ಮೂಡಿಗೆರೆ: ಯುವಕ ಓದಿದ್ದು ಬಿಎಹೆಚ್‌ಎಂ ಆತನಿಗೆ ಪುಸ್ತಕ ಎಂದರೆ ಅಚ್ಚುಮೆಚ್ಚು. ಬಿಡುವಾಗಿದ್ದಾಗ ಇನ್ಸ್ಟಾಗ್ರಾಂನಲ್ಲಿ ಸಮಯ ಕಳೆಯುತ್ತಿದ್ದ. ಅದೇ ಇನ್ಸ್ಟಾಗ್ರಾಂ ಆ ಯುವಕನನ್ನು ರಾಷ್ಟ್ರೀಯ ಮಟ್ಟದ ಅವಾರ್ಡ್ ಪಡೆದಿದ್ದು ಒಂದು ಸಾಧನೆಯ ಕತೆಯಾಗಿದೆ.

ತಂದೆ ಹಸೈನಾರ್ ಬಿ.ಎಂ. ಟಿಂಬರ್ ಕೆಲಸಗಾರ, ತಾಯಿ ಫಾತಿಮಾ ದಂಪತಿಗಳ ಪುತ್ರ ಇರ್ಷಾನ್ ಅವಾರ್ಡ್ ಪಡೆದ ಯುವಕ, ಓದಿದ್ದು ನಳಂದ ಶಾಲೆಯಲ್ಲಿ ಪ್ರೈಮರಿಯವರಗೆ, ಹೈಸ್ಕೂಲ್ ಸೇಂಟ್ ಮಾರ್ಥಾಸ್ ಕಾನ್ವೆಂಟ್ ಶಾಲೆಯಲ್ಲಿ, ಜೂನಿಯರ್ ಕಾಲೇಜಿನಲ್ಲಿ ಪಿಯು ಮುಗಿಸಿ ಬೆಂಗಳೂರಿನ ಮೌಂಟೇನ್ ಟ್ರಯಲ್ಸ ನಲ್ಲಿ ಬಿಎಚ್‌ಎಂ ಆರು ತಿಂಗಳುಗಳ ಕಾಲ ತರಬೇತಿ ಮುಗಿಸಿ ಮೂಡಿಗೆರೆ ಹಿಂದಿರುಗಿದ ಯುವಕ.
ಇರ್ಷಾನ್ ಸೋಷಿಯಲ್ ಮೀಡಿಯಾ ಇನ್ಸ್ಟಾಗ್ರಾಂನಲ್ಲಿ ಫ್ಯಾಶನ್ ಶೋ ನೋಡುತ್ತಿರಬೇಕಾದರೆ ತಾನು ಫ್ಯಾಶನ್ ಶೋನಲ್ಲಿ ಭಾಗವಹಿಸಿ ಊರಿಗೆ ಕೀರ್ತಿ ತರಬೇಕೆಂದು ನಿರ್ಧರಿಸಿದವನೇ ಮೂಡಿಗೆರೆ ಪಟ್ಟಣದಲ್ಲಿ ಫ್ಯಾಶನ್ ಶೋ ತರಬೇತಿ ನೀಡುತ್ತಿದ್ದ ಅಪ್ಸನ್ ಅವರ ಬಳಿ ಫ್ಯಾಶನ್ ಶೋ ತರಬೇತಿ ಪಡೆದರು.

2025 ರ ನವೆಂಬರ್ 16 ರಂದು ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಮಲೆನಾಡು ಇವೇಂಟ್ಸ್ ನ ವತಿಯಿಂದ ನಡೆದ ಫ್ಯಾಶನ್ ಶೋನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ನಂತರ 2025 ಡಿಸೆಂಬರ್ 28 ರಂದು ಶಿವಮೊಗ್ಗದ ಶಿರಾಳ ಕೊಪ್ಪದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಫ್ಯಾಶನ್ ಶೋನಲ್ಲಿ ಭಾಗವಹಿಸಿ ಐಕಾನ್ ಆಫ್ ಕರ್ನಾಟಕ 2025 ಪ್ರಶಸ್ತಿಯನ್ನು ಪಡೆಯುವುದರೊಂದಿಗೆ ರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಗೆ ಹೆಸರು ತಂದಿದ್ದಾರೆ.
2026 ರ ಜನವರಿ 11 ರಂದು ಮಂಗಳೂರಿನಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಫ್ಯಾಷನ್‌ಶೋನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆಯಬೇಕೆನ್ನುವುದು ತಮ್ಮ ಗುರಿಯಾಗಿದೆ ಎಂದರು.
ಇಂದಿನ ದಿನಗಳಲ್ಲಿ ಕೆಲವು ಯುವಕ-ಯುವತಿಯರು ಇನ್ಸ್ಟಾಗ್ರಾಂ ಮತ್ತು ಫೇಸ್ ಬುಕ್ ನಲ್ಲಿ ಕಾಲ ಕಳೆಯುತ್ತಿದ್ದಾರೆ. ಆದರೆ ಪುಸ್ತಕದತ್ತ ಮುಖ ಮಾಡದಿರುವ ಕಾಲದಲ್ಲಿ ಪುಸ್ತಕ ಓದುವುದರೊಂದಿಗೆ ಇನ್ಸ್ಟಾಗ್ರಾಂ ನಲ್ಲಿ ಫ್ಯಾಶನ್ ಶೋ ನೋಡಿ ತಾನು ಏಕೆ ಪ್ರಯತ್ನಿಸಬಾರದು ಎಂದು ಪಣ ತೊಟ್ಟು ತರಬೇತಿ ಪಡೆದು ರಾಷ್ಟ್ರೀಯ ಮಟ್ಟದಲ್ಲಿ ಮೂಡಿಗೆರೆಗೆ ಕೀರ್ತಿ ತಂದಿರುವ ಇರ್ಫಾನ್ ಇಂದಿನ ಯುವ ಪೀಳಿಗೆಗೆ ಮಾದರಿ ಎಂದರೇ ತಪ್ಪಾಗಲಾರದು.
ಬಾಕ್ಸ್ ಐಟಂ
ಇನ್ಸ್ಟಾಗ್ರಾಂ ಎನ್ನುವುದು ಬರೀ ರೀಲ್ಸ್ ಮಾಡುವುದು ಅಲ್ಲಾ ಅದರಿಂದ ಕಲಿಯಬೇಕಾಗಿದ್ದು ಬಹಳಷ್ಟಿದೆ. ಇನ್ಸ್ಟಾಗ್ರಾಂ ಒಂದು ಭಾಗವಾದರೆ ಪುಸ್ತಕ ಬಹಳ ಮಹತ್ವವನ್ನು ಹೊಂದಿದೆ ಎನ್ನುವುದಕ್ಕೆ ನನ್ನ ಸಹೋದರ ಒಂದು ಉದಾಹರಣೆಯಾಗಿದ್ದಾರೆ ಎಂದು ಇರ್ಫಾನ್ ಸಹೋದರಿ ಮುಫೀದಾ ತಿಳಿಸಿದ್ದಾರೆ.
