Saturday, August 8, 2026
Homeಜಿಲ್ಲಾಸುದ್ದಿಸಕಲೇಶಪುರ: ಸಂಪೂರ್ಣ ಗುಂಡಿಮಯವಾಗಿರುವ ಅಗನಿ ರಸ್ತೆ: ದುರಸ್ಥಿಗೆ ಗ್ರಾಮಸ್ಥರ ಒತ್ತಾಯ!

ಸಕಲೇಶಪುರ: ಸಂಪೂರ್ಣ ಗುಂಡಿಮಯವಾಗಿರುವ ಅಗನಿ ರಸ್ತೆ: ದುರಸ್ಥಿಗೆ ಗ್ರಾಮಸ್ಥರ ಒತ್ತಾಯ!

Telegram Group
Join Now

ಸಕಲೇಶಪುರ: ಹಾನುಬಾಳು ಹೋಬಳಿಯ ದೇವಾಲದಕೆರೆ ಮುಖ್ಯ ರಸ್ತೆಯಿಂದ ಅಗನಿ ಹೋಗುವ ರಸ್ತೆ ಸಂಪೂರ್ಣ ಹಾಳಾಗಿದ್ದು ಸಾರ್ವಜನಿಕರ ಸುಗಮ ಸಂಚಾರಕ್ಕೆ ತಕ್ಷಣ ದುರಸ್ಥಿಗೊಳಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರವಾಸಿಗರ ಸ್ವರ್ಗ ಸುಂದರ ಪ್ರವಾಸಿ ತಾಣವಾದ ಅಗನಿ ಗುಡ್ಡಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತೇವೆ. ಅಗನಿ ಊರಿನ ರಸ್ತೆಯ ಸ್ಥಿತಿಯಂತು ಹದಗೆಟ್ಟು ಹಾಗೆ ಇಲ್ಲಿ ಮಳೆ ಬಂದರೆ ಸಾಕು ಎಲ್ಲಂದರಲ್ಲಿಬೃಹತ್‌ ಹೊಂಡಗಳಲ್ಲಿ ನೀರು ತಂಬಿ ಸಾರ್ವಜನಿಕರಿಗೆ ಸಂಚರಿಸಲು ತೊಂದರೆಯಾಗುತ್ತಿದೆ.

ಪ್ರವಾಸಿ ತಾಣವಾದ ಅಗನಿಯಲ್ಲಿ ಸುಮಾರು ಎಂಟು ರೆಸಾರ್ಟ್‌ ಗಳು ಇದ್ದು ಇಪ್ಪತ್ತಕ್ಕೂ ಹೆಚ್ಚು ಹೋಂ ಸ್ಟೇಗಳು ಇದ್ದಾವೆ. ಸ್ಥಳಿಯರುಗೆ ಹಾಗೂ ಯುವಕರಿಗೆ ಎಷ್ಟೋ ಉದ್ಯೋಗಗಳು ಇಲ್ಲಿ ಸಿಕ್ಕಿದೆ. ಆದರೂ ಈ ಗ್ರಾಮದಲ್ಲಿ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲದೇ ಕಷ್ಟಪಡುತ್ತಿದ್ದು ಇಲ್ಲಿ ಸರಿಯಾದ ರಸ್ತೆ ವ್ಯವಸ್ಥೆ ಮಾಡಿಕೊಡಲು ಅಲ್ಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments