Wednesday, March 25, 2026
Homeಜಿಲ್ಲಾಸುದ್ದಿಮೂಡಿಗೆರೆ: ಮತ್ತೊಂದು ಬಲಿಗಾಗಿ ಕಾಯುತ್ತಿದೆ ಯಮಗುಂಡಿ: ಅಧಿಕಾರಿಗಳೇ ಯಾಕಿಷ್ಟು ನಿರ್ಲಕ್ಷ್ಯ?

ಮೂಡಿಗೆರೆ: ಮತ್ತೊಂದು ಬಲಿಗಾಗಿ ಕಾಯುತ್ತಿದೆ ಯಮಗುಂಡಿ: ಅಧಿಕಾರಿಗಳೇ ಯಾಕಿಷ್ಟು ನಿರ್ಲಕ್ಷ್ಯ?

ಮೂಡಿಗೆರೆ: ಇತ್ತೀಚೆಗೆ ಗುಂಡಿಗೆ ಆಟೋ ಚಾಲಕ ಸಾವನ್ನಪ್ಪಿದ್ರೂ ಮಾತ್ರ ಅಧಿಕಾರಿಗಳು, ಸ್ಥಳೀಯ ಶಾಸಕರು ಯಾಕಿಷ್ಟು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಹಾಗೆ ಮತ್ತೊಂದು ಬಲಿಗಾಗಿ ಕಾಯುತ್ತಿದೆಯಾ ಯಮಗುಂಡಿ, ಶಾಸಕರೇ ಕ್ಷೇತ್ರದ ತೆರಿಗೆ ಹಣ ಏನಾಯ್ತು ಎಂದು ಸಾರ್ವಜನಿಕರು ಪ್ರಶ್ನೆ ಮಾಡುವಂತ ಪರಿಸ್ಥಿತಿ ಎದುರಾಗಿದೆ.

ಹೌದು .. ಇದೆ ಗುಂಡಿಯಿಂದ ಆಟೋ ಚಾಲಕ ಮಂಜುನಾಥ್ ಅಸುನಿಗಿದ್ರು ನಿರ್ಲಕ್ಷ ಏಕೆ ನೆಪ ಮಾತ್ರಕ್ಕೆ ಗುಂಡಿ ಮುಚ್ಚಿಸಿಸುತ್ತೇವೆ ಎಂದಿದ್ದು ಅಷ್ಟೇ ಅಧಿಕಾರಿಗಳು ಆದರೆ ಜಲ್ಲಿ ಹಾಕಿ ಪರಾರಿಯಾಗಿದ್ದಾರೆ. ಮೂಡಿಗೆರೆ ಕ್ಷೇತ್ರದ ಜನರ ಜೀವಗಳಿಗೆ ಬೆಲೆ ಇಲ್ಲವೇ ಎಂದು ಈಗ ಎಲ್ಲರ ಪ್ರಶ್ನೆ ಕಾಡತೊಡಗಿದೆ.

ಮೂಡಿಗೆರೆ ಕ್ಷೇತ್ರದ ಉದ್ದಗಲಕ್ಕೂ ರಸ್ತೆಗುಂಡಿಗಳದ್ದೆ ದರ್ಬಾರ್ ಬರಿ ಗುಂಡಿಗಳು ಅಲ್ಲ ಯಮ ಗುಂಡಿ. ರಸ್ತೆಯಲ್ಲಿ ಗುಂಡಿ ಮುಚ್ಚಲು ಶಾಸಕರಿಗೆ ನೀಡಲಾದ ಅನುದಾನ ರಾಜ್ಯ ಸರ್ಕಾರ ನೀಡಿತ್ತಿಲ್ಲವೇ. ಕ್ಷೇತ್ರದ ತೆರಿಗೆ ಹಣ ಏನಾಯ್ತು ಹಾಗೆ ಮೂಡಿಗೆರೆ ವಿಧಾನಸಭಾ ಕ್ಷೇತ್ರ ರಾಜ್ಯ ಕಾಂಗ್ರೇಸ್ ಸರ್ಕಾರ ಕಿಮ್ಮಕ್ಕು ನೀಡುತ್ತಿಲ್ಲವೇ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರುತ್ತಿರುವ ಜನ

ನಗರದ ಪ್ರಮುಖ ರಸ್ತೆ ಗಳೆಲ್ಲವೂ ಗುಂಡಿಮಯವಾಗಿದ್ದು ಹದಗೆಟ್ಟ ಮೂಲಸೌಕರ್ಯಗಳ ಬಗ್ಗೆ ಸಾರ್ವಜನಿಕರ ಆಕ್ರೋಶ

ನಮ್ಮ ಕ್ಷೇತ್ರದ ಅಭಿವೃದ್ಧಿ ಹಾಗೂ ಜೀವಗಳಿಗಾಗಿ ಪಬ್ಲಿಕ್ ಇಂಪ್ಯಾಕ್ಟ್ ದಿಟ್ಟ ಹೆಜ್ಜೆ ಇಡುತ್ತಿದ್ದು ಮೂಡಿಗೆರೆ ನಲ್ಲಿ ಹೆಚ್ಚುತ್ತಿದೆ ವಾಹನಗಳ ಸಂಖ್ಯೆ ರಸ್ತೆ ಜಾಲ ಮತ್ತು ಚರಂಡಿಗಳನ್ನು ದುರಸ್ತಿ ಮಾಡಲು ಮತ್ತು ಪುನರ್ನಿರ್ಮಿಸಲು ಕ್ಷೇತ್ರದ ಶಾಸಕಿ ನಯನ ಮೋಟಮ್ಮ ಅವರಿಗೆ ಸಾರ್ವಜನಿಕರ ಒತ್ತಾಯ. ನಿಮ್ಮ ಹಣದಿಂದ ಅಲ್ಲ ನಮ್ಮ ಹಣದಿಂದ ರಸ್ತೆ ಸರಿ ಪಡಿಸಿ ಎಂದು ಸಾರ್ವಜನಿಕರು ಕೂಗಿ ಕೂಗಿ ಹೇಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ವರದಿ :ಪುನೀತ್ ಕಡಿದಾಳ್ 

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!