Friday, March 27, 2026
Homeಜಿಲ್ಲಾಸುದ್ದಿವಸತಿ ಹಕ್ಕು ಪತ್ರ ವಿತರಣೆಯಲ್ಲಿ ಹೊಸ ಮೈಲಿಗಲ್ಲು: ಫೆಬ್ರವರಿಯಲ್ಲಿ 1.10 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ

ವಸತಿ ಹಕ್ಕು ಪತ್ರ ವಿತರಣೆಯಲ್ಲಿ ಹೊಸ ಮೈಲಿಗಲ್ಲು: ಫೆಬ್ರವರಿಯಲ್ಲಿ 1.10 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ

ಬೆಂಗಳೂರು: ರಾಜ್ಯದ ತಾಂಡಾ, ಹಟ್ಟಿ ಹಾಗೂ ಗೊಲ್ಲರಹಟ್ಟಿಗಳಲ್ಲಿ ದಶಕಗಳಿಂದ ವಾಸಿಸುತ್ತಿರುವ ದಾಖಲೆರಹಿತ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸುವ ಪ್ರಕ್ರಿಯೆಯಲ್ಲಿ ಸರ್ಕಾರ ಮಹತ್ವದ ಪ್ರಗತಿ ಸಾಧಿಸಿದೆ. ಇಂದು ನಡೆದ ಜಿಲ್ಲಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಸಚಿವರು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹೊಸ ಗುರಿಯನ್ನು ನೀಡಿದ್ದು, ಬರುವ ಫೆಬ್ರವರಿ ತಿಂಗಳೊಳಗೆ 1.10 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡಲು ನಿರ್ಧರಿಸಿದ್ದಾರೆ.

2017ರಲ್ಲಿ ತರಲಾದ ಕಾನೂನು ತಿದ್ದುಪಡಿಯ ನಂತರ 2023ರ ಮೇ ವರೆಗಿನ ಆರು ವರ್ಷಗಳ ಅವಧಿಯಲ್ಲಿ 1.08 ಲಕ್ಷ ಹಕ್ಕುಪತ್ರಗಳನ್ನು ವಿತರಿಸಲಾಗಿತ್ತು. ಆದರೆ ಕಳೆದ ಕೇವಲ ಒಂದೂವರೆ ವರ್ಷದಲ್ಲಿ (ಮೇ 2023 ರಿಂದ 2025ರ ವರೆಗೆ) ಈಗಾಗಲೇ 1.11 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರಗಳನ್ನು ಯಶಸ್ವಿಯಾಗಿ ತಲುಪಿಸಲಾಗಿದೆ. ಈಗ ಪ್ರಕಟಿಸಿರುವ ಹೊಸ ಗುರಿಯೂ ಸೇರಿದರೆ ಒಟ್ಟು 4 ಲಕ್ಷ ಕುಟುಂಬಗಳಿಗೆ ಮಾಲೀಕತ್ವದ ಗ್ಯಾರಂಟಿ ಸಿಕ್ಕಂತಾಗುತ್ತದೆ.

ಈ ಯೋಜನೆಯಡಿ ಕಂದಾಯ ಇಲಾಖೆಯ ಅಧಿಕಾರಿಗಳೇ ನೇರವಾಗಿ ಜನರ ಮನೆ ಬಾಗಿಲಿಗೆ ತೆರಳಿ ಸರ್ವೇ ಕಾರ್ಯ, ದಾಖಲೆಗಳ ತಯಾರಿ, ಅಧಿಸೂಚನೆ ಮತ್ತು ನೋಂದಣಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದ್ದಾರೆ. ಬಡ ಕುಟುಂಬಗಳು ಯಾವುದೇ ಅರ್ಜಿ ಸಲ್ಲಿಸದೆ ಅಥವಾ ಕಚೇರಿಗಳಿಗೆ ಅಲೆಯದೆ ಪಕ್ಕಾ ಖಾತೆ ಮತ್ತು ಸಂಪೂರ್ಣ ಮಾಲೀಕತ್ವ ಪಡೆಯುವಂತೆ ಮಾಡುವ ಈ ಅಭಿಯಾನವು ರಾಜ್ಯಾದ್ಯಂತ ಚುರುಕುಗೊಂಡಿದೆ. ಅತಂತ್ರ ಸ್ಥಿತಿಯಲ್ಲಿದ್ದ ನಿವಾಸಿಗಳಿಗೆ ಶಾಶ್ವತ ನೆಮ್ಮದಿ ಮತ್ತು ಕಾನೂನಾತ್ಮಕ ಭದ್ರತೆ ಒದಗಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!