ಮೂಡಿಗೆರೆ: ಹಸಿರು ಹಸಿರು ಫೌಂಡೇಷನ್ ವತಿಯಿಂದ ಶನಿವಾರ ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಸುತ್ತ ಮುತ್ತಲು ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು

ಪರಿಸರ ಸಂರಕ್ಷಣೆ ಜೊತೆಗೆ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮಾಡುವ ಶಾಲಾ ಕಾಲೇಜುಗಳ ಆವರಣ ಕೂಡ ಸ್ವಚ್ಛವಾಗಿ ಇರಬೇಕು ಮಕ್ಕಳು ಓಡಾಡುವ ಸ್ಥಳ ಕಾಲೇಜಿನ ಸುತ್ತ ಮುತ್ತಲಿನ ಪ್ರದೇಶ ಕೂಡ ಸ್ವಚ್ಛವಾಗಿದ್ದರೆ ಸೂಕ್ತ ಅದಕ್ಕಾಗಿ ಹಸಿರು ಫೌಂಡೇಷನ್ ನಿರಂತರವಾಗಿ ಕೆಲಸ ಮಾಡಲಿದೆ ಎಂದು ಹಸಿರು ಫೌಂಡೇಷನ್ ಸಂಸ್ತಾಪಕರಾದ ರತನ್ ದೇವ್ ಊರುಬಗೆ ತಿಳಿಸಿದರು
ಕಾಲೇಜಿನ ಪ್ರಾಚಾರ್ಯರು ಮಾತನಾಡಿ, ಹಸಿರು ಫೌಂಡೇಷನ್ ಸಂಸ್ಥೆಯವರು ಸ್ವಚ್ಛತೆ ಮಾಡಿಕೊಡುವುದಾಗಿ ತಿಳಿಸಿ ಕಾಲೇಜಿನ ಸುತ್ತ ಮುತ್ತಲಿನ ಪ್ರದೇಶ ಸ್ವಚ್ಛಗೊಳಿಸಿ ಕೊಟ್ಟಿರುವುದು ಸಂತೋಷದ ವಿಷಯ, ಹಸಿರು ಫೌಂಡೇಷನ್ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ ಇನ್ನಷ್ಟು ಯಶಸ್ವಿಯಾಗಿ ನಡೆಯಲಿ ಅವರಿಗೆ ಎಲ್ಲರೂ ಸಹಕಾರ ನೀಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ಹಸಿರು ಫೌಂಡೇಷನ್ ಉಪಾಧ್ಯಕ್ಷ ರಾದ ವಿನುಪ್ರಸಾದ್ ಹೆಗ್ಗುಡ್ಲು, ಕಾರ್ಯದರ್ಶಿ ಅಭಿಜಿತ್ ಹೆಡದಾಳು ಮತ್ತಿತರರು ಹಾಜರಿದ್ದರು.
