Saturday, August 8, 2026
Homeಜಿಲ್ಲಾಸುದ್ದಿಮೂಡಿಗೆರೆ: ಬೂತ್ ಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸಲು ಜೆಡಿಎಸ್ ತಾ. ಅಧ್ಯಕ್ಷ ಡಿ.ಜೆ.ಸುರೇಶ್ ಕರೆ

ಮೂಡಿಗೆರೆ: ಬೂತ್ ಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸಲು ಜೆಡಿಎಸ್ ತಾ. ಅಧ್ಯಕ್ಷ ಡಿ.ಜೆ.ಸುರೇಶ್ ಕರೆ

Telegram Group
Join Now

ಮೂಡಿಗೆರೆ: ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆ ಜೆಡಿಎಸ್ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮಕ್ಕೆ ಜಿಲ್ಲಾಧ್ಯಕ್ಷ ರಂಜನ್ ಅಜೀತ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಪಕ್ಷದ ತತ್ವ-ನಿಲುವುಗಳನ್ನು ಜನರ ನಡುವೆ ತಲುಪಿಸುವಂತೆ ಹಾಗೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಿ.ಜೆ. ಸುರೇಶ್ “ಯುವಕರಿಗೆ ಹೆಚ್ಚಿನ ಜವಾಬ್ದಾರಿ ನೀಡಬೇಕು. ಬಲಿಷ್ಠ ಸಂಘಟನೆ ಇದ್ದಾಗ ಮಾತ್ರ ಜನಮನ್ನಣೆ ಪಡೆಯಲು ಸಾಧ್ಯ. ಪ್ರತಿ ಹೋಬಳಿ ಅಧ್ಯಕ್ಷರು ತಮ್ಮ ಹೋಬಳಿಗಳ ಸಭೆಗಳನ್ನು ಆಯೋಜಿಸಿ ಬೂತ್ ಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸಬೇಕು,” ಎಂದು ಕರೆ ನೀಡಿದರು.

ಸಭೆಯಲ್ಲಿ ಕಾರ್ಯಕರ್ತರ ಸಂಘಟನಾ ಶಕ್ತಿ ವೃದ್ಧಿಗೆ ಕರೆ ನೀಡಲಾಯಿತು.

ಈ ಸಭೆಯಲ್ಲಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಲೋಹಿತ್, ಸುಧಾ, ಆಶಾ ಲತಾ, ತೋರಣಮಾವು ಲಕ್ಷಣ, ಮಂಜಪ್ಪಯ್ಯ, ಜ್ವಾಲನಯ್ಯ, ಕ್ಷೇತ್ರ ಸಮಿತಿ ಅಧ್ಯಕ್ಷ ಲಕ್ಷ್ಮಣ ಗೌಡ, ಶಾಕೀರ್ ಹುಸೇನ್, ಶಬ್ಬೀರ್, ಝಕರಿಯ, ನಾಸೀರ್, ನೂರುಲ್ಲ, ಅಶೋಕ್, ಮಗ್ಗಲಮಕ್ಕಿ ರವಿ, ಮರ್ಕಲ್ ಚಂದ್ರಣ್ಣ, ರಘು ಗೌಡ, ಗಬ್ಬಳ್ಳಿ ಚಂದ್ರಣ್ಣ, ಸತೀಶ್ ಮರ್ಕಲ್, ಬಾಳೂರು ಆದರ್ಶ್, ಮನು, ಪ್ರಹ್ಲಾದ್, ತನು ಕೊಟ್ಟಿಗೆಹಾರ, ಸಂದೇಶ್, ಸಂದೀಪ್ ನಂದೀಪುರ, ಬಾನಳ್ಳಿ ರಮೇಶ್ ಸೇರಿದಂತೆ ಎಲ್ಲಾ ಹೋಬಳಿಯ ಅಧ್ಯಕ್ಷರು ಹಾಗೂ ಹಿರಿಯ ಮುಖಂಡರು, ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments