ಮೂಡಿಗೆರೆ: ಶ್ರೀರಾಮನವಮಿ ಪ್ರಯುಕ್ತ ವಿಶ್ವ ಹಿಂದೂ ಪರಿಷತ್ ಬಜರಂಗದಳ ಸಂಘಟನೆ ಮೂಡಿಗೆರೆ ಪ್ರಖಂಡ ಇವರ ವತಿಯಿಂದ ಪಾನಕ ಮಜ್ಜಿಗೆ ಹಣ್ಣು ವಿತರಣೆ ಕಾರ್ಯಕ್ರಮವನ್ನು ಪಟ್ಟಣದ ರೋಟರಿ ವೃತ್ತದಲ್ಲಿ ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಅಧ್ಯಕ್ಷ ಸುದೇವ್ ಗೌಡ ಗುತ್ತಿ ಮಾತನಾಡಿ ಸಂಘಟನೆಯು ಧಾರ್ಮಿಕ ಕೆಲಸಗಳಲ್ಲದೆ ರಕ್ತ ದಾನ ಶಿಬಿರ. ಅನಾಥ ಆಶ್ರಮಗಳಿಗೆ ಆಹಾರ ಕಿಟ್ ಆರೋಗ್ಯ ಶಿಬಿರ ಅನಾರೋಗ್ಯದಿಂದ ಬಳಳುತ್ತಿರುವ ಬಡವರಿಗೆ ಆರ್ಥಿಕ ಸಹಾಯ ಸೇರಿದಂತೆ ಹಲವು ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡು ಬಂದಿದೆ ಆದರೂ ಕೂಡ ಸಂಘಟನೆಯು ಕೆಲ ದುಷ್ಟರ ಕಣ್ಣಿಗೆ ಕೆಟ್ಟದಾಗಿ ಕಾಣುತ್ತದೆ ಉತ್ತಮ ಕೆಲಸಗಳು ಕಾಣುವುದಿಲ್ಲ ಎಂದು ಕಿಡಿ ಕಾರಿದ್ದರು.

ಹಿಂದೂಗಳು ಆರಾಧ್ಯ ದೈವ ರಾಮನನ್ನು ಸ್ಮರಣೆಯು ಮಾನಸಿಕ ಶಾಂತಿ, ನೆಮ್ಮದಿಯನ್ನು ನೀಡುತ್ತದೆ. ಹಲವಾರು ವರ್ಷಗಳಿಂದ ರಾಮನವಮಿ ದಿನದಂದು ತಂಪು ಪಾನೀಯ ನೀಡುತ್ತಾ ಬಂದಿರುವುದಾಗಿ ತಿಳಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಬಜರಂಗದಳ ತಾಲ್ಲೂಕು ಸಂಯೋಜಕ ಸಂತೋಷ ಶುಭನಗರ ಅಯೋಧ್ಯೆ ಪ್ರಭು ಶ್ರೀ ರಾಮನ ಸಡಗರದ ಜನುಮದಿನ ಆಚರಿಸುವ ಉದ್ದೇಶದಿಂದ ಬೇಸಿಗೆಯ ಭೀಕರ ಬಿಸಿಲಿನ ಬೇಗೆಗೆ ಸಾರ್ವಜನಿಕರಿಗೆ ತಂಪು ಪಾನೀಯ ಹಂಚುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದೆ.
ರಾಮನವಮಿ ಹಬ್ಬ ಇಡಿ ಹಿಂದೂ ಬಾಂಧವರಿಗೆ ಶ್ರೇಷ್ಠವಾಗಿದ್ದು ಧರ್ಮ, ಸತ್ಯತೆ, ಪ್ರಾಮಾಣಿಕತೆ ಹಾಗೂ ನ್ಯಾಯದ ಸಂಕೇತಕವಾಗಿದೆ. ಸಮಾಜದಲ್ಲಿ ಸೌಹಾರ್ದತೆ, ಪರಸ್ಪರ ಗೌರವ, ಏಕತಾ ಮನೋಭಾವನೆ ಮೂಡಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಬಜರಂಗದಳ ತಾಲ್ಲೂಕು ಸಹ ಸಂಯೋಜಕ ಪ್ರಣೀತ್, ಕಸಬಾ ಹೋಬಳಿ ಸಂಯೋಜಕ ಶಶಿ ಕಿತ್ತಲೇಗಂಡಿ ಕಾರ್ಯಕರ್ತರಾದ ರತನ್ ಊರುಬಗೆ, ಸಾಗರ್ ಕುಶಾಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು
ವರದಿ:ಪುನೀತ್ ಕಡಿದಾಳು
9483811948
