ಚಿಕ್ಕಮಗಳೂರು : ಮನೆಯಲ್ಲಿ ಮಕ್ಕಳನ್ನ ನೋಡಿಕೊಳ್ಳೋ ಪೋಷಕರೇ ಎಚ್ಚರ ಸಣ್ಣದ್ರಲ್ಲಿ ಮುಗಿದೋಯ್ತು ಸಂತೋಷ ದೊಡ್ಡದ್ದಾದ್ರೆ ಕಥೆ ಏನು ಮಕ್ಕಳನ್ನ ಏಕಾಂಗಿಯಾಗಿ ಮನೆಯೊಳಗೆ ಬಿಡುವವರು ಈ ಸ್ಟೋರಿ ಕಡೆ ಗಮನಹರಿಸಿ
ಹೌದು .. ಚಿಕ್ಕಮಗಳೂರು ತಾಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ಮನೆಯೊಳಗೆ 11 ತಿಂಗಳ ಮಗುವನ್ನು ಬಿಟ್ಟು ಹೊರಗೆ ತಾಯಿ ಕೆಲಸಮಾಡುತ್ತಿದ್ದರು. ಈ ವೇಳೆ ಒಳ ಭಾಗದಿಂದ ಬಾಗಿಲು ಲಾಕ್ ಮಾಡಿಕೊಂಡ 11 ತಿಂಗಳ ಮಗು ಆಗ ಮನೆ ಒಳಗೆ ಮಗು, ಮನೆಯ ಹೊರಗೆ ತಾಯಿ, ಕಿಟಕಿ ಬಳಿ ಮಗು ಕಂಡು ತಾಯಿ ಕಂಗಾಲಾಗಿದ್ದು ಒಬ್ಬಂಟಿಯಾಗಿ ಕಿರುಚಿಕೊಂಡ ಮಗು, ತಾಯಿಯ ರೋಧನೆ ಎಂಥವರ ಮನಕಲಕುವಂತಾಗಿತ್ತು.
ಈ ವೇಳೆ ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಹೈಡ್ರಾಲಿಕ್ ಕಟರ್ ನಿಂದ ಕಿಟಕಿಯನ್ನ ಕಟ್ ಮಗು ರಕ್ಷಣೆ ಮಾಡಲಾಗಿದ್ದು ಮಗುವನ್ನು ಹೊರಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ತಾಯಿಗೆ ಹೋದ ಜೀವ ಮತ್ತೆ ಬಂದಂತಾಗಿದೆ. ದೇವರ ಹಾಗೆ ಬಂದಿದ್ದೀರಿ ಎಂದು ತಾಯಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾಳೆ.
