ಮೂಡಿಗೆರೆ: ಪಟ್ಟಣದಲ್ಲಿ ಬಿಜೆಪಿ ರೈತ ಮೋರ್ಚಾ ವತಿಯಿಂದ ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ಹಮ್ಮಿಕೊಂಡಿದ್ದು ಈ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಲಾಗಿದ್ದು ಅನುಮತಿ ಇಲ್ಲದೆ ರಸ್ತೆ ತಡೆ ಕಾನೂನು ಬಾಹಿರ ನಮ್ಮ ಮೂಡಿಗೆರೆಯಲ್ಲಿ ಇಲ್ಲಿಯವರೆಗೆ ಹಲವಾರು ಪ್ರತಿಭಟನೆ ನಡೆದಿದ್ದು ಎಲ್ಲವು ಹೊಂದಾಣಿಕೆ ರೂಪದಲ್ಲಿ ನಡೆಯುತ್ತಿದ್ದವು.
ಯಾವುದೇ ಕಾರ್ಯಕ್ರಮ ನಡೆದರು ಸ್ಥಳೀಯ ಪೊಲೀಸ್ ಸಿಬ್ಬಂದಿ (ಇಂಟಲಿಜೆನ್ಸ) ದೃಶ್ಯಾವಳಿ ಸೆರೆಹಿಡಿಯುವುದು ಅವರ ಕರ್ತವ್ಯ ವಾಗಿದ್ದು. ಅವರ ಕರ್ತವ್ಯ ಮಾಡಿದ್ದರು. ಆದರೆ ಈ ಹಿನ್ನಲೆ ರೈತ ಮೋರ್ಚಾ ನಾಯಕರೊಬ್ಬರೂ ಪೊಲೀಸ್ ಇಲಾಖೆ ಜೊತೆಗೆ ಮಾತಿನ ಚಕಮಕಿ ನಡೆಸಿ ದಿಕ್ಕಾರ ಕೂಗಿದ್ದು ಪೊಲೀಸ್ ಇಲಾಖೆಗೆ ಅವಮಾನ ಮಾಡಿದ್ದಾರೆ.
ಪೊಲೀಸ್ ಇಲಾಖೆ ಸಾರ್ವಜನಿಕರ ಹಿತಾ ಕಾಪಾಡುವಲ್ಲಿ ಸದಾ ಮುಂದಿದ್ದು ಮುಖಂಡರು ತನ್ನ ವಾಕ್ ಚಾತುರ್ಯತೆ ತೋರುವುದು ಸರಿಯಲ್ಲ ಎಂಬುದು ಪೊಲೀಸ್ ಸಿಬ್ಬಂದಿಗಳು ಅಸಮಾಧಾನ ಹೊರಹಾಕಿದರು.
ಘಟನೆ ವಿವರ :
ಬಿಜೆಪಿ ಕಚೇರಿಯಿಂದ ಮೆರವಣಿಗೆ ಮೂಲಕ ರಾಜ್ಯ ಸರ್ಕಾರಕ್ಕೆ ದಿಕ್ಕಾರ ಕೂಗುತ್ತ ಬಂದ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ಲಯನ್ಸ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿಕೆಲವು ಕಾಲ ರಸ್ತೆ ತಡೆ ನಡೆಸಿದರು. ಈ ವೇಳೆ ಪೊಲೀಸ್ ಇಲಾಖೆ ರಸ್ತೆ ತಡೆಯನ್ನು ಮಾಡದಂತೆ ಮನವರಿಕೆ ಮಾಡಿದ್ದೂ, ತದಾನಂತರ ವೇದಿಕೆ ಕಾರ್ಯಕ್ರಮ ನಡೆಸಲಾಯಿತು. ಬಳಿಕ ದಂಡಧಿಕಾರಿಗಳಿಗೆ ಮನವಿ ಸಲ್ಲಿಸಲು ಬಂದಾಗ ಕ್ಷಣ ಕಾಲ ಪ್ರತಿಭಟನಕಾರರು ತಾಲ್ಲೂಕು ಕಛೇರಿ ಮುಂದೆ ತಹಶೀಲ್ದಾರ್ ಅವರಿಗೆ ಕಾಯುತ್ತಿದ್ದು ಮುಖಂಡರು ಓರ್ವ ಪೊಲೀಸ್ ಗೆ ಯಾಕೆ ಹೆದರುತ್ತೀರಾ ನಮ್ಮ ಪ್ರತಿಭಟನೆ ಬೆಂಬಲ ಕೊಡದೆ ಪೊಲೀಸ್ ಇಲಾಖೆಗೆ ದಿಕ್ಕಾರ ಕೂಗಿದ ಘಟನೆ ನಡೆದಿದೆ. ಈ ಕಾರಣ ಪೊಲೀಸ್ ಠಾಣಾಧಿಕಾರಿ ಶ್ರೀನಾಥ್ ರೆಡ್ಡಿ, ಸಿಬ್ಬಂದಿಗಳು ಮತ್ತು ಪ್ರತಿಭಟನಕಾರರೊಂದಿನಗೆ ಮಾತಿನ ಚಕಮಕಿ ನಡೆದಿದೆ.
ವರದಿ :ಪುನೀತ್ ಕಡಿದಾಳ್
