Saturday, August 8, 2026
Homeಜಿಲ್ಲಾಸುದ್ದಿಶೃಂಗೇರಿ, ಕೊಪ್ಪ ಎನ್.‌ ಆರ್.‌ ಪುರ ಭಾಗದಲ್ಲಿ ಕಾಡಾನೆಗಳ ಹಾವಳಿ: ಬೇರೆಡೆ ಸ್ಥಳಾಂತರಿಸಲು ಅರಣ್ಯ ಸಚಿವರಿಗೆ...

ಶೃಂಗೇರಿ, ಕೊಪ್ಪ ಎನ್.‌ ಆರ್.‌ ಪುರ ಭಾಗದಲ್ಲಿ ಕಾಡಾನೆಗಳ ಹಾವಳಿ: ಬೇರೆಡೆ ಸ್ಥಳಾಂತರಿಸಲು ಅರಣ್ಯ ಸಚಿವರಿಗೆ ಶಾಸಕರ ಪತ್ರ!

Telegram Group
Join Now

ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ, ಎನ್.‌ ಆರ್.‌ ಪುರ, ಶೃಂಗೇರಿ ತಾಲೂಕಿನ ವ್ಯಾಪ್ತಿಯಲ್ಲಿ ಹಾವಳಿ ನೀಡುತ್ತಿರುವ ಕಾಡಾನೆಗಳನ್ನ ಹಿಡಿದು ಬೇರೆಡೆ ಸ್ಥಳಾಂತರಿಸಲು ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಶೃಂಗೇರಿ ಶಾಸಕ ರಾಜೇಗೌಡ ಅವರು ಮನವಿ ಮಾಡಿದ್ದಾರೆ.

ಎನ್.‌ ಆರ್.‌ ಪುರ ತಾಲೂಕಿನ ಕಾನೂರು ಗ್ರಾಮ ಪಂಚಾಯಿತಿಯ ಸಂಕ್ಸೆ ಗುಡ್ಡೆಹಳ್ಳ ವ್ಯಾಪ್ತಿಯಲ್ಲಿ ಒಂದು ಒಂಟಿ ಸಲಗ ಹಾಗೂ ಕೊಪ್ಪ ತಾಲ್ಲೂಕು ಹಿರೇಗದ್ದೆ ವ್ಯಾಪ್ತಿಯ ತುಪ್ಪೂರು, ಸಿಗಸೆ, ಸರಗಳಲೆ, ತುದಿಹಡ್ಲು, ಆಡುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಗರಮಕ್ಕಿ, ಕುಂಜಳ್ಳಿ, ಬಂಡೀಹೊಳೆ, ಶ್ರೀಪತಿಖಾನ್ ಎಸ್ಟೆಟ್, ಬಿ. ಕಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದುಗೋಣಿ, ಸಿ.ಕೆ, ಬಾಳೆಹೊನ್ನೂರು

ಹಾಗೆ ಕರ್ಕೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಬ್ಬೂರು, ಮೇಲ್ಪಲ್, ಕರ್ಕೇಶ್ವರ, ಎಲೇಮಡ್ಲು, ಸಿ.ಆರ್.ಎಸ್, ತಲುವಾನೆ, ಶಾಂತಿಪುರ, ಮಕ್ಕಿಕೊಪ್ಪ, ಅಗಳಗಂಡಿ ಮತ್ತು ಕೊಗ್ರೆ,

ಶೃಂಗೇರಿ ತಾಲ್ಲೂಕಿನ ಬೇಗಾರು ಗ್ರಾಮ ಪಂಚಾಯಿತಿ ನೀಲಂದೂರು, ಹೆಗ್ಗರಸು, ಹುಲುಗಾರು, ಧರೇಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಕ್ಕಿವಳ್ಳಿ ಹಾಗೂ ಮತ್ತಿತ್ತರ ಗ್ರಾಮಗಳಲ್ಲಿ ಒಟ್ಟು 5 ಕಾಡಾನೆಗಳನ್ನು ಹಿಡಿದು ಬೇರೆಡೆ ಸ್ಥಳಾಂತರಿಸಲು ಅರಣ್ಯ ಸಚಿವರಿಗೆ ಮನವಿ ಮಾಡಿದ್ದು, ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕ ರಾಜೇಗೌಡ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments