Monday, February 9, 2026
Homeಜಿಲ್ಲಾಸುದ್ದಿಶೃಂಗೇರಿ ರೋಟರಿ ಕ್ಲಬ್ ವತಿಯಿಂದ ಜನರಿಗೆ ಅರಿವು ಮೂಡಿಸಲು ರಸ್ತೆ ಸುರಕ್ಷತಾ ಅಭಿಯಾನ!

ಶೃಂಗೇರಿ ರೋಟರಿ ಕ್ಲಬ್ ವತಿಯಿಂದ ಜನರಿಗೆ ಅರಿವು ಮೂಡಿಸಲು ರಸ್ತೆ ಸುರಕ್ಷತಾ ಅಭಿಯಾನ!

ಶೃಂಗೇರಿ ರೋಟರಿ ಕ್ಲಬ್ ಇವರ ವತಿಯಿಂದ ರೋಟರಿ ಜಿಲ್ಲೆ 3182 ಜಿಲ್ಲಾ ಯೋಜನೆಯಾದ ರಸ್ತೆ ಸುರಕ್ಷತಾ (ROAD SAFETY) ಅಭಿಯಾನ ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

ಹೌದು .. ಕಾರ್ಯಕ್ರಮದಲ್ಲಿ ಶೃಂಗೇರಿ ರೋಟರಿ ಕ್ಲಬ್ ಅಧ್ಯಕ್ಷರಾದ ಸುಬ್ರಮಣ್ಯ ಆಂಬಲವನೆ ಅತಿಥಿಗಳನ್ನು ವಿವಿಧ ಇಲಾಖೆ ಗಣ್ಯರನ್ನು ಹಾಗೂ ಸಂಘ ಸಂಸ್ಥೆಗಳ ಅಧ್ಯಕ್ಷರನ್ನು ಸ್ವಾಗತಿಸಿ ಮಾತನಾಡಿದ ಅವರು, ಎಲ್ಲಾ ವಾಹನ ಚಾಲಕರು ಸುರಕ್ಷಿತವಾಗಿ ವಾಹನಗಳನ್ನು ಚಾಲನೆ ಮಾಡಬೇಕು ಹಾಗೆ ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಜನರಿಗೆ ತಿಳಿಸಿದರು.

ಹಾಗೆ ತಾಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿ ಸುದೀಪ್, ASI ಮೋಹನ್ ರಾಜ್ ಇವರು ʼ DRIVE SAFE- SAVE LIFEʼ ಎಂಬ ಸ್ಟಿಕರ್ ಅನ್ನು ವಾಹನಗಳಿಗೆ ಅಂಟಿಸುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು.

ಈ ವೇಳೆ ರೋಟರಿ ಕಾರ್ಯದರ್ಶಿ ಪ್ರಿಯದರ್ಶಿನಿ ಹೆಗ್ಡೆ, ಇನ್ನರ್ವೀಲ್ ಸಂಸ್ಥೆಯ ಅಧ್ಯಕ್ಷರಾದ ಮಂಜುಳಾ ಸುಬ್ರಮಣ್ಯ, ರೋಟ್ರಾಕ್ಟ್ ಅಧ್ಯಕ್ಷರಾದ ಐಶ್ವರ್ಯ, ಲಯನ್ಸ್ ಸಂಸ್ಥೆಯ ಅಧ್ಯಕ್ಷರಾದ ಧರ್ಮಪ್ಪ ಗೌಡ್ರು, ಜೆ ಸಿ ಐ ಅಧ್ಯಕ್ಷರಾದ ಅಶೋಕ್, ಜೆಸಿಬಿಎಮ್ ಕಾಲೇಜು ಪ್ರಾಂಶುಪಾಲರಾದ ಸ್ವಾಮಿ, ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾದ ವೇಣುಗೋಪಾಲ್, ವಿದ್ಯಾರಣ್ಯಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪ್ರವೀಣ್ ಪೂಜಾರಿ, ಡಾ. ಅಣ್ಣಾದೊರೆ , ತ್ಯಾಗರಾಜ್ ಎಚ್ ಎಲ್, ರಮೇಶ್ ಶೂನ್ಯ, ರೋಟರಿ ಸಂಸ್ಥೆಯ ಸದಸ್ಯರಾದ ಸಿದ್ದಪ್ಪ ಹೆಚ್ಎಸ್, ನಟೇಶ್ ಎಚ್ ಎಸ್, ಜಗದೀಶ್ ಹೆಗಡೆ, ವೆಂಕಟೇಶ್ ಕೆಎಸ್, ಶ್ರೀನಿವಾಸ್ ಎಚ್, ಸುರೇಶ್ ಎಸ್ ಎ, ವೇಣು ಮಾಧವ ನಾಯಕ್, ನಾಗೇಶ್ ಕೆ ಸಿ, ಮಹೇಶ್ ಡಿ, ಸೌಮ್ಯ ವಿಜಯ್ ಕುಮಾರ್, ಪೂರ್ಣಿಮಾ ಸಿದ್ದಪ್ಪ, ನವೀನ ಗೌಡ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!