Tuesday, August 11, 2026
Homeಜಿಲ್ಲಾಸುದ್ದಿPower Cut: ಜನವರಿ 31ರಿಂದ ಫೆ.1ರವರೆಗೆ ಶೃಂಗೇರಿ–ಕೊಪ್ಪ–ಎನ್‌.ಆರ್‌.ಪುರದಲ್ಲಿ ಪವರ್‌ ಕಟ್‌!

Power Cut: ಜನವರಿ 31ರಿಂದ ಫೆ.1ರವರೆಗೆ ಶೃಂಗೇರಿ–ಕೊಪ್ಪ–ಎನ್‌.ಆರ್‌.ಪುರದಲ್ಲಿ ಪವರ್‌ ಕಟ್‌!

Telegram Group
Join Now

ಎನ್‌.ಆರ್‌.ಪುರ: ಜನವರಿ 31ರಿಂದ ಫೆ.1ರವರೆಗೆ ಶೃಂಗೇರಿ, ಕೊಪ್ಪ, ಎನ್‌.ಆರ್‌.ಪುರ ತಾಲೂಕಿನ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಚಿಕ್ಕಮಗಳೂರು ಮೆಸ್ಕಾಂ ವಿಭಾಗದಿಂದ ತಿಳಿಸಲಾಗಿದೆ.

ಹೌದು, ಚಿಕ್ಕಮಗಳೂರು ಕಾರ್ಯಚರಣೆ ವಿಭಾಗ ವ್ಯಾಪ್ತಿಯ ಜೇನುಗದ್ದೆ–ಬಾಳೆಹೊನ್ನೂರು ಡಿ.ಸಿ ಮಾರ್ಗದಲ್ಲಿನ ಗೋಪುರ ಸಂಖ್ಯೆ 195ರಲ್ಲಿ ಮಳೆ–ಗಾಳಿಯ ಪರಿಣಾಮವಾಗಿ ಏಪ್ರಿಲ್‌ 29ರಂದು (2025) ಹಾನಿಗೊಳಗಾಗಿತ್ತು. ಇದರಿಂದ ಗೋಪುರವನ್ನು ಜನವರಿ 31 ಮತ್ತು ಫೆಬ್ರವರಿ 1ರಂದು ಬದಲಾಯಿಸುವ ಕಾರ್ಯವನ್ನು ಕೈಗೊಳ್ಳಲಾಗುತ್ತಿರುವುದರಿಂದ 66/33/11 ಕೆ.ವಿ ಬಾಳೆಹೊನ್ನೂರು ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ ಎಲ್ಲಾ 66 ಕೆ.ವಿ ಹಾಗೂ 11 ಕೆ.ವಿ ಫೀಡರ್‌ಗಳಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.

ಹೀಗಾಗಿ ಶೃಂಗೇರಿ ತಾಲ್ಲೂಕು, ಕೊಪ್ಪ ತಾಲ್ಲೂಕು ಹಾಗೂ ನರಸಿಂಹರಾಜಪುರ ತಾಲ್ಲೂಕುಗಳಲ್ಲಿ 2026ರ ಜನವರಿ 31ರ ಬೆಳಿಗ್ಗೆ 6 ಗಂಟೆಯಿಂದ ಫೆಬ್ರವರಿ 1ರ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments