ಮೂಡಿಗೆರೆ: ಶ್ರೀ ಆಂಜನೇಯ ಸ್ವಾಮಿಯ ಬ್ರಹ್ಮಕಲಶ ಮಹೋತ್ಸವ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಳೆಕೋಟೆಯಲ್ಲಿ ಅದ್ದೂರಿಯಾಗಿ ನಡೆಯಿತು.

ಬ್ರಹ್ಮಕಲಶ ಮಹೋತ್ಸವ ಹಿನ್ನೆಲೆಯಲ್ಲಿ ಪ್ರಧಾನ ಹೋಮ, ರಾಮತಾರಕ ಹೋಮ, ಕಲಶಾಭಿಷೇಕ, ಅಷ್ಟಬಂಧ ಲೇಪನ, ಪ್ರಸನ್ನ ಪೂಜೆ ಸೇರಿದಂತೆ ವಿಶೇಷ ಪೂಜೆ ಪುನಸ್ಕಾರಗಳು ದೇವಾಲಯದಲ್ಲಿ ನಡೆದವು. ಸಂಕಷ್ಟಗಳನ್ನ ಪರಿಹರಿಸೋ ಆಂಜನೇಯ ಸ್ವಾಮಿಯ ಬ್ರಹ್ಮಕಲಶ ಮಹೋತ್ಸವದಲ್ಲಿ ನೂರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು.

ಹಳೆಕೋಟೆ ಗ್ರಾಮಸ್ಥರು ಮಾತ್ರವಲ್ಲದೇ ಮುಗ್ರಹಳ್ಳಿ, ಕೋಳೂರು, ಗುಣಿಬೈಲ್, ಬಿದರಹಳ್ಳಿ, ಕಾರ್ಮಕ್ಕಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಬ್ರಹ್ಮಕಲಶ ಮಹೋತ್ಸವದಲ್ಲಿ ವಿಶೇಷವಾಗಿ ಅಲಂಕರಿಸಲಾಗಿದ್ದ ಆಂಜನೇಯನನ್ನ ಭಕ್ತಿಯಿಂದ ಕಣ್ತುಂಬಿಕೊಂಡು ಪುನೀತರಾದ್ರು. ಬಳಿಕ ಮಹೋತ್ಸವದಲ್ಲಿ ಭಾಗಿಯಾಗಿದ್ದ ಭಕ್ತರೆಲ್ಲರಿಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಒಟ್ಟಿನಲ್ಲಿ ಸಡಗರದಿಂದ ನಡೆದ ಶ್ರೀ ಆಂಜನೇಯ ಸ್ವಾಮಿಯ ಬ್ರಹ್ಮಕಲಶವನ್ನ ನೋಡಿ ಭಕ್ತಗಣ ಸಂಭ್ರಮಿಸಿತು.
