸ್ ಸರ್ಕಾರವನ್ನು ಕಿತ್ಹೋಗೆದು 2028 ರ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ತರುವಂತೆ ತಿಳಿಸಿದರು ಮೊಸಳೆ ಕಣ್ಣಿರು ಹಾಕಿ ಗೆಲುವು ಸಾದಿಸಿದ ಕ್ಷೇತ್ರದ ಶಾಸಕಿ ನಿಮ್ಮ ಸಾಧನೆಗಳೇನು ಎಂಬುದನ್ನು ರೈತರಿಗೆ ತಿಳಿಸುವಂತೆ ಅಗ್ರಹಿಸಿದರು.ರಸಗೊಬ್ಬರ ಹಂಚುವಲ್ಲಿ ವಿಪಲವಾದ ಸರ್ಕಾರ ರೈತರಿಗೆ ಹಂಚದೇ ಕಾಳಸಂತೆಯಲ್ಲಿ ಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.
ಅತಿಯಾಗಿ ಮಳೆ ಯಾದ ಪ್ರದೇಶವಾದ ಮೂಡಿಗೆರೆ ರೈತರು ಕಂಗಾಲಗಿದ್ದು ಆನೆ ದಾಳಿ. ಬೆಳೆ ಹಾನಿ, ರೈತರ ಪ್ರಾಣ ಹಾನಿ. ರೈತರ ಸಾಲ, ಮುಂತಾದ ಸಮಸ್ಸೆಗಳು ಎದ್ದು ಕಾಣುತ್ತಿದ್ದರು ಶಾಸಕರು ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸ,ಏಕೆಂದರೆ ಈ ಕ್ಷೇತ್ರದ ಶಾಸಕಿ ಕಾನ್ವೆಂಟ್ ಓದಿದವರು ರೈತರ ಸಂಕಷ್ಟಕ್ಕೆ ಸ್ಪಂದಿಸಲು ಸಾಧ್ಯವಿಲ್ಲ… ಮೋಜು ಮಸ್ತಿಗೆ ಮಾತ್ರ ಸೀಮಿತ ವಾಗಿದ್ದಾರೆ.ಜನರ ಕಷ್ಟಗಳಿಗೆ ಸ್ಪಂದಿಸುವಂತೆ ಎಚ್ಚರಿಸಿದರು.ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಹೇಳಿದರು.ಮಾನ್ಯ ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು
ಈ ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಆನಂದಪ್ಪ, ಉಪಾಧ್ಯಕ್ಷ ನರೇಂದ್ರ, ರೈತ ಮೋರ್ಚಾ ಮಂಡಲದ ಗಜೇಂದ್ರ, ರಘು ಜನ್ನಾಪುರ, ರತನ್ ಕೆ ಸಿ. ಯುವ ರೈತ ಮುಖಂಡರಾದ ಪರೀಕ್ಷಿತ್ ಜಾವಳಿ. ಧನಿಕ್ ಕೊಡದಿಣ್ಣೆ, ತಾರೇಶ್, ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಹಾಜರಿದ್ದರು
