Tuesday, June 30, 2026
Homeಕ್ರೈಮ್ಮೂಡಿಗೆರೆ: ಕಾರು - ಬೈಕ್‌ ನಡುವೆ ಡಿಕ್ಕಿ, ದ್ವಿಚಕ್ರ ಸವಾರನ ಕಾಲು ಮುರಿತ

ಮೂಡಿಗೆರೆ: ಕಾರು – ಬೈಕ್‌ ನಡುವೆ ಡಿಕ್ಕಿ, ದ್ವಿಚಕ್ರ ಸವಾರನ ಕಾಲು ಮುರಿತ

ಮೂಡಿಗೆರೆ: ಕಾರು ತಿರುಗಿಸುವ ವೇಳೆ ಬೈಕ್‌ ಡಿಕ್ಕಿಯಾಗಿ ಸವಾರನ ಕಾಲು ಮುರಿತವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಣಕಲ್ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ನಡೆದಿದೆ.

ಬಣಕಲ್ ಮೂಲದ ಕಾರೊಂದು ರಸ್ತೆಯಲ್ಲಿ ಟರ್ನ್ ಮಾಡುವ ವೇಳೆ ನೇರವಾಗಿ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಚಕ್ ಮಕ್ಕಿ ಮೂಲದ ಬೈಕ್ ಸವಾರ ಮುಸಫಿರ್ ಅವರಿಗೆ ಕಾಲು ಮುರಿತವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ದೃಶ್ಯಾವಳಿ ಪಕ್ಕದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments