Saturday, February 7, 2026
Homeಜಿಲ್ಲಾಸುದ್ದಿಮೂಡಿಗೆರೆ: ಪಟ್ಟಣದಲ್ಲಿ ಮತ್ತೆ ಓಪನ್‌ ಆಗುತ್ತಾ ಥಿಯೇಟರ್:‌ ಕಾಯುತ್ತಿರುವ ಸಿನಿಪ್ರಿಯರು!

ಮೂಡಿಗೆರೆ: ಪಟ್ಟಣದಲ್ಲಿ ಮತ್ತೆ ಓಪನ್‌ ಆಗುತ್ತಾ ಥಿಯೇಟರ್:‌ ಕಾಯುತ್ತಿರುವ ಸಿನಿಪ್ರಿಯರು!

ಮೂಡಿಗೆರೆ: ಸಿನಿಮಾ ಥಿಯೇಟರ್ ಬಾಗಿಲು ಮುಚ್ಚಿ ಹಲವು ವರ್ಷಗಳ ಬಳಿಕ ಮತ್ತೆ ಆರಂಭ ಆಗುವ ಆಸೆಯಲ್ಲಿರುವ ಸಿನಿಪ್ರಿಯರು ಈಗಲೂ ಆ ದಿನಕೆ ಕಾಯುತ್ತಿದ್ದಾರೆ ನಮ್ಮ ಮೂಡಿಗೆರೆ ಸಾರ್ವಜನಿಕ ಬಂಧುಗಳು.

ಹೌದು.. ಮೂಡಿಗೆರೆಯ ಅದೆಷ್ಟೋ ಪ್ರೇಮಿಗಳ ಮನಗೆದ್ದ, ಹಿರಿಯರರಿಗೆ ಒಂದಿಷ್ಟು ನೆಮ್ಮದಿ ನೀಡಿದ, ಕಾಲೇಜು ವಿದ್ಯಾರ್ಥಿಗಳಿಗೆ ಸ್ನೇಹ ಬೆಸೆದ ಹೀಗೆ ಅನೇಕ ರೀತಿಯಲ್ಲಿ ಬಾಂದವ್ಯಕ್ಕೆ ಕಾರಣವಾಗಿದ್ದ ಸಂದೇಶ ಚಿತ್ರಮಂದಿರ ಬಾಗಿಲು ಮುಚ್ಚಿರುವುದು ಸೀನಿಪ್ರಿಯರಿಗೆ ದೊಡ್ಡ ನೋವು ತಂದಿದ್ದು ಮಾತ್ರ ಸತ್ಯ.

ತಾಲ್ಲೂಕಿನಲ್ಲಿ ದಶಕಗಳಿಂದ ಸಿನಿಪ್ರಿಯರಿಗೆ ರಂಜನೆ ನೀಡುತ್ತಿದ್ದ ಚಿತ್ರಮಂದಿರ ನಿರೀಕ್ಷಿತ ಆದಾಯ ಇರದ ಕಾರಣ ಬಾಗಿಲು ಮುಚ್ಚಿ ಹಲವು ವರ್ಷಗಳು ಕಳೆದಿವೆ. ಇದರಿಂದಾಗಿ ಈಚೆಗೆ ತೆರೆ ಕಾಣುವ ಹೊಸ ಸಿನಿಮಾ ನೋಡಲು ಜನರು ನೆರೆಯ ಚಿಕ್ಕಮಗಳೂರು ಬೇಲೂರು ಹಾಸನಕ್ಕೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.

ತಾಲ್ಲೂಕಿನಲ್ಲಿ ಸಂದೇಶ ಚಿತ್ರಮಂದಿರ ಒಂದೇ ಕಾರ್ಯನಿರ್ವಹಿಸುತ್ತಿದ್ದು ಹಿಂದಿನ ದಿನಗಳಲ್ಲಿ ಹೊಸ ಚಿತ್ರಗಳು ಚಿತ್ರಮಂದಿರಕ್ಕೆ ಕಾಲಿಡುತ್ತಲೇ ಪ್ರೇಕ್ಷಕರು ಭರ್ತಿಯಾಗಿ ಚಿತ್ರಮಂದಿರದ ಮಾಲಿಕರಿಗೆ ಕೈ ತುಂಬಾ ಆದಾಯ ಸಿಗುತ್ತಿತ್ತು. ಆದರೆ ದಿಡೀರ್ ಕುಸಿತ ಕಂಡ ಹಿನ್ನಲೆ ಬಾಗಿಲು ಮುಚ್ಚಿದ್ದೆವು ಅಂತಾರೆ ಚಿತ್ರ ಮಂದಿರದ ಮಾಲೀಕರು.

ಅದಲ್ಲದೆ ಈಗ ತಂತ್ರಜ್ಞಾನ ಸುಧಾರಣೆ ಆದಂತೆ ಮೊಬೈಲ್ ಹಾಗೂ ಟಿವಿಯಲ್ಲಿ ಹೊಸ ಚಿತ್ರಗಳು ನೋಡಲು ಸಿಗುತ್ತಿರುವ ಕಾರಣ ಚಿತ್ರಮಂದಿರಕ್ಕೆ ಬರುವವರ ಸಂಖ್ಯೆ ಕ್ರಮೇಣ ಕ್ಷೀಣಿಸುತ್ತ ಬಂದಿದೆ.

ಬಿಡುಗಡೆಯಾಗುವ ಹೊಸ ಚಿತ್ರಗಳನ್ನು ಲಕ್ಷ ಲಕ್ಷ ನೀಡಿ ಚಿತ್ರಮಂದಿರಕ್ಕೆ ತಂದರೂ ನಿರೀಕ್ಷಿತ ಪ್ರಮಾಣದಲ್ಲಿ ಜನರು ಬಾರದ ಕಾರಣ ಚಿತ್ರಮಂದಿರ ಮಾಲೀಕರಿಗೆ ನಷ್ಟವಾಗುತ್ತಿದ್ದ ಕಾರಣ ಬಂದ್‌ ಮಾಡುವ ಅನಿವಾರ್ಯತೆ ಎದುರಾಗಿದೆ

ಅದರಲ್ಲೂ ಮೂಡಿಗೆರೆ ಚಿತ್ರಮಂದಿರಕ್ಕೆ ಬಾರದಿರುವುದು ಚಿತ್ರಮಂದಿರಗಳ ಹಾನಿಗೆ ಬಹುದೊಡ್ಡ ಕಾರಣವಾಗಿದೆ.

ತಾಲ್ಲೂಕಿನ ಅತಿ ದೊಡ್ಡ ಸುಸಜ್ಜಿತ ಚಿತ್ರಮಂದಿರ ಎಂದರೆ ಸಂದೇಶ ಚಿತ್ರ ಮಂದಿರ. ಹೊಸದಾಗಿ ಬಿಡುಗಡೆಯಾಗುವ ಬಹುತೇಕ ಚಿತ್ರಗಳು ಇಲ್ಲಿಯೇ ತೆರೆಕಾಣುತ್ತಿದ್ದವು. ಹಾನಿಯಾದರೂ ಚಿಂತೆ ಮಾಡದ ಚಿತ್ರಮಂದಿರ ಮಾಲಿಕ ಹೊಸ ಚಿತ್ರಗಳನ್ನು ಖರೀದಿ ಮಾಡಿ ತಂದು ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದ್ದರು.

ಆದರೆ ದಿಡೀರ್ ಆದಾಯ ಇಲ್ಲದ ಹೊಡೆತ ಮಾಲೀಕರಿಗೆ ಎದ್ದೇಳಲು ಅವಕಾಶ ನೀಡಲಿಲ್ಲ. ಅನ್ನೋದು ಅಷ್ಟೇ ಸತ್ಯ

ಈ ದಿನಗಳಲ್ಲಿ ಇಲ್ಲಿ ಚಿತ್ರ ಪ್ರದರ್ಶನ ಸಂಪೂರ್ಣ ಸ್ಥಗಿತಗೊಂಡಿದೆ. ಸಿನಿ ಪ್ರೇಕ್ಷಕರು ಬಿಡುಗಡೆಯಾಗುವ ಹೊಸ ಸಿನಿಮಾ ವೀಕ್ಷಣೆಗೆ ದೂರದ ಊರುಗಳಿಗೆ ಹೋಗುತ್ತಿದ್ದಾರೆ.

ಮತ್ತೆ ಆರಂಭವಾಗಲಿ ಮಲ್ಟಿಪ್ಲೆಕ್ಸ್‌ ಸಂದೇಶ ಚಿತ್ರಮಂದಿರ ಬರಲಿ ಅಂತಾರೆ ಸಿನಿ ರಸಿಕರು

ತಾಲ್ಲೂಕಿನ ಚಿತ್ರಮಂದಿರಮುಚ್ಚಿರುವುದು ಸಿನಿಪ್ರಿಯರಿಗೆ ನಿರಾಸೆಯಾಗಿದೆ. ಪ್ರಸಿದ್ಧ ಪ್ರವಾಸಿ ತಾಣ ನಮ್ಮ ಮೂಡಿಗೆರೆ ಕೂಡ ಚಿತ್ರಮಂದಿರ ಇಲ್ಲ. ಈಗಿರುವ ಚಿತ್ರಮಂದಿರವನ್ನು ಮಲ್ಟಿಪ್ಲೆಕ್ಸ್‌ ಚಿತ್ರಮಂದಿರವನ್ನಾಗಿ ಬದಲಾಯಿಸಬೇಕು. ಸಿನಿಮಾರಂಗ ಚಿತ್ರಮಂದಿರ ಮಾಲೀಕರ ನೆರವಿಗೆ ಮುಂದಾಗಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ

ವರದಿ :ಪುನೀತ್ ಕಡಿದಾಳ್ 

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!