ಮೂಡಿಗೆರೆ: ತಾಲ್ಲೂಕಿನ ಬಣಕಲ್ ನ ವಿದ್ಯಾರ್ಥಿನಿ ಪ್ರೇರಣಾ ಪಿ.ಅವರು ಬಿಬಿಎ ಪದವಿಯಲ್ಲಿ 10ನೇ ರ್‍ಯಾಂಕ್ ಪಡೆಯುವ ಮೂಲಕ ಕೀರ್ತಿ ತಂದಿದ್ದಾರೆ.
ಪ್ರೇರಣಾ ಪಿ ಅವರು ಕುವೆಂಪು ವಿಶ್ವವಿದ್ಯಾಲಯದ ಚಿಕ್ಕಮಗಳೂರಿನ ಎಂಇಎಸ್ ಎಂಎಸ್ ಪಿಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮುಗಿಸಿ 10ನೇ ರ್‍ಯಾಂಕ್ ತಮ್ಮದಾಗಿಸಿಕೊಂಡು ಮಲೆನಾಡಿಗೆ ಹೆಮ್ಮೆಯ ಸಾಧನೆ ಗೈದಿದ್ದಾರೆ. ಪ್ರಸ್ತುತ ಬೆಂಗಳೂರಿನ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಮಾಡುತ್ತಿದ್ದು ಉತ್ತಮ ಗುರಿ ಹೊಂದಿದ್ದಾರೆ.
ಮೂಲತಃ ಬಣಕಲ್ ನವರಾಗಿದ್ದು ಇವರು ಶೋಭಾ ಎಂ.ಆರ್ ಅವರ ಪುತ್ರಿ.ಪ್ರೇರಣಾ ಅವರ ಸಾಧನೆ ಮಹತ್ವಾಕಾಂಕ್ಷಿ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಮತ್ತು ಬಣಕಲ್ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಹೆಮ್ಮೆಯ ಪ್ರತೀಕವಾಗಿದ್ದಾರೆ. ಇವರ ಸಾಧನೆಗೆ ಬಣಕಲ್ ಗ್ರಾಮಸ್ಥರು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.
