Friday, March 27, 2026
Homeಜಿಲ್ಲಾಸುದ್ದಿಮೂಡಿಗೆರೆ : TAPCMS ಎಲೆಕ್ಷನ್: ಕಾರ್ಯಕರ್ತರ ಪರಿಶ್ರಮ ಗೆಲುವಿಗೆ ಕಾರಣ: ಪುಟ್ಟಣ್ಣ ಪಟ್ಟದ್ದೂರು

ಮೂಡಿಗೆರೆ : TAPCMS ಎಲೆಕ್ಷನ್: ಕಾರ್ಯಕರ್ತರ ಪರಿಶ್ರಮ ಗೆಲುವಿಗೆ ಕಾರಣ: ಪುಟ್ಟಣ್ಣ ಪಟ್ಟದ್ದೂರು

ಮೂಡಿಗೆರೆ: TAPCMS ಚುನಾವಣೆಯಲ್ಲಿ ಗೆದ್ದ ಬೀಗಿದ ಎನ್ ಡಿಎ ಬೆಂಬಲಿತ ಅಭ್ಯರ್ಥಿಗಳು ಕಾರ್ಯಕರ್ತರ ಪರಿಶ್ರಮ ಗೆಲುವಿಗೆ ಕಾರಣವಾಗಿದೆ ಎಂದು ಪುಟ್ಟಣ್ಣ ಪಟ್ಟದ್ದೂರು ತಿಳಿಸಿದ್ದಾರೆ.

ಹೌದು .. ಟಿಎಪಿಸಿಎಂಎಸ್‌ ಚುನಾವಣೆಯಲ್ಲಿ ಅನುಕುಮಾರ್ (ಪಟ್ಟದ್ದುರು ಪುಟ್ಟಣ್ಣ) ನೇತೃತ್ವದ ಬಿಜೆಪಿ- ಜೆಡಿಎಸ್ ಮೈತ್ರಿ ಬೆಂಬಲಿತ ಅಭ್ಯರ್ಥಿಗಳು ಸಂಘದ ಒಟ್ಟು 8 ಸ್ಥಾಗಳ ಪೈಕಿ 7 ಸ್ಥಾನಗಳಲ್ಲಿ ಗೆಲವು ಸಾಧಿಸಿದ್ದಾರೆ. TAPCMS ಅಭಿವೃದ್ಧಿ ವೇದಿಕೆ ಬೆಂಬಲಿತರಲ್ಲಿ ರಂಜನ್ ಅಜಿತ್ ಕುಮಾರ್ ಅಭ್ಯರ್ಥಿ ಮಾತ್ರ ಜಯಗಳಿಸಿದ್ದಾರೆ
.

ಮೂಡಿಗೆರೆ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ(ಟಿಎಪಿಸಿಎಂಎಸ್)ಭಾನುವಾರ ನಡೆದ ಚುನಾವಣೆಯಲ್ಲಿ ಅನುಕುಮಾರ್ ನೇತೃತ್ವದ ಬಿಜೆಪಿ -ಜೆಡಿಎಸ್ ಮೈತ್ರಿ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಭಾರಿಸಿದ್ದಾರೆ.

ಭಾನುವಾರ ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ನಡೆದ ಚುನಾವಣೆ ಬಳಿಕ ಮತ ಎಣಿಕೆ ನಡೆದು ರಾತ್ರಿ 8 ಗಂಟೆ ವೇಳೆಗೆ ಫಲಿತಾಂಶ ಘೋಷಿಸಲಾಯಿತು. ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಅನುಕುಮಾರ್ ನೇತೃತ್ವದ ಬಿಜೆಪಿ- ಜೆಡಿಎಸ್ ಮೈತ್ರಿ ಬೆಂಬಲಿತ ಅಭ್ಯರ್ಥಿಗಳು ಸಂಘದ ಒಟ್ಟು 8ಸ್ಥಾನಗಳ ಪೈಕಿ 7 ಸ್ಥಾನಗಳಲ್ಲಿ ಗೆಲವು ಸಾಧಿಸಿದ್ದಾರೆ.

ಚುನಾವಣೆ ಅವಧಿ ಪೂರ್ಣಗೊಂಡಿದ್ದು ಮೂಡಿಗೆರೆ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಚುನಾವಣೆ ನಡೆಸಲಾಯಿತು.

ಚುನಾವಣೆಯಲ್ಲಿ ಗೆದ್ದು ಬೀಗಿದ ಅನುಕುಮಾರ್ ಬೆಂಬಲಿತ ಅಭ್ಯರ್ಥಿಗಳಿಗೆ ಬಿಜೆಪಿ ಹಿರಿಯ ಮುಖಂಡ ಪ್ರಾಣೇಶ್ ಎಂ ಕೆ ಶುಭ ಹಾರೈಸಿದರು.

ಈ ಬಾರಿ TAPCMS ಚುನಾವಣೆಗಳಲ್ಲಿ ಎನ್ ಡಿ ಎ ಬೆಂಬಲಿತ ಅಭ್ಯರ್ಥಿಗಳು ಗೆಲವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದೇವೆ ಎಂದರು. ಹಾಗೆ ಅನುಕುಮಾರ್ ಮಾತನಾಡಿ, ಕಾರ್ಯಕರ್ತರ ಪರಿಶ್ರಮದಿಂದ ಗೆಲುವು ನಮ್ಮದಾಗಿದ್ದು,ಹಿರಿಯರ ಮಾರ್ಗದರ್ಶನ. ಕಾರ್ಯಕರ್ತರ ರಾಜಕೀಯ ಚಾಣಾಕ್ಷತನವೇ ನಮ್ಮ ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗಿದೆ ಇದು ಮುಂಬರುವ ತಾಲೂಕು ಮತ್ತು ಜಿಲ್ಲಾಪಂಚಾಯತಿ ಚುನಾವಣೆಗಳಿಗೆ ಮುನ್ಸೂಚಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ನನ್ನನ್ನ ಹಾಗೂ ಬಿಜೆಪಿ -ಜೆಡಿಎಸ್ ಮೈತ್ರಿ ಅಭ್ಯರ್ಥಿಗಳನ್ನು ಎಲ್ಲ ಕಾರ್ಯಕರ್ತರು ಸಮಯ ಕೊಟ್ಟು ಕೆಲಸ ಮಾಡಿ ಗೆಲ್ಲಿಸಲು ಸಹಕಾರ ನೀಡಿದ್ದೀರಿ ಕಾರ್ಯಕರ್ತರಿಗೆ ಹಾಗೂ ಪ್ರತ್ಯಕ್ಷ – ಪರೋಕ್ಷ ವಾಗಿ ಶ್ರಮ ವಹಿಸಿದ ಬಿಜೆಪಿ ಜೆಡಿಎಸ್ ಪಕ್ಷಗಳ ಹಿರಿಯರಿಗೂ ವಿಶೇಷ ಧನ್ಯವಾದಗಳು. ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು

ಗೆದ್ದ ಅಭ್ಯರ್ಥಿಗಳ ಬೆಂಬಲಿಗರು ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು

ವರದಿ : ಪುನೀತ್ ಕಡಿದಾಳು 

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!