Saturday, August 8, 2026
Homeಜಿಲ್ಲಾಸುದ್ದಿಬಸವಾದಿ ಶರಣರಲ್ಲಿ ಒಬ್ಬರಾದ ವಚನಕಾರ ನುಲಿಯ ಚಂದಯ್ಯನವರು: ಶಾಸಕ ಸಿಮೆಂಟ್ ಮಂಜು

ಬಸವಾದಿ ಶರಣರಲ್ಲಿ ಒಬ್ಬರಾದ ವಚನಕಾರ ನುಲಿಯ ಚಂದಯ್ಯನವರು: ಶಾಸಕ ಸಿಮೆಂಟ್ ಮಂಜು

Telegram Group
Join Now

ಸಕಲೇಶಪುರ: ಶರಣ ನುಲಿಯ ಚಂದಯ್ಯನವರು ಕಾಯಕದಿಂದ ಬಂದ ಹಣದಿಂದ ಜಂಗಮ ದಾಸೋಹ ನಡೆಸುತ್ತಿದ್ದ ಒಬ್ಬ ಕಾಯಕ ಜೀವಿ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಶನಿವಾರ ಮಿನಿವಿಧಾನಸೌಧ ದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಹಮ್ಮಿಕೊಳ್ಳಲಾಗಿದ್ದ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.12ನೇ ಶತಮಾನದಲ್ಲಿ ಅಣ್ಣಬಸವಣ್ಣನವರ ಸಮಕಾಲಿನ ಬಸವಾದಿ ಶರಣರಲ್ಲಿ ಒಬ್ಬರಾದ ವಚನಕಾರ ನುಲಿಯ ಚಂದಯ್ಯನವರು ಕಲ್ಯಾಣದ ಹೊರ ವಲಯದಲ್ಲಿರುವ ಕೆರೆ ನೀರಿನ ದಂಡೆಯಲ್ಲಿ ಬೆಳೆದ ಸೊಗಸಾದ ಹುಲ್ಲು ತಂದು ಹಗ್ಗ ಹೊಸೆದು ಮಾರಿ ಅದರಲ್ಲಿ ಬಂದ ಹಣದಿಂದ ಜಂಗಮ ದಾಸೋಹ ನಡೆಸುತ್ತಿದ್ದರು.

ಹಾಗೆ ತಮ್ಮ ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿರುವ ಮೌಡ್ಯತೆ ಮತ್ತು ಅಂಧಕಾರ ತಿದ್ದುವ ಕಾರ್ಯ ಮಾಡಿದರು ಎಂದರು.ಕುಳುವ ಸಮಾಜ ಶೈಕ್ಷಣಿಕ, ರಾಜಿಕೀಯ, ಆರ್ಥಿಕವಾಗಿ ಹಿಂದುಳಿದಿದೆ.ಸರ್ಕಾರದ ಯೋಜನಗಳನ್ನು ಸದ್ಭಾಳಕೆ ಮಾಡಿಕೊಂಡು ಎಲ್ಲ ರಂಗದಲ್ಲೂ ಮುನ್ನಡೆಯಬೇಕು ಎಂದು ಹೇಳಿದರು

ಇದೆ ವೇಳೆ ಕುಳುವ ಸಮಾಜದ ಹಿರಿಯರಿಗೆ ಸನ್ಮಾನಿಸಲಾಯಿತು.ಈ ಸಂಧರ್ಭದಲ್ಲಿ ಕುಳುವ ಸಮಾಜದ ತಾಲ್ಲೂಕು ಅಧ್ಯಕ್ಷ ಮೋಹನ್ ಕುಮಾರ್, ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಸಮಾಜ ಬಾಂಧವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments