Thursday, May 7, 2026
Homeಕ್ರೈಮ್ಶೃಂಗೇರಿ ಕ್ಷೇತ್ರದ ಮತ ಎಣಿಕೆಯಲ್ಲಿ ಲೋಪ: ಟಿ. ಡಿ.ರಾಜೇಗೌಡರಿಂದ ಚುನಾವಣಾ ಅಧಿಕಾರಿಗೆ ದೂರು

ಶೃಂಗೇರಿ ಕ್ಷೇತ್ರದ ಮತ ಎಣಿಕೆಯಲ್ಲಿ ಲೋಪ: ಟಿ. ಡಿ.ರಾಜೇಗೌಡರಿಂದ ಚುನಾವಣಾ ಅಧಿಕಾರಿಗೆ ದೂರು

ಶೃಂಗೇರಿ ಅಂಚೆ ಮತ ಮರು ಎಣಿಕೆಯಲ್ಲಿ ಪರಾಜಿತ ಕಾಂಗ್ರೆಸ್​​ ಅಭ್ಯರ್ಥಿ ಟಿ.ಡಿ. ರಾಜೇಗೌಡ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಯನ್ನು ಭೇಟಿಯಾಗಿ ಮತಪತ್ರ ತಿದ್ದಿರುವುದಾಗಿ ಆರೋಪಿಸಿ ತನಿಖೆ ನಡೆಸುವಂತೆ ದೂರು ನೀಡಿದ್ದಾರೆ.‌

ಭೇಟಿ ಬಳಿಕ ಮಾತನಾಡಿದ ಅವರು, 2023ರ ಚುನಾವಣೆ ಮತ ಎಣಿಕೆಯ ವೇಳೆ ಜೆಡಿಎಸ್‌‌ ಕಾಂಗ್ರೆಸ್​, ಬಿಜೆಪಿ, ಪಕ್ಷೇತರರ ಅಭ್ಯರ್ಥಿಗಳ ಕೌಂಟಿಂಗ್ ಏಜೆಂಟ್ ಇದ್ದರು. ಪಾರದರ್ಶಕವಾಗಿ ಮತ ಎಣಿಕೆ ಆಗಿತ್ತು. ಮತ ಎಣಿಕೆ ಬಳಿಕ ರಾಜೇಗೌಡ ಗೆದ್ದರು ಎಂದು ಘೋಷಣೆ ಮಾಡಿದ್ದರು. ವ್ಯಾಲಿಡ್​​ ಯಾವುದು ಇನ್‌ವ್ಯಾಲಿಡ್ ಯಾವುದು ಎಂದು ಎಲ್ಲರಿಗೂ ತೋರಿಸಿದ್ದರು. ಆಮೇಲೆ ನನ್ನ ವಿರುದ್ಧ ಎಲೆಕ್ಷನ್ ಫಿಟಿಶನ್ ಹಾಕಿ, ಅನೇಕ ಆರೋಪ ಮಾಡಿದರು. ಈ ಹಿನ್ನೆಲೆ ಮರು ಎಣಿಕೆಗೆ ಉಚ್ಚ ನ್ಯಾಯಾಲಯ ಆದೇಶ ಮಾಡಿತ್ತು ಎಂದು ವಿವರಿಸಿದರು.

ಹೈಕೋರ್ಟ್ 279 ಇನ್‌ವ್ಯಾಲಿಡ್ ಮತವನ್ನು ರೀ ಕೌಂಟ್ ಮಾಡಲು ಹೇಳಿದರು. ಮರು ಎಣಿಕೆ ವೇಳೆ ಬಂಡಲ್ ಬಂಡಲ್ ಇನ್‌ವ್ಯಾಲಿಡ್ ಆಗಿದೆ. ವೋಟ್ ಟ್ಯಾಂಪರಿಂಗ್ ಆಗಿದೆ ಎನ್ನುವುದು ನಮ್ಮ ಅನುಮಾನ. ನ್ಯಾಯಯುತ ತನಿಖೆ ಆಗಲಿ ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೇವೆ. ಸೆಂಟ್ರಲ್ ಎಲೆಕ್ಷನ್ ಕಮಿಷನ್‌ಗೆ ಮನವಿ ಕಳುಹಿಸುತ್ತೇವೆ‌ ಎಂದು ಹೇಳಿದ್ದಾರೆ. ಯಾವ ಪಕ್ಷದವರಿಗೂ ಈ ರೀತಿಯ ಅನ್ಯಾಯ ಆಗಬಾರದು. ಎಲೆಕ್ಷನ್ ಕಮಿಷನ್ ಮೇಲೆ ನಂಬಿಕೆ ಇದೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!