ಮೂಡಿಗೆರೆ : ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಪಟ್ಟಣದ ಜೆಸಿ ಹಾಲ್ ನಲ್ಲಿ ಅದ್ದೂರಿಯಾಗಿ ನಡೆಯಿತು
ಅಧ್ಯಕ್ಷರಾಗಿ ಸತ್ಯನಾರಾಯಣ ಹಳೇಕೋಟೆ, ಕಾರ್ಯದರ್ಶಿಯಾಗಿ ಲಯನ್ ರವಿಕುಮಾರ್, ಕೋಶಾಧಿಕಾರಿಯಾಗಿ ಲಯನ್ ಹರ್ಷ ಹಳೇಕೋಟೆ ಅಧಿಕಾರ ಸ್ವೀಕರಿಸಿದರು.

ಲಯನ್ಸ್ ಜಿಲ್ಲಾ( 317 ಡಿ )2ನೇ ಉಪ ರಾಜ್ಯಪಾಲ ವೆಂಕಟೇಶ್ ಹೆಬ್ಬಾರ್ ಪದಗ್ರಹಣ ನೆರವೇರಸಿ ಮಾತನಾಡಿದ ಅವರು ಸೇವಾ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಎಲ್ಲಾ ಸದಸ್ಯರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ತಾಲೂಕಿನಲ್ಲಿ ಹೆಚ್ಚು ಹೆಚ್ಚು ಸದಸ್ಯರನ್ನು ಸಂಸ್ಥೆಗೆ ಸೇರಿಸಿ ಸಂಘ ಬಲಿಷ್ಠ ಗೊಳಿಸುವಂತೆ ಮಾಡಬೇಕು ಎಂದು ತಿಳಿಸಿದರು
ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಸತ್ಯನಾರಾಯಣ ಅವರು, ನಮ್ಮ ಕಾರ್ಯವೇ ನಮ್ಮ ಗುರುತಾಗಬೇಕು. ಸಮಾಜದ ಅಭಿವೃದ್ಧಿಗಾಗಿ ಅರ್ಥಪೂರ್ಣ ಸೇವಾ ಕಾರ್ಯಕ್ರಮ ಹಮ್ಮಿಕೊಂಡು, ಲಯನ್ಸ್ ಸಂಸ್ಥೆಯ ಗೌರವ ಮತ್ತಷ್ಟು ಎತ್ತರಕ್ಕೆ ಒಯ್ಯಲು ತಮ್ಮ ತಂಡ ದೊಂದಿಗೆ ಶಕ್ತಿಮೀರಿ ಕೆಲಸ ಮಾಡುವುದಾಗಿ ತಿಳಿಸಿದರು, ಹಾಗೆಯೇ ಲಯನ್ಸ್ ಕ್ಲಬ್ ಹಿರಿಯ -ಕಿರಿಯರ ಸದಸ್ಯರ ಸಲಹೆ ಸಹಕಾರ,ಮಾರ್ಗದರ್ಶನ ಕೋರಿದ ಅವರು ಎಲ್ಲರನ್ನು ಒಗ್ಗೂಡಿಸಿಕೊಂಡು ಸಮಾಜ ಮುಖಿ ಕಾರ್ಯ ಚಟುವಟಿಕೆಗಳಲ್ಲಿ ಕಾರ್ಯನಿರ್ವಹಿಸುತ್ತೇನೆ ಎಂದರು.

ಇದೆ ವೇಳೆ ಹಿರಿಯ ಸದಸ್ಯ ಪ್ರದೀಪ್ ಅವರನ್ನು ಸಂಸ್ಥೆಯ ವತಿಯಿಂದ ಅತ್ಯಂತ ಪ್ರೀತಿಯಿಂದ ಸನ್ಮಾನಿಸಿ ಗೌರವಿಸಲಾಯಿತು ಜೊತೆಗೆ ವಿವಿಧ ವಿಭಾಗಗಳಲ್ಲಿ ಸಾಧನೆಗೈದ ಮೂಡಿಗೆರೆ ಲಯನ್ಸ್ ಕ್ಲಬ್ ನ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು
ನೂತನ ಪದಾಧಿಕಾರಿಗಳಿಗೆ ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ ಲಯನ್ಸ್ ಕ್ಲಬ್ ಅಧ್ಯಕ್ಷರು, ಪದಾಧಿಕಾರಿಗಳು ಸನ್ಮಾನಿಸಿ ಶುಭಾಶಯ ತಿಳಿಸಿದರು
ವೇದಿಕೆಯಲ್ಲಿ ಲಯನ್ಸ್ ಕ್ಲಬ್ ನಿರ್ಗಮಿತ ಅಧ್ಯಕ್ಷ ಲಯನ್ ಬಿ,ಎಲ್,ದಿನೇಶ್, ಪ್ರಾಂತ್ಯ 7 ರ ಪ್ರಾಂತಿಯ ಅಧ್ಯಕ್ಷ ಲಯನ್ ಬಿ. ಎನ್.ವೆಂಕಟೇಶ್, ವಲಯ 2ರ ವಲಯ ಅಧ್ಯಕ್ಷ ಲಯನ್ ಕೆ, ಟಿ, ದೇವಪ್ಪ, ನಿರ್ಗಮಿತ ಕಾರ್ಯದರ್ಶಿ ಲಯನ್ ಕೆ, ಜಿ,ಅಣ್ಣೆಗೌಡ, ಕೋಶಾಧಿಕಾರಿ ಲಯನ್ ಎಂ, ಹೆಚ್,ಹರ್ಷ ಲಯನ್ ಪ್ರತಿಭಾ ಹೆಬ್ಬಾರ್, ವಿದ್ಯಾ ದಿನೇಶ್ ಇದ್ದರು.
ವರದಿ:ಪುನೀತ್ ಕಡಿದಾಳು
9483811948
